For Quick Alerts
ALLOW NOTIFICATIONS  
For Daily Alerts

ಗೌತಮ್ ಅದಾನಿ ಮೂರು ದಿನದಲ್ಲಿ ಕಳೆದುಕೊಂಡಿದ್ದು $9 ಬಿಲಿಯನ್

|

ಏಷ್ಯಾದ ಎರಡನೇ ಅತಿದೊಡ್ಡ ಶ್ರೀಮಂತ, ಭಾರತದ ಬಿಲಿಯನೇರ್ ಗೌತಮ್ ಅದಾನಿ ಸಂಪತ್ತು ಕಳೆದ ಹಲವು ತಿಂಗಳಲ್ಲಿ ಏರುತ್ತಲೇ ಸಾಗಿತ್ತು. ಆದರೆ ಈ ಓಟ ಕಳೆದ ಎರಡು ಮೂರು ದಿನಗಳಲ್ಲಿ ಹಿಮ್ಮುಖವಾಗಿ ಚಲಿಸಿದೆ.

 

ಹೌದು, 58 ವರ್ಷದ ಗೌತಮ್ ಅದಾನಿ ಕಳೆದ ಒಂದು ವಾರದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚಿನ ಹಣವನ್ನ ಕಳೆದುಕೊಂಡಿದ್ದಾರೆ. ಬ್ಲೂಮ್‌ಬರ್ಗ್‌ ಸೂಚ್ಯಂಕದ ಪ್ರಕಾರ ಮೂರು ದಿನಗಳಲ್ಲಿ ಗೌತಮ್ ಅದಾನಿ ಬರೋಬ್ಬರಿ 9 ಬಿಲಿಯನ್ ಡಾಲರ್ ಕಳೆದುಕೊಂಡಿದ್ದು, ಅವರ ಸಂಪತ್ತು 67.6 ಬಿಲಿಯನ್‌ ಡಾಲರ್‌ಗೆ ಕುಸಿದಿದೆ. ಅದಾನಿ ಗ್ರೂಪ್ ಷೇರುಗಳು ಗುರುವಾರವೂ ಕುಸಿದಿದೆ.

 
ಗೌತಮ್ ಅದಾನಿ ಮೂರು ದಿನದಲ್ಲಿ ಕಳೆದುಕೊಂಡಿದ್ದು $9 ಬಿಲಿಯನ್

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಗೆ ಸಮೀಪಿಸಿದ್ದ ಗೌತಮ್ ಅದಾನಿ ಸಂಪತ್ತಿನ ಇತ್ತೀಚಿನ ಕುಸಿತವು ಅವರಿಬ್ಬರ ನಡುವಿನ ಅಂತರವನ್ನು ಹೆಚ್ಚಿಸಿದೆ.

ಅದಾನಿ ಗ್ರೂಪ್‌ನಲ್ಲಿ ಮೂರು ವಿದೇಶಿ ನಿಧಿಗಳು 43,500 ಕೋಟಿ ರೂ. ಹೂಡಿಕೆ ಮಾಡಿದ್ದು, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕಾರ ಲಾಭದಾಯಕ ಮಾಲೀಕತ್ವದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಾರಣ ಅವುಗಳ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹರಿದಾಡಿತ್ತು. ಪರಿಣಾಮ ನಂತರದಲ್ಲಿ ಅದಾನಿ ಗ್ರೂಪ್ ಷೇರುಗಳು ಭಾರೀ ಕುಸಿತ ಕಂಡಿದ್ದವು.

ಸೋಮವಾರ, ದಿ ಎಕನಾಮಿಕ್ ಟೈಮ್ಸ್ ಮೂರು ವಿದೇಶಿ ನಿಧಿಗಳಾದ ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಖಾತೆಗಳನ್ನು ಎನ್‌ಎಸ್‌ಡಿಎಲ್‌ ಸ್ಥಗಿತಗೊಳಿಸಿದೆ ಎಂದು ವರದಿ ಮಾಡಿದೆ. ಈ ವಿದೇಶಿ ನಿಧಿಗಳು ಅದಾನಿ ಕಂಪನಿಗಳಲ್ಲಿ 43,500 ಕೋಟಿ ರೂ. ಮೌಲ್ಯದ ಷೇರು ಖರೀದಿಸಿವೆ.

English summary

Gautam Adani Loses $9 Billion In 3 Days : Details Here

The 58-year-old tycoon Gautam Adani lost more money this week than anyone else in the world
Story first published: Thursday, June 17, 2021, 21:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X