ಗ್ಲೆನ್ ಮಾರ್ಕ್ ನಿಂದ ಕೊರೊನಾಗೆ ಮಾತ್ರೆ; ಒಂದಕ್ಕೆ 103 ರುಪಾಯಿ ಬೆಲೆ ನಿಗದಿ

ಗ್ಲೆನ್ ಮಾರ್ಕ್ ಫಾರ್ಮಾಸ್ಯುಟಿಕ್ಸಲ್ಸ್ ಶನಿವಾರ ಮಹತ್ವದ ಘೋಷಣೆ ಮಾಡಿದೆ. ಕೊರೊನಾದಿಂದ ಅಲ್ಪ ಪ್ರಮಾಣದಿಂದ ನಿರ್ದಿಷ್ಟವಾಗಿ ಅಲ್ಪ ಗಂಭೀರ ಮಟ್ಟದ ತನಕ ಸಮಸ್ಯೆ ಎದುರಿಸುತ್ತಿರುವವರಿಗೆ FabiFlu ಬ್ರ್ಯಾಂಡ್ ಅಡಿಯಲ್ಲಿ ಮಾತ್ರೆ ಬಿಡುಗಡೆ ಮಾಡಿದೆ. ಇದು ಫೇವಿಪಿರವಿರ್ ಔಷಧವಾಗಿದ್ದು, ಒಂದು ಮಾತ್ರೆಗೆ 103 ರುಪಾಯಿ ಬೆಲೆ ನಿಗದಿ ಮಾಡಲಾಗಿದೆ.

200 mg ಮಾತ್ರೆ ದೊರೆಯಲಿದೆ. ಗರಿಷ್ಠ ಮಾರಾಟ ಬೆಲೆ (MRP) 34 ಮಾತ್ರೆಗಳುಳ್ಳದ್ದಕ್ಕೆ 3500 ರುಪಾಯಿ ಬೆಲೆ ನಿಗದಿ ಮಾಡಲಾಗಿದೆ ಎಂದು ಗ್ಲೆನ್ ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಹೇಳಿದೆ. ಭಾರತದಲ್ಲಿ ಕೊರೊನಾಗೆ ಈ ರೀತಿ ಮಾತ್ರೆ ತೆಗೆದುಕೊಳ್ಳುವಂಥ ಔಷಧಕ್ಕೆ ಅನುಮತಿ ಪಡೆದುಕೊಂಡಿರುವುದು ಇದೇ ಮೊದಲು ಎಂದು ಕಂಪೆನಿ ಹೇಳಿಕೊಂಡಿದೆ.

ಈ ಮಾತ್ರೆಯನ್ನು ವೈದ್ಯರು ಶಿಫಾರಸು ಮಾಡಿ, ಚೀಟಿ ಬರೆದುಕೊಟ್ಟಲ್ಲಿ ಮಾತ್ರ ನೀಡಲಾಗುತ್ತದೆ. ದಿನಕ್ಕೆ 1800 mgಯಂತೆ ಮೊದಲ ದಿನ ಎರಡು ಬಾರಿ, ಆ ನಂತರ 800 mgಯಂತೆ ಹದಿನಾಲ್ಕು ದಿನದ ತನಕ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕಂಪೆನಿ ಹೇಳಿದೆ. ಈ ಔಷಧವನ್ನು ಹಿಮಾಚಲಪ್ರದೇಶದ ಬದ್ದಿ ಎಂಬಲ್ಲಿ ಇರುವ ಘಟಕದಲ್ಲಿ ಗ್ಲೆನ್ ಮಾರ್ಕ್ ಉತ್ಪಾದಿಸುತ್ತಿದೆ.

ಗ್ಲೆನ್ ಮಾರ್ಕ್ ನಿಂದ ಕೊರೊನಾಗೆ ಮಾತ್ರೆ; ಒಂದಕ್ಕೆ 103 ರುಪಾಯಿ ಬೆಲೆ

ಮುಂಬೈ ಮೂಲದ ಗ್ಲೆನ್ ಮಾರ್ಕ್ ಪಾರ್ಮಾಸ್ಯುಟಿಕಲ್ಸ್ ಗೆ ಶುಕ್ರವಾರದಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈ ಮಾತ್ರೆಯ ಉತ್ಪಾದನೆ ಹಾಗೂ ಮಾರ್ಕೆಟಿಂಗ್ ಗೆ ಅನುಮತಿ ನೀಡಿದೆ. ಭಾರತದಲ್ಲಿ 3,95,048 ಕೊರೊನಾ ಪ್ರಕರಣಗಳಿದ್ದು, 12,948 ಮಂದಿ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+