ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದರೂ ಭಾರತದಲ್ಲಿ ಬುಧವಾರ (ಅಕ್ಟೋಬರ್ 14, 2020) ಚಿನ್ನದ ಬೆಲೆಯಲ್ಲಿ ಹೆಚ್ಚಳವಾಯಿತು. ಚಿನ್ನದ ದರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಗೆ (28.3495 ಗ್ರಾಮ್) $ 1900ಕ್ಕಿಂತ ಕೆಳಗೆ ವಹಿವಾಟಾಯಿತು. ಇನ್ನು ಡಾಲರ್ ಮೌಲ್ಯ ಕೂಡ ಹೆಚ್ಚಾಯಿತು.
ಭಾರತದ MCXನಲ್ಲಿ ಚಿನ್ನದ ಫ್ಯೂಚರ್ಸ್ ಅಕ್ಟೋಬರ್ ಡೆಲಿವರಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅದಕ್ಕೂ ಮುನ್ನ 1.67% ಅಥವಾ 852 ರುಪಾಯಿ ಇಳಿಕೆ ಕಂಡಿತ್ತು. ಆರಂಭದ ವಹಿವಾಟಿನಲ್ಲಿ ಅಕ್ಟೋಬರ್ ಚಿನ್ನದ ಫ್ಯೂಚರ್ಸ್ 50,351 ರುಪಾಯಿಗೆ ವ್ಯ್ವಹಾರ ನಡೆಸಿತು. ಚಿನ್ನದ ಬೆಲೆ ಏರಿಕೆಯನ್ನೇ ಬೆಳ್ಳಿ ಕೂಡ ಅನುಸರಿಸಿತು.
ಚಿನ್ನದ ದರ ಔನ್ಸ್ ಗೆ $ 1900ರ ಸಮೀಪ
ಅದಕ್ಕೂ ಮುನ್ನ ಬೆಳ್ಳಿ ಬೆಲೆಯಲ್ಲಿ 4% ಅಥವಾ 2568 ರುಪಾಯಿ ಇಳಿಕೆ ಆಗಿ ಪ್ರತಿ ಕೇಜಿಗೆ 60,530 ರುಪಾಯಿ ಇತ್ತು. ಅಂತರರಾಷ್ಟ್ರೀಯ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ ಔನ್ಸ್ ಗೆ $ 1900ರ ಸಮೀಪ ಸುಳಿದಾಡುತ್ತಿದೆ. ಯುಎಸ್ ಕೊರೊನಾ ಆರ್ಥಿಕ ಉತ್ತೇಜನಾ ಪ್ಯಾಕೇಜ್ ನಿರೀಕ್ಷೆಯಲ್ಲಿ ಡಾಲರ್ ಸ್ಥಿರವಾಗಿದೆ.
ಮೂರು ವಾರಗಳ ಕನಿಷ್ಠದಿಂದ ಮೇಲೇರಿದ ಡಾಲರ್
ಒಂದು ಕಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇನ್ನು ಯುಎಸ್ ನಲ್ಲಿ ಆರ್ಥಿಕತೆ ಮೇಲೆ ಎರಡನೇ ಹಂತದ ಸೂಚನೆ ನೀಡುತ್ತಿದ್ದು, ಚಿನ್ನದ ಭಾರೀ ಕುಸಿತವನ್ನು ತಡೆದು ನಿಲ್ಲಿಸಿದೆ. ಇನ್ನು ಸ್ಪಾಟ್ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಬದಲಾವಣೆ ಆಯಿತು. ಪ್ರತಿ ಔನ್ಸ್ ಗೆ $ 1892.80ರಂತೆ ವಹಿವಾಟು ನಡೆಸಿತು. ಇನ್ನು ಚಿನ್ನದ ಫ್ಯೂಚರ್ಸ್ $ 1896.60ರಲ್ಲಿ ಸ್ಥಿರವಾಗಿದೆ. ಮಂಗಳವಾರದಂದು ಮೂರು ವಾರಗಳ ಕನಿಷ್ಠ ಮಟ್ಟದಿಂದ ಡಾಲರ್ ಮೇಲೇರಿತು.
ಆರ್ಥಿಕ ಚೇತರಿಕೆ ಇನ್ನಷ್ಟು ಕಠಿಣ
ಯುಎಸ್ ನಲ್ಲಿ ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಣೆ ಮಾಡಬಹುದು ಎಂಬ ಭರವಸೆಗೆ ಪೆಟ್ಟು ಬಿದ್ದಿದೆ. ಸ್ಪೀಕರ್ ನ್ಯಾನ್ಸಿ ಪೆಲೊಸಿ 1.8 ಲಕ್ಷ ಕೋಟಿ ಅಮೆರಿಕನ್ ಡಾಲರ್ ಪರಿಹಾರ ಪ್ಯಾಕೇಜ್ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. ಇನ್ನು ಹೆಚ್ಚುತ್ತಿರುವ ಸಾಲದ ಪ್ರಮಾಣವು ವಿಶ್ವದಾದ್ಯಂತ ಆರ್ಥಿಕತೆ ಚೇತರಿಕೆಯನ್ನು ಇನ್ನಷ್ಟು ಕಠಿಣ ಮಾಡಿದೆ. ಲಸಿಕೆ ಬರುವುದರಲ್ಲಿ ಆಗುತ್ತಿರುವ ವಿಳಂಬವು ಚಿನ್ನದ ಬೆಲೆಯ ಏರಿಕೆ ಕಾರಣ ಆಗಬಹುದು ಎಂಬ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಹಲವು ಅಂಶಗಳ ಪ್ರಭಾವ ಇದೆ
ಚಿನ್ನದ ಬೆಲೆಯು ತನ್ನ ಗಟ್ಟಿ ನೆಲೆಯನ್ನು ಕಳೆದುಕೊಳ್ಳುತ್ತಿದ್ದರೂ ಯುಎಸ್ ಅಧ್ಯಕ್ಷೀಯ ಚುನಾವಣೆಯ ಅನಿಶ್ಚಿತತೆ, ಯುಎಸ್ ನ ಕೆಲವು ರಾಜ್ಯಗಳು ಹಾಗೂ ಯುರೋಪ್ ನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣ, ಲಸಿಕೆ ಹೊರಬರುವುದರಲ್ಲಿನ ವಿಳಂಬ, ಯುಎಸ್ ನಿಂದ ಆರ್ಥಿಕ ಉತ್ತೇಜನಾ ಕ್ರಮಗಳ ಮಾತುಕತೆ ನಿಂತುಹೋಗಿರುವುದು ಇತ್ಯಾದಿ ಅಂಶಗಳು ಚಿನ್ನದ ದರವು ಸೀಮಿತವಾಗಿ ವಹಿವಾಟು ನಡೆಸುವಂತೆ ಮಾಡಿವೆ.


Click it and Unblock the Notifications