ಜರ್ಮನಿ ಮೂಲದ ಪಾದರಕ್ಷೆಗಳ ತಯಾರಿಕಾ ಬ್ರ್ಯಾಂಡ್ Von Wellx ಚೀನಾದಿಂದ ಭಾರತಕ್ಕೆ ತನ್ನ ಉತ್ಪಾದನೆಯನ್ನು ಸ್ಥಳಾಂತರಗೊಳಿಸಲು ನಿರ್ಧರಿಸಿದೆ. ಚೀನಾದಲ್ಲಿ ವಾರ್ಷಿಕವಾಗಿ 30 ಲಕ್ಷ ಜೋಡಿಗಳ ಸಂಪೂರ್ಣ ಶೂ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸುತ್ತಿದೆ. ಆರಂಭಿಕವಾಗಿ 110 ಕೋಟಿ ರುಪಾಯಿ ಹೂಡಿಕೆಯೊಂದಿಗೆ ಸ್ಥಳಾಂತರಿಸಲಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದೊಂದಿಗೆ ತಿಳುವಳಿಕೆಯ ಭಾಗವಾಗಿ ಐಯಾಟ್ರಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಉತ್ತರ ಪ್ರದೇಶದಲ್ಲಿ 30 ಲಕ್ಷ ಜೋಡಿ ಉತ್ಪಾದನಾ ಸಾಮರ್ಥ್ಯದೊಂದಿಗೆ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು ಎನ್ನಲಾಗಿದೆ.

"ಹೌದು, ಅನೇಕ ಸುತ್ತಿನ ಚರ್ಚೆಗಳ ನಂತರ, ಕಾಸಾ ಎವರ್ಜ್ ಜಿಎಂಬಿ(Von Wellx ಕಂಪನಿಯ ಮಾಲೀಖ) ತನ್ನ ಸಂಪೂರ್ಣ ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ನಿರ್ಧರಿಸಿದ್ದಾರೆ" ಎಂದು ಐಟ್ರಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮತ್ತು ಸಿಇಒ ಆಶಿಶ್ ಜೈನ್ ಇ-ಮೇಲ್ ಪ್ರತಿಕ್ರಿಯೆಯಲ್ಲಿ ಪಿಟಿಐಗೆ ತಿಳಿಸಿದ್ದಾರೆ.
ಕಾಸಾ ಎವರ್ಜ್ ಜಿಎಂಬಿಎ ಚೀನಾದಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ವಾರ್ಷಿಕ 3 ಮಿಲಿಯನ್ ಜೋಡಿ ಸಾಮರ್ಥ್ಯ ಹೊಂದಿದೆ.
ಐಯಾಟ್ರಿಕ್ ಇಂಡಸ್ಟ್ರೀಸ್ ಈಗಾಗಲೇ ಕಾಸಾ ಎವರ್ಜ್ ಜಿಎಂಬಿಗಾಗಿ 5 ಲಕ್ಷ ಜೋಡಿ ಸಾಮರ್ಥ್ಯವನ್ನು ಹೊಂದಿದೆ, ಅದರ ಅಡಿಯಲ್ಲಿ ನಿರ್ದಿಷ್ಟವಾಗಿ ಇದು ವಾನ್ ವೆಲ್ಕ್ಸ್ ಜರ್ಮನಿ ಅದರ ಇತರ 5 ಲಕ್ಷ ಜೋಡಿಗಳ ಉತ್ಪನ್ನ ಸಾಮರ್ಥ್ಯಗಳನ್ನು ಹೊರತುಪಡಿಸಿ, 5 ವಲಯಗಳ ಪುರುಷರ ಮತ್ತು ಮಹಿಳಾ ಬೂಟುಗಳನ್ನು ಉತ್ಪಾದಿಸುತ್ತದೆ.
ಹೂಡಿಕೆಗಳ ಬಗ್ಗೆ ಕೇಳಿದಾಗ, "ಯೋಜನೆಯ 1 ನೇ ಹಂತದ ಹೂಡಿಕೆ ಎರಡು ವರ್ಷಗಳಲ್ಲಿ ಸುಮಾರು 110 ಕೋಟಿ ರುಪಾಯಿ ಆಗುತ್ತದೆ" ಎಂದು ಹೇಳಿದರು.


Click it and Unblock the Notifications