ಮಾರ್ಚ್ ಒಂದು ರಂದು ದೇಶವಾಸಿಗಳು ನಿರೀಕ್ಷಿಸುತ್ತಿರುವ ಬಹು ನಿರೀಕ್ಷಿತ ಸಿಹಿ ಸುದ್ದಿಯೊಂದ ಹೊರ ಬೀಳುವ ಸಾಧ್ಯತೆ ಇದೆ. ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಇಳಿಕೆ ಆಗುವ ಸಂಭವ ಇದೆ ಎಂದು ಸುದ್ದಿ ಸಂಸ್ಥೆ ಕೊಜೆನ್ಸಿಸ್ (Cogencis) ತಿಳಿಸಿದೆ.
ಗುಜರಾತ್ ಗ್ಯಾಸ್ ಕೈಗಾರಿಕಾ ಅನಿಲ ಬೆಲೆಯಲ್ಲಿ ಕಡಿತವನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. 2024 ರ ಆರಂಭದಿಂದ, ಅಮೇರಿಕನ್ ನೈಸರ್ಗಿಕ ಅನಿಲದ ಬೆಲೆಗಳು ಶೇಕಡಾ 24ರಷ್ಟು ಹೆಚ್ಚು ಕುಸಿದಿವೆ. ನೈಮ್ಯಾಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ, ಬೆಲೆಗಳು ಕಳೆದ ವಾರ 2 ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದು ಸೆಪ್ಟೆಂಬರ್ 2020 ರಿಂದ ಆದ ಕಡಿಮೆ ಮಟ್ಟವಾಗಿದೆ.

ಗುಜರಾತ್ ಗ್ಯಾಸ್ ಕೈಗಾರಿಕಾ ಸಂಸ್ಥೆ ಮಾರ್ಚ್ ಮೊದಲ ರಂದು ಗ್ಯಾಸ್ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಬಹುದು. ಪ್ರತಿ ಆರು ತಿಂಗಳಿಗೊಮ್ಮೆ ಅನಿಲದ ಬೆಲೆಗಳಲ್ಲಿ ಏರಿಳಿತವಾಗುತ್ತದೆ. ಏಕೆಂದರೆ ಅವುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಆಗ ಮಾತ್ರ ಕಂಪನಿಗಳು ಅವುಗಳ ಬೆಲೆಗಳನ್ನು ನಿರ್ಧರಿಸುತ್ತವೆ.
ಆದರೆ ಈಗ ಪ್ರತಿ ತಿಂಗಳು ಬೆಲೆ ನಿಗದಿಯಾಗತೊಡಗಿದೆ. ಸರ್ಕಾರ ಇದಕ್ಕಾಗಿ ಹೊಸ ಸೂತ್ರವನ್ನು ಜಾರಿಗೆ ತಂದಿದೆ. ಹೊಸ ಸೂತ್ರದ ಅಡಿಯಲ್ಲಿ, ದೇಶೀಯ ನೈಸರ್ಗಿಕ ಅನಿಲದ ಬೆಲೆಯನ್ನು ಈಗ ಭಾರತೀಯ ಕಚ್ಚಾ ತೈಲದ ಬೆಲೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ದೇಶೀಯ ನೈಸರ್ಗಿಕ ಅನಿಲದ ಬೆಲೆಯನ್ನು ವಿಶ್ವದ ನಾಲ್ಕು ದೊಡ್ಡ ಅನಿಲ ವ್ಯಾಪಾರ ಕೇಂದ್ರಗಳ ಬೆಲೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿತ್ತು. ಹೆನ್ರಿ ಹಬ್, ಅಲ್ಬನಿ, ನ್ಯಾಷನಲ್ ಬ್ಯಾಲೆನ್ಸಿಂಗ್ ಪಾಯಿಂಟ್ (ಯುಕೆ) ಮತ್ತು ರಷ್ಯಾದ ಅನಿಲ ಕಂಪನಿಗಳ ಮೇಲೆ ನಿರ್ಧರವಾಗುತ್ತಿತ್ತು. ಹೊಸ ಸೂತ್ರದಲ್ಲಿ, ದೇಶೀಯ ನೈಸರ್ಗಿಕ ಅನಿಲದ ಬೆಲೆ ಕಳೆದ ಒಂದು ತಿಂಗಳಿನಿಂದ ಭಾರತೀಯ ಕಚ್ಚಾ ತೈಲ ಬೆಲೆಯನ್ನು ಆಧರಿಸಿದೆ.

ಹೊಸ ಸೂತ್ರವನ್ನು ನಿರ್ಧರಿಸಲು ಸರ್ಕಾರವು ಅಕ್ಟೋಬರ್ 2022 ರಲ್ಲಿ ಕಿರಿತ್ ಪಾರಿಖ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಈ ಸೂತ್ರವನ್ನು ಸಿದ್ಧಪಡಿಸಿದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications