ಕಳೆದ ವರ್ಷ ಕಚ್ಚಾ ತೈಲ ಬೆಲೆ ಶೇಕಡ 15ರಷ್ಟು ಇಳಿಕೆಯಾದ ಕಾರಣ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ. ಜುಲೈ 10 ರಂದು ಕಚ್ಚಾ ತೈಲವು ಶೇಕಡ 35ರಷ್ಟು ಅಗ್ಗವಾಗಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ.
ತೈಲ ಮಾರುಕಟ್ಟೆ ಕಂಪನಿಗಳು ಕೊನೆಯದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏಪ್ರಿಲ್ 2022 ರಲ್ಲಿ ಕಡಿಮೆ ಮಾಡಿದೆ. ಅದಾದ ಬಳಿಕ ಈವರೆಗೂ ದರವನ್ನು ಪರಿಷ್ಕರಣೆ ಮಾಡಲಾಗಿಲ್ಲ. ಕಳೆದ ಹಲವಾರು ದಿನಗಳಿಂದ ಇಂಧನ ದರವು ಸ್ಥಿರವಾಗಿದೆ. ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡಾ ಪೆಟ್ರೋಲ್ ಡಿಸೇಲ್ ದರದ ಇಳಿಕೆಯ ಬಗ್ಗೆ ಸುಳಿವು ನೀಡಿದ್ದರು.

ತೈಲ ಕಂಪನಿಗಳಿಗೆ ಮೂರು ಪಟ್ಟು ಲಾಭ ಗಳಿಕೆ
ಪ್ರಸ್ತುತ, ದೇಶದ ಬಹುತೇಕ ಭಾಗಗಳಲ್ಲಿ ಪೆಟ್ರೋಲ್ 100 ರೂಪಾಯಿಗಿಂತ ಹೆಚ್ಚಳವಾಗಿದೆ. ಡೀಸೆಲ್ ಲೀಟರ್‌ಗೆ 90 ರೂಪಾಯಿ ಆಗಿದೆ. ಈ ನಡುವೆ ಪೆಟ್ರೋಲಿಯಂನ ರಿಟೇಲ್ ವ್ಯಾಪಾರವನ್ನು ಮಾಡುತ್ತಿರುವ ಮೂರು ಸರ್ಕಾರಿ ಕಂಪನಿಗಳಾದ ಇಂಡಿಯನ್ ಆಯಿಲ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಲಾಭವಯ ಸುಮಾರು ಮೂರು ಪಟ್ಟು ಅಧಿಕವಾಗಿದೆ. ಅದಕ್ಕೆ ಮುಖ್ಯ ಕಾರಣ ಈ ಕಂಪನಿಗಳು ಪ್ರಸ್ತುತ ಪ್ರತಿ ಲೀಟರ್‌ಗೆ ಸುಮಾರು 10 ರೂಪಾಯಿ ಸಂಪಾದಿಸುತ್ತದೆ.
ಕ್ರಿಸಿಲ್ ಏನು ಹೇಳುತ್ತದೆ?
ಐಒಸಿಎಲ್, ಎಚ್‌ಸಿಎಲ್ ಮತ್ತು ಬಿಪಿಸಿಎಲ್ ಈ ವರ್ಷ 1 ಲಕ್ಷ ಕೋಟಿ ರೂಪಾಯಿ ಲಾಭವನ್ನು ಗಳಿಸಲಿದೆ. ಶುಕ್ರವಾರ ಬಂದ ಫಲಿತಾಂಶಗಳ ಪ್ರಕಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇಂಡಿಯನ್ ಆಯಿಲ್ 13,750 ರೂಪಾಯಿಗಳಷ್ಟು ಲಾಭವನ್ನು ಗಳಿಸಿದೆ. ಕಳೆದ ವರ್ಷ ಈ ಮೂರು ತಿಂಗಳಲ್ಲಿ 1,992 ಕೋಟಿ ರೂಪಾಯಿಯಷ್ಟು ನಷ್ಟವಾಗಿತ್ತು.
ಐಒಸಿಎಲ್, ಎಚ್‌ಸಿಎಲ್ ಮತ್ತು ಬಿಪಿಸಿಎಲ್‌ಗಳ ಲಾಭವು 2023-24 ರಲ್ಲಿ 1 ಲಕ್ಷ ಕೋಟಿ ರೂಪಾಯಿಗಳನ್ನು ಮೀರುತ್ತಿದೆ. 2017 ಮತ್ತು 2022 ರ ನಡುವೆ, ಈ ಕಂಪನಿಗಳು ವಾರ್ಷಿಕವಾಗಿ ಸರಾಸರಿ 60 ಸಾವಿರ ಕೋಟಿ ರೂಪಾಯಿ ಲಾಭ ಗಳಿಸಿವೆ. 2022-23ರ ವೇಳೆಗೆ ಅವರ ಒಟ್ಟು ಲಾಭವು 33,000 ಕೋಟಿ ರೂಪಾಯಿಗಳಿಂದ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಇಂಧನ ಬೆಲೆ ಕಡಿಮೆ ಮಾಡಲು ತೈಲ ಕಂಪನಿಗಳಿಗಿದೆ ಅವಕಾಶ
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞರಾದ ಉಪಾಸನಾ ಭಾರದ್ವಾಜ್ ಪ್ರಕಾರ ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 10 ರೂಪಾಯಿ ಲಾಭವನ್ನು ಗಳಿಸುತ್ತಿದೆ. ಈ ದೃಷ್ಟಿಕೋನದಿಂದ, ನಾವು ನೋಡಿದಾಗ ಈ ಸಂಸ್ಥೆಗಳು ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಇಳಿಕೆ ಮಾಡಲು ಸಾಕಷ್ಟು ಅವಕಾಶಗಳು ಇದೆ. ಹೀಗೆ ದರ ಇಳಿಕೆ ಮಾಡುವುದರಿಂದ ಆರ್ಥಿಕತೆಗೆ ಲಾಭವಾಗುತ್ತದೆ ಎಂದು ಮಾಧ್ಯಮ ವರದಿ ಮಾಡಿದೆ.
ಸಾರಿಗೆಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ಪೂರೈಸಿದರೆ, ದೇಶದಲ್ಲಿ ಇಂಧನ ಬೆಲೆಗಳು ಪ್ರತಿ ಲೀಟರ್‌ಗೆ 15 ರೂಪಾಯಿಗೆ ಕಡಿಮೆಯಾಗಬಹುದು ಎಂದು ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 15 ರೂಪಾಯಿ ಆಗಿರುವುದು ಒಂದು ಕನಸಿನಂತೆ ಕಾಣುತ್ತದೆ. ಆದರೂ ಕೂಡಾ ಇಂಧನದ ಮೇಲಿನ ಅವಲಂಬನೆ ಕಡಿಮೆಯಾದರೆ, ಜನರು ತಮ್ಮ ವಾಹನಗಳಿಗೆ ವಿದ್ಯುತ್ ಹಾಗೂ ಎಥೆನಾಲ್‌ಗಳನ್ನು ಬಳಕೆ ಮಾಡಲು ಪ್ರಾರಂಭಿಸಿದರೆ, ಇದರ ಮೇಲೆ ಹೆಚ್ಚು ಅವಲಂಬಿತರಾದರೆ ಈ ಪರಿಸ್ಥಿತಿ ನಿಜವಾಗಬಹುದು ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.


Click it and Unblock the Notifications