ಡಿಕೆಶಿಗೆ ಪರಂ ಪಂಚ್? ರಾಮನಗರ ಆಯ್ತು, ಇದೀಗ ತುಮಕೂರು ಸರದಿ! ಹೌದು, ರಾಮನಗರ ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣಗೊಂಡಿದೆ. ಅದೇ ರೀತಿ ಕಲ್ಪತರು ನಾಡು ತುಮಕೂರು ಸಹ ಬೆಂಗಳೂರು ಉತ್ತರ ಜಿಲ್ಲೆಯಾಗುವ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸುಳಿವು ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಟಕ್ಕರ್ ಕೊಟ್ಟಿದ್ದಾರೆ. ಹಾಗಿದ್ರೆ, 'ಬೆಂಗಳೂರು ಉತ್ತರ' ಜಿಲ್ಲೆಯಾಗುತ್ತಾ ತುಮಕೂರು? ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು,ಬೆಂಗಳೂರು ಮಹಾನಗರದ ಜೊತೆಗೆ ತುಮಕೂರು ಜಿಲ್ಲೆಯನ್ನು ಒಗ್ಗೂಡಿಸುವಂತಹ ಕಾರ್ಯ ಶುರುವಾಗಲಿದೆ. ಮುಂದಿನ ದಿನಮಾನಗಳಲ್ಲಿ 'ಬೆಂಗಳೂರು ಉತ್ತರ' ಜಿಲ್ಲೆಯನ್ನಾಗಿ ಮಾರ್ಪಡಿಸುವ ಸಿದ್ಧತೆಗಳು ನಡೆದಿವೆ. ಸ್ವತಃ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಸುಳಿವು ಕೊಟ್ಟಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಅದರಂತೆ ನಮ್ಮ ತುಮಕೂರು ಕೂಡ ಶರವೇಗದಂತೆ ಬೆಳವಣೆಯನ್ನು ಕಾಣಬೇಕು. ಆದ್ದರಿಂದ ತುಮಕೂರು ಜಿಲ್ಲೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಬೇಕೆಂಬ ಚಿಂತನೆ ಸಹ ಇದೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನ್ನು ಸಲ್ಲಿಸಿದ್ದಾರೆ.
ಮುಂದಿನ ದಿನಮಾನಗಳಲ್ಲಿ ಬೆಂಗಳೂರನ್ನು ಅಕ್ಕಪಕ್ಕದಲ್ಲಿ ಇರುವ ಜಿಲ್ಲೆಗಳಾದ ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರದ ವರೆಗೂ ವಿಸ್ತರಣೆಯನ್ನು ಮಾಡಬಹುದು ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲೆ ಎಂದರೆ ಯಾರಿಗೂ ಅರ್ಥ ಆಗುವುದಿಲ್ಲ
ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಕರೆಯುವುದಕ್ಕೆ ವ್ಯತ್ಯಾಸವಿದೆ. ನ್ಯೂಯಾರ್ಕ್‌ನಲ್ಲಿರುವವರಿಗೆ 'ಬೆಂಗಳೂರು ಉತ್ತರ' ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ಆದರೆ ತುಮಕೂರು ಜಿಲ್ಲೆ ಎಂದರೆ ಎಲ್ಲೋ ಇದೆ ಎಂಬ ಭಾವನೆ ಬರುತ್ತದೆ. ಹೀಗಾಗಿ ತುಮಕೂರು ಜಿಲ್ಲೆಯ ಹೆಸರನ್ನು ಒದಲಾವಣೆ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ತುಮಕೂರು ಬೆಂಗಳೂರು ವ್ಯಾಪ್ತಿಗೆ ವಿಸ್ತರಣೆ
ಬೆಂಗಳೂರು ನಗರವು ಈಗಾಗಲೇ ನೆಲಮಂಗಲದ ಹೊರವಲಯದವರೆಗೂ ವಿಸ್ತರಿಸಿದೆ. ನೆಲ ಮಂಗಲದಿಂದ ಸುಮಾರು 30 ಕಿಲೋಮೀಟರ್ ಪ್ರಯಾಣವನ್ನು ಮಾಡಿದ್ದರೆ ತುಮಕೂರಿಗೆ ತಲುಪಬಹುದು.ಹೀಗಾಗಿ ನಗರದ ವ್ಯಾಪ್ತಿಗೆ ವಿಸ್ತರಿಸುವುದು ಅನುಕೂಲಕರವಾಗುತ್ತದೆ ಎಂದು ಅವರು ಹೇಳಿದ್ದಾರೆ.
ತುಮಕೂರು ನಗರವನ್ನು ಬೆಂಗಳೂರು ವ್ಯಾಪ್ತಿಗೆ ವಿಸ್ತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಯಾಕೆಂದರೆ ಈಗಾಗಲೇ 14 ಗ್ರಾಮ ಪಂಚಾಯಿತಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೂಳ್ಳುತ್ತಾರೆ.ಇದರಿಂದ ನಗರ ಅಭಿವೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಯಾವ ಸ್ವರೂಪ?
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಗೊಂಡಿದೆ.ಸರ್ಕರ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದೆ.ರಾಮನಗರ ಬೆಂಗಳೂರು ದಕ್ಷಿಣ ಎಂದ ಸ್ವರೂಪ ಬದಲಾಗಿದೆ ಇದಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಒಳ್ಳೆಯ ಯೋಜನೆ ರೂಪಿಸಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿದರು. ಅದೇ ರೀತಿ ತುಮಕೂರು ಸಹ ಮರುನಾಮಕರಗೊಂಡು ಬೆಂಗಳೂರು ಸ್ವರೂಪವಾಗಿ ಬದಲಾಗಬೇಕು ಎಂದು ಅದಕ್ಕೆ ಚಿಂತನೆಯನ್ನು ಮಾಡುತ್ತಿದ್ಧೇವೆ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಕ್ಯಾತ್ಸಂದ್ರ ಬಳಿ ಸ್ವಾಗತ ಕಮಾನು ನಿರ್ಮಾಣಕ್ಕೆ ಮನವಿ
ತುಮಕೂರು ಜಿಲ್ಲೆಯನ್ನು ಗುರುತಿಸಲು ಸ್ವಾಗತ ಕಮಾನು ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಮನವಿಯನ್ನು ಮಾಡಿದ್ದಾರೆ. ಈ ಯೋಜನೆಯ ವೆಚ್ಚಕ್ಕಾಗಿ 5 ಕೋಟಿ ಹಣ ನೀಡಲಾಗಿದೆ.ಸ್ವಾಗತ ಕಮಾನುಗಳನ್ನು ಕ್ಯಾತ್ಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನಿರ್ಮಾಣ ಮಾಡುವುದಕ್ಕೆ ಯೋಜನೆಯನ್ನು ರೂಪಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ಮತ್ತು ತುಮಕೂರು ಜಿಲ್ಲೆಯ ಸಂಸದ ವಿ.ಸೋಮಣ್ಣ ಅವರಿಗೆ ಕೇಂದ್ರದ ಅನುಮತಿಯನ್ನು ಕೊಡಿಸಬೇಕು ಎಮದು ಮನವಿಯನ್ನು ಮಾಡಿದ್ದೇವೆ ಅನುಮತಿ ಸಿಕ್ಕರೆ ಆರು ತಿಂಗಳಲ್ಲಿ ಸ್ವಾಗತ ಕಮಾನು ನಿರ್ಮಾಣ ಕಾರ್ಯ ಮುಗಿಯುತ್ತದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications