ನವದೆಹಲಿ, ಸೆಪ್ಟೆಂಬರ್ 10: ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಆರಂಭಿಕ ವಹಿವಾಟಿನ್ಲಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರದೆ ಅಥವಾ ತೀರಾ ಕುಸಿಯದೆ , ಹೆಚ್ಚು ಬದಲಾಗದೆ ಉಳಿದಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.07ರಷ್ಟು ಏರಿಕೆಗೊಂಡು, 51,440 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇಕಡಾ 0.41ರಷ್ಟು ಏರಿಕೆಗೊಂಡು 68,725 ಕ್ಕೆ ತಲುಪಿದೆ.
ಕಳೆದ ಕೆಲವು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಹೆಚ್ಚು ಏರಿಳಿತಗೊಳ್ಳದೆ ಕಿರು ಬದಲಾವಣೆ ದಾಖಲಾಗಿವೆ. ಹಿಂದಿನ ವಹಿವಾಟಿನಲ್ಲಿ, ಚಿನ್ನದ ಭವಿಷ್ಯವು ಎಂಸಿಎಕ್ಸ್‌ನಲ್ಲಿ ಶೇಕಡಾ 0.07ರಷ್ಟು ಏರಿಕೆಯಾಗಿದ್ದರೆ, ಬೆಳ್ಳಿ ಶೇಕಡಾ 0.12ರಷ್ಟು ಕುಸಿದಿದೆ.

ಕಳೆದ ತಿಂಗಳು ದಾಖಲಾದ ಗರಿಷ್ಠ ಬೆಲೆ 56,200 ರಷ್ಟಿದ್ದ ಚಿನ್ನವು, ಪ್ರತಿ 10 ಗ್ರಾಂಗೆ 5,000 ರೂಪಾಯಿಯಷ್ಟು ಕಡಿಮೆಯಿದೆ. ಅಂತೆಯೇ, ಬೆಳ್ಳಿಯ ಬೆಲೆಗಳು ಈಗ ಸುಮಾರು ಒಂದು ತಿಂಗಳಲ್ಲಿ ಪ್ರತಿ ಕೆಜಿಗೆ 10,000 ರೂಪಾಯಿಗಿಂತ ಕಡಿಮೆಯಾಗಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಹೆಚ್ಚಾಗಿದ್ದು, ಅಮೆರಿಕಾ ಡಾಲರ್ ದುರ್ಬಲವಾಗಿದೆ. ಇದರ ಜೊತೆಗೆ ಕೊರೊನಾವೈರಸ್ ಲಸಿಕೆ ಸಿಗುವುದು ವಿಳಂಬವಾಗಬಹುದು ಎಂಬ ಆತಂಕವು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುವಂತೆ ಮಾಡಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.7ರಷ್ಟು ಏರಿಕೆಯಾಗಿ 1,945.20 ಅಮೆರಿಕನ್ ಡಾಲರ್‌ಗೆ ತಲುಪಿದೆ.


Click it and Unblock the Notifications