ಇಂಡಿಗೊ ಆಯ್ತು, ಇದೀಗ 'ಗೋ ಏರ್' ಕೂಡ ಉದ್ಯೋಗಿಗಳ ವೇತನ ಕಡಿತಕ್ಕೆ ನಿರ್ಧಾರ

ವಾಡಿಯಾ ಸಮೂಹದ ಒಡೆತನದ ವಿಮಾನಯಾನ ಸಂಸ್ಥೆ ಗೋಏರ್ ತನ್ನ ಎಲ್ಲ ಉದ್ಯೋಗಿಗಳ ಮಾರ್ಚ್‌ ತಿಂಗಳ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ.

ದೇಶದಲ್ಲಿ ಕೊರೊನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಇದಕ್ಕೂ ಮೊದಲೇ ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಲಾಕ್‌ಡೌನ್ ಸುದ್ದಿ ಹೊರಬೀಳುತ್ತಿದ್ದಂತೆ ಸಿಬ್ಬಂದಿಗಳ ವೇತವನ್ನು ಕಡಿತಗೊಳಿಸಿದೆ.

ಕೊರೊನಾ ಎಫೆಕ್ಟ್: ತನ್ನ ಉದ್ಯೋಗಿಗಳ ವೇತನ ಕಡಿತಗೊಳಿಸಿದ ಗೋ ಏರ್

ಮಾರ್ಚ್‌ನಲ್ಲಿ ಎಲ್ಲಾ ಗೋಏರ್ ನೌಕರರು ವೇತನ ಕಡಿತವನ್ನು ಎದುರಿಸಬೇಕು ಎಂದು ಗೋಏರ್ ಸಿಇಒ ವಿನಯ್ ಡ್ಯೂಬ್ ಹೇಳಿದ್ದಾರೆ. ಕೊರೊನಾವೈರಸ್‌ನಿಂದಾಗಿ ಪ್ರಯಾಣ ನಿರ್ಬಂಧದಿಂದಾಗಿ ಕಂಪನಿಗೆ ಯಾವುದೇ ಬೇರೆ ಆಯ್ಕೆ ಉಳಿದಿಲ್ಲ ಎಂದಿದ್ದಾರೆ.

ಗೋಏರ್ ಈಗಾಗಲೇ ತನ್ನ ವಲಸಿಗ ಪೈಲಟ್‌ಗಳನ್ನು ವಜಾಗೊಳಿಸಿದೆ. ತನ್ನ ಉದ್ಯೋಗಿಗಳಿಗೆ ವೇತನವಿಲ್ಲದೆ ರಜೆಯನ್ನು ನೀಡಿದೆ ಮತ್ತು ಅದರ ಉನ್ನತ ಅಧಿಕಾರಿಗಳಿಗೆ 50 ಪರ್ಸೆಂಟ್ವರೆಗೆ ವೇತನವನ್ನು ಕಡಿತಗೊಳಿಸಿದೆ.

ಇತ್ತೀಚೆಗಷ್ಟೇ ಮತ್ತೊಂದು ವಿಮಾನಯಾನ ಸಂಸ್ಥೆಯಾದ ಇಂಡಿಗೂ ಕೂಡ ತನ್ನ ಉದ್ಯೋಗಿಗಳ ಸಂಬಳ ಕಡಿತಗೊಳಿಸಿತ್ತು. ತನ್ನೆಲ್ಲಾ ಉದ್ಯೋಗಿಗಳಿಗೆ 25 ಪರ್ಸೆಂಟ್ ವೇತನ ಕಡಿತಗೊಳಿಸಿದೆ.
ಉಪಾಧ್ಯಕ್ಷರು ಮತ್ತು ಕಾಕ್‌ಪಿಟ್ ಸಿಬ್ಬಂದಿಯ 15 ಪರ್ಸೆಂಟ್ ವೇತನ ಕಡಿತವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+