ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ನೀಡಲು ಒಂದಲ್ಲಾ ಒಂದು ಅಭಿವೃದ್ಧಿಗಳು ನಡೆಯುತ್ತಲೇ ಇವೆ. ಮೆಟ್ರೋ, ಫ್ಲೈಓವರ್‌ಗಳು ಸಾಧ್ಯವಾದಷ್ಟು ಟ್ರಾಫಕ್ ನಿಯಂತ್ರಣದಲ್ಲಿ ಈಗಾಗ್ಲೇ ಪಾತ್ರ ವಹಿಸಿವೆ. ಇದರ ಭಾಗವಾಗಿ ಹಲವು ವರ್ಷಗಳಿಂದ ನಿರೀಕ್ಷಿಸಲಾಗುತ್ತಿದ್ದ ಕೆಂದ್ರೀಯ ಸದನ್-ಈಜಿಪುರಾ ಫ್ಲೈಓವರ್ ಕಾಮಗಾರಿಯ ಪ್ರಗತಿ ಇದೀಗ ಸ್ಪಷ್ಟವಾಗಿ ಗೋಚರಿಸತೊಡಗಿದೆ. ಒಳವಲಯ ರಸ್ತೆಯ ಈ ಪ್ರಮುಖ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಪರಿಹರಿಸಲು ವಿನ್ಯಾಸಗೊಳಿಸಲಾದ ಈ ಫ್ಲೈಓವರ್ ಯೋಜನೆಗೆ ಮತ್ತಷ್ಟು ಬಲ ಸಿಕ್ಕಿದೆ. ಈ ಯೋಜನೆಗೆ ಬೇಕಾ ಪ್ರಮುಖ ಸಂಪನ್ಮೂಲ...ಅಂದರೆ ಯೋಜನೆ ಸಮಯಕ್ಕೆ ಪೂರ್ಣಗೊಳ್ಳಬೇಕಾದರೆ ಕೆಲವು ಪ್ರಮುಖ ಪ್ರದೇಶಗಳಲ್ಲಿ ಭೂಸ್ವಾಧೀನ ಅನಿವಾರ್ಯವಾಗಿದೆ ಎಂಬ ಅಭಿಪ್ರಾಯಕ್ಕೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಬಂದಿದೆ.

7,000 ಚದರ ಮೀಟರ್ ಭೂಸ್ವಾಧೀನಕ್ಕೆ ಜಿಬಿಎ ಅನುಮತಿ:
ಹೌದು, ಈಗ ಗ್ರೇಟರ್ ಬೆಂಗಳೂರು ಅಥಾರಿಟಿ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಒಟ್ಟಾರೆ 7,000 ಚದರ ಮೀಟರ್ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿರುವುದು, ಒಂದು ರೀತಿಯ ಗುಡ್‌ನ್ಯೂಸ್ ಎನ್ನಬಹುದು. ಈ ಸ್ಥಳಗಳಲ್ಲಿ ಸೆಂಟ್ ಜಾನ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆಂದ್ರೀಯ ಸದನ್, ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ತ್ರೋಫಿಸಿಕ್ಸ್ ಸಂಸ್ಥೆಗಳ ಸ್ವಾಮ್ಯದ ಪ್ರದೇಶಗಳು ಸೇರಿವೆ. ಈ ಜಾಗಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಯೋಜನೆಗೆ ಅತ್ಯಂತ ಅವಶ್ಯಕವಾಗಿದ್ದು, ಎಡವಟ್ಟುಗಳಿಲ್ಲದೇ ಮುಂದುವರಿಸಲು ಜಿಬಿಎ ಬಲವಾದ ತೀರ್ಮಾನ ತೆಗೆದುಕೊಂಡಿದೆ.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಅನೇಕ ಅಡಚಣೆಗಳನ್ನು ಗಮನಿಸಿ, ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅವರು ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದರಿಂದ ಕೂಡ ಹಿಂದೆ ಸರಿಯಬೇಡಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಸೆಂಟ್ ಜಾನ್ ಆಸ್ಪತ್ರೆ ಆವರಣದಲ್ಲಿ ಜಂಟಿ ಪರಿಶೀಲನೆ:
ಸಭೆಯಲ್ಲಿ, ವಿಶೇಷವಾಗಿ ಸೆಂಟ್ ಜಾನ್ ಆಸ್ಪತ್ರೆ ಆವರಣದಲ್ಲಿ ಜಾಗ ಬೇಕಿರುವ ಎರಡು ಸ್ಥಳಗಳನ್ನು ನಿಖರವಾಗಿ ಗುರುತಿಸಲಾಯಿತು. ಈ ಎರಡು ಪ್ರದೇಶಗಳಲ್ಲಿ ಭೂಸ್ವಾಧೀನ ಕಾರ್ಯ ಮುಂದುವರಿಸಲು ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಲಿದ್ದಾರೆ. ಇದು ಕಾಮಗಾರಿಯ ವೇಗಕ್ಕೆ ಅತ್ಯಂತ ಮುಖ್ಯವಾಗಿದ್ದು, ಆಸ್ಪತ್ರೆ ಆವರಣದಲ್ಲಿನ ಸಂರಚನೆಗಳಿಗೆ ಹಾನಿಯಾಗದ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಅತಿರಿಕ್ತ 230 ಚ.ಮೀ ಜಾಗ ರಸ್ತೆ ಅಗಲೀಕರಣಕ್ಕೂ ಅಗತ್ಯ:
ಫ್ಲೈಓವರ್ ನಿರ್ಮಾಣದ ಹೊರತಾಗಿ, ರಸ್ತೆ ಅಗಲೀಕರಣ ಮತ್ತು ಪಾದಚಾರಿ ಮಾರ್ಗ ನಿರ್ಮಿಸಲು ಇನ್ನಷ್ಟು 230 ಚ.ಮೀ ಖಾಸಗಿ ಜಾಗ ಬೇಕಾಗಿರುವುದನ್ನು ಜಿಬಿಎ ಗುರುತಿಸಿದೆ. ಈ ಪ್ರದೇಶದಲ್ಲಿ ಪಾದಚಾರಿ ಸಂಚಾರ ಬಹಳ ತೀವ್ರವಾಗಿರುವುದರಿಂದ, ಸುರಕ್ಷತಾ ವ್ಯವಸ್ಥೆ ಮತ್ತು ರಸ್ತೆ ಅಗಲ ಹೆಚ್ಚಿಸಲು ಈ ಜಾಗ ಅತ್ಯಂತ ಅಗತ್ಯವಾಗುತ್ತಿದೆ. ಇದರಿಂದ ಸ್ಥಳೀಯ ವಾಹನ ಸಂಚಾರಕ್ಕೂ ದೀರ್ಘಾವಧಿಯಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ.
2.38 ಕಿಮೀ ಫ್ಲೈಓವರ್ ನಿರ್ಮಾಣ ವೇಗವಾಗಿ ಮುಂದುವರಿಕೆ:
ಈಜಿಪುರಾ ಮೈನ್ ರೋಡ್‌ನ 2.38 ಕಿಮೀ ಉದ್ದದ ಫ್ಲೈಓವರ್ ಕೆಲಸದಲ್ಲೂ ಇದೀಗ ಗಂಭೀರ ವೇಗ ಕಂಡುಬರುತ್ತಿದೆ. ಯೋಜನೆಗೆ ಒಟ್ಟಾರೆ 762 ಸೆಗ್ಮೆಂಟ್‌ಗಳು ಬೇಕಾಗಿದ್ದು, ಅದರಲ್ಲೇ 584 ಈಗಾಗಲೇ ಕ್ಯಾಸ್ಟ್ ಆಗಿವೆ. ಬಾಕಿ ಇರುವ 178 ಸೆಗ್ಮೆಂಟ್‌ಗಳ ತಯಾರಿಯೂ ಶೀಘ್ರವಾಗಿ ನಡೆಯುತ್ತಿದೆ.
ತಯಾರಾದ ಸೆಗ್ಮೆಂಟ್‌ಗಳಲ್ಲಿ 454 ಅನ್ನು ಈಗಾಗಲೇ ಸ್ಥಳದಲ್ಲಿ ಅಸೆಂಬಲ್ ಮಾಡಲಾಗಿದೆ. ಉಳಿದ ಸೆಗ್ಮೆಂಟ್‌ಗಳನ್ನು ಕೂಡ ಮುಂದಿನ ಕೆಲವು ವಾರಗಳಲ್ಲಿ ಜೋಡಿಸುವ ಕೆಲಸ ನಡೆಯಲಿದೆ ಎಂದು ಯೋಜನೆಗೆ ಸಂಬಂಧಿಸಿದ ಇಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ. ಈ ಪರಿ ಕೆಲಸ ಮುಂದುವರಿದರೆ ಯೋಜನೆ ನಿರ್ಧಾರಿತ ಗಡುವಿನೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚು ಇದೆ.
ಅಧಿಕಾರಿಗಳ ಪೂರ್ವ ಸಭೆಯಲ್ಲಿ ಚರ್ಚೆಗಳು:
ಈ ಮಹತ್ವದ ಸಭೆಯಲ್ಲಿ ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದರು. ದಕ್ಷಿಣ ನಗರ ನಿಗಮ ಆಯುಕ್ತ ರಮೇಶ್ ಕೆ.ಎನ್, ಉಪ ಆಯುಕ್ತ ಗಾಯತ್ರಿ ನಾಯಕ್, ಕಾನೂನು ವಿಭಾಗದ ಮುಖ್ಯಸ್ಥ ಚಂದ್ರಶೇಖರ ಪಾಟೀಲ, ಪಟ್ಟಣ ಯೋಜನಾ ಹೆಚ್ಚುವರಿ ನಿರ್ದೇಶಕ ಗಿರೀಶ್, ಮತ್ತು ಮುಖ್ಯ ಇಂಜಿನಿಯರ್ ರವಿ ಸಭೆಯಲ್ಲಿ ಹಾಜರಿದ್ದರು. ಭೂಸ್ವಾಧೀನಕ್ಕೆ ಬೇಕಾದ ದಾಖಲೆಗಳು, ಕಾನೂನು ಪ್ರಕ್ರಿಯೆಗಳು, ಭೂಮಿಯ ಮೌಲ್ಯ ನಿಗದಿ ಸೇರಿದಂತೆ ಹಲವಾರು ಮುಖ್ಯ ವಿಷಯಗಳನ್ನು ಚರ್ಚಿಸಲಾಯಿತು.
ನಿರೀಕ್ಷಿಸುವುದು ಏನು?
ಫ್ಲೈಓವರ್ ಪೂರ್ಣಗೊಳ್ಳಿದ ನಂತರ, ಕೆಂದ್ರೀಯ ಸದನ್-ಈಜಿಪುರಾ ನಡುವಿನ ದಿನನಿತ್ಯದ ವಾಹನ ಸಂಚಾರ ಬಹಳ ಮಟ್ಟಿಗೆ ಸರಾಗವಾಗುವ ನಿರೀಕ್ಷೆಯಿದೆ. ಇಂದಿಗೂ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದ್ದು, ಕೆಲಸಕ್ಕೆ ಹೋಗುವವರು ಮತ್ತು ವಾಹನ ಚಾಲಕರಿಗೆ ಇದು ದೊಡ್ಡ ತೊಂದರೆ. ಫ್ಲೈಓವರ್ ಪೂರ್ಣಗೊಳ್ಳುವುದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ ಸಂಚಾರದ ಒತ್ತಡವೂ ಕಡಿಮೆಯಾಗಲಿದೆ.
ನಗರದ ಅಭಿವೃದ್ಧಿ ಮತ್ತು ಸಂಚಾರ ವ್ಯವಸ್ಥೆಯ ಸುಧಾರಣೆಯ ದೃಷ್ಟಿಯಿಂದ ಈ ಯೋಜನೆ ಪ್ರಮುಖ ಪಾತ್ರವಹಿಸಲಿದ್ದು, ಜಾಗ ಸ್ವಾಧೀನ ಪ್ರಕ್ರಿಯೆ ಸುಗಮವಾಗಿ ನಡೆಯುವುದೇ ಯೋಜನೆ ಪೂರ್ಣಗೊಳ್ಳುವ ವೇಗವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.


Click it and Unblock the Notifications