For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್‌ನಲ್ಲಿ ರತ್ನ, ಚಿನ್ನಾಭರಣ ರಫ್ತು ಶೇ.45.2ರಷ್ಟು ಹೆಚ್ಚಳ

|

ಮುಂಬೈ, ನವೆಂಬರ್ 17: ರತ್ನ, ಚಿನ್ನಾಭರಣಗಳ ರಫ್ತು ಪ್ರಮಾಣ ಅಕ್ಟೋಬರ್‌ನಲ್ಲಿ ಶೇ.45.2ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಮೌಲ್ಯದ ಲೆಕ್ಕದಲ್ಲಿ 31,241.09 ಕೋಟಿ ರೂ.ನಷ್ಟು ಏರಿಕೆಯಾಗಿದೆ ಎಂದು ರತ್ನಗಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿ(ಜಿಜೆಇಪಿಸಿ) ಮಂಗಳವಾರ ತಿಳಿಸಿದೆ.

2020ರ ಅಕ್ಟೋಬರ್‌ನಲ್ಲಿ ಮೌಲ್ಯ 21,515.95 ಕೋಟಿ ರೂ.ನಷ್ಟಿತ್ತು. ರತ್ನ ಹಾಗೂ ಆಭರಣ ಉದ್ಯಮದಲ್ಲಿ ಒಟ್ಟಾರೆ ಧನಾತ್ಮಕವಾಗಿದೆ.

ಅಕ್ಟೋಬರ್‌ನಲ್ಲಿ ರತ್ನ, ಚಿನ್ನಾಭರಣ ರಫ್ತು ಶೇ.45.2ರಷ್ಟು ಹೆಚ್ಚಳ

ಉತ್ಪಾದನಾ ಚಟುವಟಿಕೆಯು ದೀಪಾವಳಿ ಪೂರ್ವದಲ್ಲಿ ಉತ್ತುಂಗಕ್ಕೇರಿತ್ತು, ಅಮೆರಿಕ ನೇತೃತ್ವದ ಪ್ರಮುಖ ಮಾರುಕಟ್ಟೆಗಳಿಂದ ಬಲವಾದ ಬೇಡಿಕೆಯಿಂದಾಗಿ ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಶೇ.16ರಷ್ಟು ಜಿಗಿತ ಕಂಡಿದೆ.

ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಕಂಪನಿಗಳು ಮುಚ್ಚಿದ್ದರಿಂದ ಉತ್ಪಾದನೆಯಲ್ಲಿ ಸ್ವಲ್ಪ ಕುಸಿತವಾಗಿದೆ. ಆದಾಗ್ಯೂ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಚೇತರಿಕೆಯಾಗಬಹುದು ಎನ್ನುವ ಭರವಸೆಯಿದೆ ಎಂದು ಜಿಜೆಇಪಿಸಿ ಅಧ್ಯಕ್ಷ ಕೋಲಿನ್ ಶಾ ಹೇಳಿದ್ದಾರೆ.

ಇದು 2021-22ರ ರಫ್ತಿನಲ್ಲಿ 41.75 ಶತಕೋಟಿ ಗುರಿಯನ್ನು ಸಾಧಿಸಲು ಸಹಾಯ ಮಾಡಲಿದೆ. ಕತ್ತರಿಸಿದ ಹಾಗೂ ಪಾಲಿಶ್ ಮಾಡಿದ ವಜ್ರಗಳ ಒಟ್ಟಾರೆ ರಫ್ತು ಅಕ್ಟೋಬರ್‌ನಲ್ಲಿ ಶೇ.47.90 ಏರಿಕೆಯಾಗಿ 19,178.5 ಕೋಟಿ ರೂ. ಗೆ ತಲುಪಿತ್ತು, 2020ರಲ್ಲಿಅದು 12,966.89 ಕೋಟಿ ರೂ. ಆಗಿತ್ತು.

ಅಕ್ಟೋಬರ್‌ನಲ್ಲಿ ಚಿನ್ನಾಭರಣಗಳ ಒಟ್ಟು ರಫ್ತು ಶೇ.72.05ರಷ್ಟಿದೆ ಮೌಲ್ಯ 8,152.92 ಕೋಟಿ ರೂ. ರಷ್ಟಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಅದು 4,738.77 ಕೋಟಿ ರೂ.ನಷ್ಟಿತ್ತು.

ರತ್ನಗಳು ಹಾಗೂ ಚಿನ್ನಾಭರಣಗಳ ರಫ್ತು ಪ್ರಮಾಣ 2020ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ.29ರಷ್ಟು ಏರಿಕೆ ಕಂಡಿತ್ತು.

2020ರ ಏಪ್ರಿಲ್-ಸೆಪ್ಟೆಂಬರ್ ಅವಧಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ರಫ್ತು ಶೇ.ರಷ್ಟು ಹೆಚ್ಚಾಗಿದ್ದು,1.40 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಈ ಮೂಲಕ ಕೇಂದ್ರ ಸರ್ಕಾರವು ನಿಗದಿ ಮಾಡಿರುವ ರಫ್ತು ಗುರಿಯೇ ಶೇ.46ರಷ್ಟು ಸಾಧನೆ ಆಗಿದೆ ಎಂದು ಹೇಳಿದೆ. ಒಟ್ಟಾರೆ 3.08 ಲಕ್ಷ ಕೋಟಿ ರೂ. ರಫ್ತು ಗುರಿಯನ್ನು ಸರ್ಕಾರ ಹೊಂದಿದೆ.

ಮಾರುಕಟ್ಟೆಗಳು ತೆರೆಯುತ್ತಿರುವುದರಿಂದ ಹಾಗೂ ಬೇಡಿಕೆಯು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಉದ್ಯಮದಲ್ಲಿ ಸಕಾರಾತ್ಮಕ ವಾತಾವರಣ ಇದೆ ಎಂದು ಕೋಲಿನ್ ಶಾ ಹೇಳಿದ್ದಾರೆ.

ಚಿನ್ನದ ಆಭರಣಗಳ ರಫ್ತು ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 8109 ಕೋಟಿ ರೂ.ನಿಂದ 29,379 ಕೋಟಿ ರೂ.ಗಳಿಗೆ ಶೇ.262ರಷ್ಟು ಹೆಚ್ಚಾಗಿದೆ. ಬೆಳ್ಳಿ ಆಭರಣಗಳ ರಫ್ತು 6392 ಕೋಟಿ ರೂ.ಗಳಿಂದ 9477 ಕೋಟಿ ರೂ.ಗಳಿಗೆ ಶೇ.48ರಷ್ಟು ಹೆಚ್ಚಾಗಿದೆ ಎಂದು ಮಂಡಳಿಯು ಮಾಹಿತಿ ನೀಡಿದೆ.

English summary

GJEPC Says Gem, Jewellery Exports Up 45.2% At Rs 31,241.09 cr In October

The gem and jewellery exports witnessed a growth of 45.2 % during October at Rs 31,241.09 crore (USD 4,170.59 million) compared to the same month last year due to strong demand from key markets, led by the US, GJEPC said on Tuesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X