ಬಿಲಿಯನೇರ್ ಗೌತಮ್ ಅದಾನಿ ಅವರ ದೈತ್ಯ ಅದಾನಿ ಸಂಸ್ಥೆ ಗಟ್ಟಿ ನಿರ್ಧಾರ ಮಾಡಿದೆ. FMCG ಉದ್ಯಮಕ್ಕೆ ಗುಡ್ ಬೈ ಹೇಳಿದೆ. ಹೌದು, ಅದಾನಿ ವಿಲ್ಮಾರ್‌ನಿಂದ ಹೊರನಡೆದಿದ್ದು, ಮತ್ತೊಂದೆಡೆ ಷೇರು ಬೆಲೆಯೂ ಭಾರೀ ಏರಿಕೆ ಕಂಡಿದೆ.
ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL), ತನ್ನ ಗ್ರಾಹಕ ಸರಕುಗಳ ಜಂಟಿ ಉದ್ಯಮವಾದ ಅದಾನಿ ವಿಲ್ಮಾರ್ ಲಿಮಿಟೆಡ್ (AWL) ನಿಂದ ಸಂಪೂರ್ಣವಾಗಿ ಹೊರ ಬರಲು ನಿರ್ಧಾರ ಮಾಡಿದೆ. ಅದಾನಿ ವಿಲ್ಮಾರ್ ಮೂಲಕ ಎಫ್‌ಎಂಸಿಜಿ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದ ದೈತ್ಯ ಅದಾನಿ ಸಮೂಹ ಇದೀಗ ಈ ವಲಯಕ್ಕೆ ಗುಡ್ ಬೈ ಹೇಳಿದೆ. ಅಮೆರಿಕದ ಲಂಚದ ಆರೋಪದ ಬಳಿಕ ಅದಾನಿ ಗ್ರೂಪ್ ಮಾಡುತ್ತಿರುವ ಅತ್ಯಂತ ಮಹತ್ವದ ಒಪ್ಪಂದ ಇದಾಗಿದೆ.

ಡಿಸೆಂಬರ್ 30 ರಂದು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ಸಿಂಗಾಪುರ ಮೂಲದ ವಿಲ್ಮಾರ್ ಸಮೂಹದ ನಡುವಿನ ಜಂಟಿ ಉದ್ಯಮ ಅದಾನಿ ವಿಲ್ಮಾರ್‌ನಲ್ಲಿರುವ ಎಲ್ಲಾ ಷೇರುಗಳನ್ನು ಕಂಪನಿ ಮಾರಾಟ ಮಾಡಲು ತೀರ್ಮಾನಿಸಿದೆ.ಆದರೆ ಅದಾನಿ ಎಂಟರ್‌ಪ್ರೈಸಸ್ ಕನಿಷ್ಠ ಸಾರ್ವಜನಿಕ ಷೇರುದಾರರ ಮಾನದಂಡವನ್ನು ಪೂರೈಸಲು ತನ್ನ ಶೇ. 13ರಷ್ಟು ಪಾಲನ್ನು ಮಾರಾಟ ಮಾಡಲಿದೆ. ಉಳಿದ ಶೇ. 31ರಷ್ಟು ಷೇರುಗಳು ಸಿಂಗಾಪುರದ ವಿಲ್ಮಾರ್ ಇಂಟರ್‌ನ್ಯಾಷನಲ್ ಸೇರಲಿದೆ ಎಂಬ ವಿಚಾರ ತಿಳಿದು ಬಂದಿದೆ.
2 ಬಿಲಿಯನ್ ಡಾಲರ್ ಹಣ ಸಿಗಲಿದೆ
ಈ ಅದಾನಿಯ ಗಟ್ಟಿ ನಿರ್ಧಾರದಿಂದ ಸುಮಾರು 2 ಬಿಲಿಯನ್ ಡಾಲರ್ ಅಂದರೆ ಸುಮಾರು 17,000 ಕೋಟಿ ರೂ. ಹಣ ಸಿಗಲಿದ್ದು, ಇದನ್ನು ಪ್ರಮುಖ ಉದ್ಯಮಗಳಲ್ಲಿ ತೊಡಗಿಸುವುದಾಗಿ ಅದಾನಿ ಸಮೂಹದ ಹೋಲ್ಡಿಂಗ್ ಕಂಪನಿ ಅದಾನಿ ಎಂಟರ್‌ಪ್ರೈಸಸ್ ಹೇಳಿದೆ.
ಒಪ್ಪಂದದ ವಿವರಗಳು
ಅದಾನಿ ಎಂಟರ್‌ಪ್ರೈಸಸ್, ಅದಾನಿ ಕಾಮಾಡಿಟೀಸ್ ಎಲ್‌ಎಲ್‌ಪಿ ಹಾಗೂ ವಿಲ್ಮಾರ್ ಇಂಟರ್‌ನ್ಯಾಷನಲ್‌ನ ಅಂಗ ಸಂಸ್ಥೆ ಲೆನ್ಸ್ ಒಪ್ಪಂದಕ್ಕೆ ಸಹಿ ಹಾಕಿವೆ. ಅದಾನಿ ವಿಲ್ಮಾರ್‌ನಲ್ಲಿರುವ ಅದಾನಿ ಎಂಟರ್‌ಪ್ರೈಸಸ್‌ನ ಶೇ. 31.06ರಷ್ಟು ಷೇರನ್ನು ಪ್ರತಿ ಷೇರಿಗೆ 305 ರೂ. ದರ ಮೀರದಂತೆ ಲೆನ್ಸ್ ಸ್ವಾಧೀನಪಡಿಸಿಕೊಳ್ಳಲಿದೆ. ಇನ್ನೊಂದು ಕಡೆ ಕಂಪನಿಯ ಶೇ. 13ರಷ್ಟು ಷೇರನ್ನು ಅದಾನಿ ಮಾರಾಟ ಮಾಡಲಿದೆ. ಕನಿಷ್ಠ ಸಾರ್ವಜನಿಕ ಷೇರದಾರರ ಮಾನಂದಡವನ್ನು ಪೂರೈಸಲು ಈ ಮಾರಾಟ ಮಾಡಲಿದೆ.
ಅದಾನಿ ವಿಲ್ಮಾರ್‌ನಲ್ಲಿ ಶೇ. 44ರಷ್ಟು ಷೇರನ್ನು ಕಂಪನಿ ಮಾರಾಟ ಮಾಡುತ್ತಿದ್ದು, ಇದರಲ್ಲಿ ಶೇ. 31ರಷ್ಟನ್ನು ವಿಲ್ಮಾರ್ ಇಂಟರ್‌ನ್ಯಾಷನಲ್ ಸ್ವಾಧೀನಪಡಿಸಿಕೊಳ್ಳಲಿದೆ. ಇದರೊಂದಿಗೆ ಆಡಳಿತ ಮಂಡಳಿಯಲ್ಲಿದ್ದ ಅದಾನಿ ನಾಮನಿರ್ದೇಶನಗೊಳಿಸಿದ್ದ ನಿರ್ದೇಶಕರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.
ಬೋರ್ಡ್ ಸಂಯೋಜನೆ ಮತ್ತು ಬ್ರ್ಯಾಂಡಿಂಗ್
ಅದಾನಿ ಕಮಾಡಿಟೀಸ್‌ನ ನಾಮನಿರ್ದೇಶಿತ ನಿರ್ದೇಶಕರುಪ್ರಣವ್ ವಿ. ಅದಾನಿ ಮತ್ತು ಡಾ ಮಲಯ್ ಮಹಾದೇವಿಯಾ-ಎಡಬ್ಲ್ಯೂಎಲ್ ಮಂಡಳಿಯಿಂದ ಕೆಳಗಿಳಿಯುತ್ತಾರೆ. "ಅದಾನಿ ವಿಲ್ಮಾರ್ ಲಿಮಿಟೆಡ್" ಎಂಬ ಹೆಸರನ್ನು ವಹಿವಾಟಿನ ಮೊದಲು ಅಥವಾ ಪೂರ್ಣಗೊಂಡ ನಂತರ ಬದಲಾಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಮರುಬ್ರಾಂಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎರಡೂ ಪಕ್ಷಗಳು ಸಹ ಒಪ್ಪಿಕೊಂಡಿವೆ.
ಷೇರು ಬೆಲೆ ಇಂದು ಭಾರೀ ಏರಿಕೆ
ಇಂದಿನ ಷೇರುಪೇಟೆಯ ವಾಹಿವಾಟುವಿನಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರುಗಳು 175.05 ರೂ. ಅಥವಾ ಶೇ. 7.26ರಷ್ಟು ಭಾರೀ ಏರಿಕೆ ಕಂಡು 2,585 ರೂ.ನಲ್ಲಿ ವಹಿವಾಟು ಕೊನೆಕೊಂಡಿವೆ. ಆದರೆ ಅದಾನಿ ವಿಲ್ಮಾರ್ ಷೇರುಗಳು 5.95 ರೂ. ಅಥವಾ ಶೇ. 1.81ರಷ್ಟು ಕುಸಿತ ಕಂಡು 323.25 ರೂ.ನಲ್ಲಿ ವಹಿವಾಟು ಕೊನೆಗೊಳಿಸಿದೆ. ಅದಾನಿ ವಿಲ್ಮಾರ್ ಸುಮಾರು 42,785 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
1999ರಲ್ಲಿ ಆರಂಭವಾದ ಅದಾನಿ ವಿಲ್ಮಾರ್, ಫಾರ್ಚ್ಯೂನ್ ಬ್ರ್ಯಾಂಡ್‌ನ ಅಡುಗ ಎಣ್ಣೆ, ಗೋಧಿ ಹಿಟ್ಟು, ಧಾನ್ಯಗಳು, ಅಕ್ಕಿ ಹಾಗೂ ಸಕ್ಕರೆಯನ್ನು ಮಾರಾಟ ಮಾಡುತ್ತದೆ. 10 ರಾಜ್ಯಗಳಲ್ಲಿ 23 ಪ್ಲ್ಯಾಂಟ್‌ಗಳನ್ನು ಇದು ಹೊಂದಿದ್ದು ಅದಾನಿ ವಿಲ್ಮಾರ್‌ನ ಮಾರುಕಟ್ಟೆ ಮೌಲ್ಯ ಡಿ. 27ರ ವೇಳೆಗೆ 42, 785 ಕೋಟಿ ರೂಪಾಯಿ ಆಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications