ಇಂದು ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಪ್ರಯುಕ್ತವಾಗಿ ಷೇರುಪೇಟೆ ರಜೆ ಇರುತ್ತದೆ. ಗಣೇಶ ಚತುರ್ಥಿಯ ಹಿನ್ನೆಲೆ ಆ ದಿನದಂದು ಎನ್‌ಎಸ್‌ಇ ಮತ್ತು ಬಿಎಸ್‌ಇ ಎರಡೂ ಷೇರು ವಿನಿಮಯ ಕೇಂದ್ರಗಳು ಮುಚ್ಚಿರುತ್ತವೆ. ಈಕ್ವಿಟಿ, ಈಕ್ವಿಟಿ ಪ್ರಾಡೆಕ್ಟ್‌ಗಳು, ಕರೆನ್ಸಿ ಉತ್ಪನ್ನಗಳು, ಬಡ್ಡಿ ದರದ ಉತ್ಪನ್ನಗಳು ಹಾಗೂ ಎಸ್‌ಎಲ್‌ಬಿ ವಿಭಾಗಗಳು ಸೆಪ್ಟೆಂಬರ್ 19 ರಂದು ಲಭ್ಯವಿರುವುದಿಲ್ಲ.
ಆದ್ದರಿಂದ, ಈಕ್ವಿಟಿ ವಿಭಾಗ, ಈಕ್ವಿಟಿ ಉತ್ಪನ್ನ ವಿಭಾಗ ಮತ್ತು ಎಸ್‌ಎಲ್‌ಬಿ ವಿಭಾಗದಲ್ಲಿ ವಹಿವಾಟು ಮಂಗಳವಾರ ಮುಚ್ಚಿರುತ್ತದೆ. ವಾಸ್ತವವಾಗಿ, 2023 ರ ಮಾರುಕಟ್ಟೆ ರಜಾದಿನಗಳ ಸಂಪೂರ್ಣ ಪಟ್ಟಿಯ ಪ್ರಕಾರ, ಕರೆನ್ಸಿ-ಡೆರಿವೇಟಿಂಗ್ ವಿಭಾಗದಲ್ಲಿಯೂ ಇಂದು ರಜೆ ಇರುತ್ತದೆ. ಮಂಗಳವಾರದಂದು ಗಣೇಶ ಚತುರ್ಥಿ ಹಬ್ಬದ ಕಾರಣ ಸರಕು ಉತ್ಪನ್ನಗಳ ವಿಭಾಗ ಮತ್ತು ಎಲೆಕ್ಟ್ರಾನಿಕ್ ಗೋಲ್ಡ್ ರೆಸಿಪ್ಟ್ಸ್ (ಇಜಿಆರ್) ವಹಿವಾಟಿನ ಮೇಲೂ ಪರಿಣಾಮ ಬೀರಲಿದೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದಿನದ ವಹಿವಾಟಿನ ಸಮಯದಲ್ಲಿ ಸರಕು ಉತ್ಪನ್ನ ವಿಭಾಗದಲ್ಲಿ ವ್ಯಾಪಾರವು ಇರುವುದಿಲ್ಲ. ಆದರೆ ಸಂಜೆಯ ಸೆಷನ್‌ಗಾಗಿ 5 ಗಂಟೆಯ ಬಳಿಕ ವಹಿವಾಟು ಆರಂಭವಾಗುತ್ತದೆ. ಆದ್ದರಿಂದ, ಕಮೋಡಿಟಿ ಸೆಗ್‌ಮೆಂಟ್ ವ್ಯಾಪಾರವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಹಿವಾಟು ನಡೆಸುವುದಿಲ್ಲ. ಆದರೆ ಅದು ಸಂಜೆ 5 ಗಂಟೆಯಿಂದ ರಾತ್ರಿ 11:30 ರವರೆಗೆ ವಹಿವಾಟಿಗೆ ತೆರೆದಿರುತ್ತದೆ.
ಸೆಪ್ಟೆಂಬರ್ 2023 ರಲ್ಲಿ ಗಣೇಶ ಚತುರ್ಥಿ ದಿನ ಮಾತ್ರ ಸ್ಟಾಕ್ ಮಾರುಕಟ್ಟೆ ರಜೆ ಇರಲಿದೆ. ಮುಂದಿನ ಸ್ಟಾಕ್ ಮಾರುಕಟ್ಟೆ ರಜಾದಿನವು 2 ನೇ ಅಕ್ಟೋಬರ್ 2023 ರಂದು ಮಹಾತ್ಮ ಗಾಂಧಿ ಜಯಂತಿ ದಿನ ಇರಲಿದೆ. 2023 ರ ಆಗಸ್ಟ್ 15 ರಂದು ರಾಷ್ಟ್ರದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಕಾರಣ ಸ್ಟಾಕ್ ಮಾರುಕಟ್ಟೆ ರಜಾದಿನವಾಗಿತ್ತು.
ಸೋಮವಾರ ಬಿಎಸ್‌ಇ ಮತ್ತು ಎನ್‌ಎಸ್‌ಇ ಹೇಗೆ ಕಾರ್ಯನಿರ್ವಹಿಸಿದೆ?
ಸೆಪ್ಟೆಂಬರ್ 18 ರಂದು, ಸೆನ್ಸೆಕ್ಸ್ 241.79 ಪಾಯಿಂಟ್‌ಗಳು ಅಥವಾ ಶೇಕಡ 0.36 ರಷ್ಟು ಕುಸಿದು 67,596.84 ಕ್ಕೆ ವಹಿವಾಟು ಸ್ಥಗಿತಗೊಳಿಸಿದೆ. ನಿಫ್ಟಿ 59 ಪಾಯಿಂಟ್‌ಗಳು ಅಥವಾ ಶೇಕಡ 0.29 ರಷ್ಟು ಇಳಿದು 20,133.30 ಕ್ಕೆ ಸ್ಥಿರವಾಗಿದೆ. ನಿಫ್ಟಿಯಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್, ಜಿಯೋ ಫೈನಾನ್ಶಿಯಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಅದಾನಿ ಪೋರ್ಟ್ಸ್ ಸೇರಿದಂತೆ ಹಲವು ಸಂಸ್ಥೆಗಳು ನಷ್ಟವನ್ನು ಕಂಡಿದೆ.
ಟೈಟಾನ್ ಕಂಪನಿ, ಎಂ & ಎಂ, ಬಿಪಿಸಿಎಲ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಲಾಭ ಗಳಿಸಿದವು. ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇಕಡ 3.4 ರಷ್ಟು, ವಿದ್ಯುತ್, ಆಟೋ ಮತ್ತು ಎಫ್‌ಎಂಸಿಜಿ ಸೂಚ್ಯಂಕಗಳು ಶೇಕಡ 0.5-.8 ರಷ್ಟು ಏರಿಕೆ ಕಂಡಿದೆ. ರಿಯಾಲಿಟಿ ಮತ್ತು ಲೋಹದ ಸೂಚ್ಯಂಕಗಳು ತಲಾ ಶೇಕಡ 1 ರಷ್ಟು ನಷ್ಟ ಕಂಡರೆ, ಬ್ಯಾಂಕ್, ಐಟಿ, ಫಾರ್ಮಾ ಮತ್ತು ಫಾರ್ಮಾ ತಲಾ ಶೇಕಡ 0.5 ರಷ್ಟು ಕುಸಿದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.0.25ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ.0.5ರಷ್ಟು ಕುಸಿದಿದೆ.


Click it and Unblock the Notifications