ನವದೆಹಲಿ, ಜೂನ್ 15: ಅದಾನಿ ಸಮೂಹ ಒಡೆತನದ ಅಂಬುಜಾ ಸಿಮೆಂಟ್ಸ್ ಕಂಪನಿಯೂ ಆಂದ್ರಪ್ರದೇಶ ಮೂಲದ ಪೆನ್ನಾ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ (PCIL) ಅನ್ನು 10,422 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ.
ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದ್ದು, ಪೆನ್ನಾ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ ಪ್ರವರ್ತಕ ಪಿ ಪ್ರತಾಪ್ ರೆಡ್ಡಿ ಮತ್ತು ಕುಟುಂಬದಿಂದ ಒಡೆತನದಲ್ಲಿರುವ ಪಿಸಿಐಎಲ್‌ನ 100% ಷೇರುಗಳನ್ನು ಖರೀದಿಸುವುದು ಕೂಡಾ ಈ ಒಪ್ಪಂದ ಭಾಗವಾಗಿದೆ.

ಅದಾನಿ ಗ್ರೂಪ್‌ನ ಭಾಗವಾಗಿರುವ ಕಟ್ಟಡ ಸಾಮಗ್ರಿಗಳ ತಯಾರಕ ಕಂಪನಿಯಾಗಿರುವ ಅಂಬುಜಾ ಸಿಮೆಂಟ್ ಇಂದು ಪೆನ್ನಾ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ (ಪಿಸಿಐಎಲ್) ಅನ್ನು 10,422 ಕೋಟಿ ರೂಪಾಯಿಗಳ ಎಂಟರ್‌ಪ್ರೈಸ್ ಮೌಲ್ಯದಲ್ಲಿ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಪ್ರಕಟಿಸಿದೆ.
ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, ಅಂಬುಜಾ ಸಿಮೆಂಟ್ಸ್ ಈ ಸ್ವಾಧೀನಕ್ಕೆ ಸಂಪೂರ್ಣವಾಗಿ ಆಂತರಿಕ ಸಂಚಯಗಳ ಮೂಲಕ ಹಣವನ್ನು ನೀಡುತ್ತದೆ ಎಂದು ವರದಿ ಮಾಡಿದೆ.
ಈ ಮಹತ್ವದ ಒಪ್ಪಂದದ ಕುರಿತು ಪ್ರತಿಕ್ರಿಯಿಸಿರುವ ಅಂಬುಜಾ ಸಿಮೆಂಟ್ಸ್‌ನ ಸಿಇಒ ಮತ್ತು ನಿರ್ದೇಶಕ ಅಜಯ್ ಕಪೂರ್, ಈ ಒಪ್ಪಂದವು ಕಂಪನಿಯ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.
"ಪಿಸಿಐಎಲ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ, ದಕ್ಷಿಣ ಭಾರತದಲ್ಲಿ ತನ್ನ ಮಾರುಕಟ್ಟೆ ಅಸ್ತಿತ್ವವನ್ನು ವಿಸ್ತರಿಸಲು ಮತ್ತು ಸಿಮೆಂಟ್ ಉದ್ಯಮದಲ್ಲಿ ಪ್ಯಾನ್-ಇಂಡಿಯಾ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಲು ಅಂಬುಜಾ ಸಿದ್ಧವಾಗಿದೆ" ಎಂದು ಕಪೂರ್ ತಿಳಿಸಿದ್ದಾರೆ.
ಪಿಸಿಐಎಲ್ ವಾರ್ಷಿಕವಾಗಿ 14 ಕೋಟಿ ಟನ್ (MTPA)ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಪ್ರಸ್ತುತ 10 MTPA ಪ್ರಸ್ತುತ ಉತ್ಪಾದಿಸುತ್ತಿದೆ. ಉಳಿದ 4 MTPA ಸಾಮರ್ಥ್ಯವು ಕೃಷ್ಣಪಟ್ಟಣಂ (2 MTPA) ಮತ್ತು ಜೋಧ್‌ಪುರದಲ್ಲಿ (2 MTPA) ನಿರ್ಮಾಣ ಹಂತದಲ್ಲಿದೆ. ಇದು ಮುಂದಿನ 6 ರಿಂದ 12 ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸ್ವಾದೀನದಿಂದಾಗಿ ಅದಾನಿ ಸಮೂಹದ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು ೮.೯ ಕೋಟಿ ಟನ್ ಗೆ ಹೆಚ್ಚಳವಾಗಲಿದೆ.
ಪೆನ್ನಾ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ ನ ಸಿಮೆಂಟ್ ರೈಲ್ವೇ ಸೈಡಿಂಗ್‌ಗಳನ್ನು ಹೊಂದಿದ್ದು ಸರಿಸುಮಾರು 90% ಸಮರ್ಥ ಸಾಗಣೆಗೆ ಸಹಾಯ ಮಾಡುತ್ತದೆ. ಇದಲ್ಲದೇ ಪೆನ್ನಾ ಸಿಮೆಂಟ್ ಹೆಚ್ಚುವರಿಯಾಗಿ, ಕೆಲವು ಸೌಲಭ್ಯಗಳನ್ನು ಹೊಂದಿದ್ದು, ಕ್ಯಾಪ್ಟಿವ್ ಪವರ್ ಪ್ಲಾಂಟ್‌ಗಳು ಮತ್ತು ತ್ಯಾಜ್ಯ ಶಾಖ ಚೇತರಿಕೆ ವ್ಯವಸ್ಥೆಗಳನ್ನು ಹೊಂದಿವೆ. ಜೋಧ್‌ಪುರ ಸ್ಥಾವರದಲ್ಲಿ ಹೆಚ್ಚುವರಿ ಕ್ಲಿಂಕರ್ ಕೂಡ ಇದ್ದು, ಇದು ಹೆಚ್ಚುವರಿ 3 MTPA ಸಿಮೆಂಟ್ ಗ್ರೈಂಡಿಂಗ್ ಸಾಮರ್ಥ್ಯ ಉಳ್ಳದ್ದಾಗಿದೆ. ಹೀಗಾಗಿ ಇದು ಒಟ್ಟು ಸಂಭಾವ್ಯ ಸಾಮರ್ಥ್ಯವನ್ನು 14 MTPA ಗಿಂತಲೂ ಹೆಚ್ಚಿಸುತ್ತದೆ.
ಈ ಸ್ವಾಧೀನದಿಂದಾಗಿ ದೇಶದ ಸಿಮೆಂಟ್ ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಪಾಲು ಶೇ. 2 ಮತ್ತು ದಕ್ಷಿಣ ಭಾರತದಲ್ಲಿ ಶೇ. 8% ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.ಇನ್ನು ಈ ಸ್ವಾದೀನ ಪ್ರಕ್ರಿಯೆ ಮುಂದಿನ 3-4 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.


Click it and Unblock the Notifications