ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯದ ಬಗ್ಗೆ ಪ್ರತಿಸ್ಪಂದನೆ ಎದುರು ನೋಡುತ್ತಿದ್ದರೂ ಸೋಮವಾರದಂದು (ಅಕ್ಟೋಬರ್ 5, 2020) ಅಂತರರಾಷ್ಟ್ರೀಯ ಚಿನ್ನದ ದರದಲ್ಲಿ ಸ್ಥಿರತೆ ಕಂಡುಬಂದಿದೆ. ಆದರೂ ಭಾರತದಲ್ಲಿ ಮಾತ್ರ ದುರ್ಬಲವಾಗಿದೆ. ಫ್ಯೂಚರ್ಸ್ ಮಾರ್ಕೆಟ್ ನಲ್ಲಿ ಎಂಸಿಎಕ್ಸ್ ಚಿನ್ನದ ದರವು ದಿನದ ಕನಿಷ್ಠ ಮಟ್ಟವಾದ 50,030 ತಲುಪಿತ್ತು. ಪ್ರತಿ 10 ಗ್ರಾಮ್ ಗೆ 50,000 ರುಪಾಯಿ ದರವನ್ನು ಹಿಡಿದಿರಿಸಿಕೊಂಡಿತ್ತು.
ಟ್ರಂಪ್ ಆರೋಗ್ಯದ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಇದ್ದೇ ಇದೆ. ಇದರಿಂದ ವ್ಯವಸ್ಥೆಯಲ್ಲಿ ಅನಿಶ್ಚಿತತೆ ತಲೆದೋರಬಹುದು ಎಂಬ ಚಿಂತೆ ಅದು. ಆದ್ದರಿಂದ ದೇಶೀಯ ಹೂಡಿಕೆದಾರರು ಫೂಚರ್ಸ್ ಟ್ರೇಡ್ ನಿಂದ ಹಿಂದಕ್ಕೆ ಸರಿದಿದ್ದಾರೆ. ಇದರ ಜತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳೆದ ಗುರುವಾರ ಟ್ರಂಪ್ ಆರೋಗ್ಯ ಸ್ಥಿತಿ ಬಗ್ಗೆ ಸುದ್ದಿ ಬಂದ ಕೂಡಲೇ ಚಿನ್ನದ ದರವು ಔನ್ಸ್ ಗೆ (28.3495) $ 1900ರ ಮಟ್ಟದ ಮೇಲೇರಿತು.

ಸೋಮವಾರದ ಸೆಷನ್ ನಲ್ಲಿ ಪ್ರತಿ ಔನ್ಸ್ ಗೆ $ 1900ರ ಮಟ್ಟ ಮುಂದುವರಿದಿದೆ. ಹೂಡಿಕೆದಾರರು ಟ್ರಂಪ್ ಆರೋಗ್ಯದ ಸ್ಥಿತಿ ಬಗ್ಗೆ ಸುದ್ದಿ ನಿರೀಕ್ಷೆಯಲ್ಲಿ ಇದ್ದಾರೆ. ಯುಎಸ್ ನಲ್ಲಿನ ಉದ್ಯೋಗ ಪ್ರಮಾಣದ ಬಾಹ್ಯ ನೋಟ, ಯು.ಕೆ. ಆರ್ಥಿಕತೆ ಬಗ್ಗೆ ಬ್ರಿಟಿಷ್ ಹಣಕಾಸು ಸಚಿವರಾದ ರಿಶಿ ಸುನಕ್ ಅವರು ಆರ್ಥಿಕತೆ ಬಗ್ಗೆ ನೀಡಿರುವ ಎಚ್ಚರಿಯಿಂದಾಗಿ ಚಿನ್ನದ ಬೆಲೆಯಲ್ಲಿ ಅಷ್ಟಾಗಿ ಇಳಿಕೆ ಕಾಣದಿರಲು ನೆರವಾಗಿವೆ.
ಆದರೆ, ಇತರ ಕೆಲವು ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಹೂಡಿಕೆದಾರರು ಮುಂದಿನ ಕೆಲ ದಿನಗಳ ಕಾಲ ಭಾರೀ ಏರಿಳಿತಕ್ಕೆ ಸಿದ್ಧವಾಗಬೇಕಾಗುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications