ನಿನ್ನೆ ಏರಿಕೆಯಾಗಿದ್ದ ಚಿನ್ನದ ದರವು ಇಂದು ಮತ್ತೆ ಕೊಂಚ ಹೆಚ್ಚಳವಾಗಿದೆ. ಸತತ ಮೂರು ದಿನಗಳ ಕಾಲ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಬಂಗಾರ ದರವು ಮಂಗಳವಾರ ಏರಿಕೆಯಾಗಿದೆ, ಇದಾದ ಬೆನ್ನಲ್ಲೇ ಬುಧವಾರವೂ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ದರ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರವು ಬುಧವಾರ 55,850 ರೂಪಾಯಿಯಿಂದ 55,850 ರೂಪಾಯಿಗೆ ಏರಿಕೆಯಾಗಿದೆ.
ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,930 ರೂಪಾಯಿಯಿಂದ 61,040ಕ್ಕೆ ಹೆಚ್ಚಳವಾಗಿದೆ. ಬೆಳ್ಳಿ ದರ ಮಾತ್ರ ಇಂದು ಇಳಿಕೆಯಾಗಿದೆ. ಕಳೆದ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿ ದರವು ಭಾರೀ ಪ್ರಮಾಣದಲ್ಲಿ ಅಧಿಕವಾಗಿದೆ. ಆದರೆ ಇತ್ತೀಚೆಗೆ ಕೊಂಚ ಏರಿಳಿತ ಸಮತೋಲನದಲ್ಲಿದೆ. ಕೆಲವೊಂದು ನಗರದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಕೆಲವು ನಗರಗಳಲ್ಲಿ ಕೊಂಚ ಕಡಿಮೆಯಿದೆ.

ಅಬಕಾರಿ ಸುಂಕ, ಉತ್ಪಾದನಾ ವೆಚ್ಚಗಳು ಮತ್ತು ರಾಜ್ಯ ತೆರಿಗೆಗಳಂತಹ ನಿರ್ದಿಷ್ಟ ಅಂಶಗಳ ಆಧಾರದ ಮೇಲೆ, ರಾಷ್ಟ್ರದ ವಿವಿಧ ಪ್ರದೇಶಗಳಿಗೆ ಚಿನ್ನದ ಬೆಲೆ ಬೇರೆ ಬೇರೆ ರೀತಿಯಾಗಿರುತ್ತದೆ. ಮಂಗಳೂರಿನಲ್ಲಿರುವ ಚಿನ್ನದ ದರಕ್ಕೂ ಚೆನ್ನೈನಲ್ಲಿರುವ ಚಿನ್ನದ ದರಕ್ಕೂ ವ್ಯತ್ಯಾಸ ಇರುತ್ತದೆ. ಬೆಳ್ಳಿ ದರವು ಕೂಡಾ ಈ ರೀತಿಯೇ ಆಗಿದೆ. ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ತೆರಿಗೆಗಳ ಆಧಾರದಲ್ಲಿ ಚಿನ್ನದ ಬೆಲೆಯು ನಿರ್ಧಾರವಾಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?
3 ದಿನಗಿಂದ ಇಳಿಕೆಯಾಗಿದ್ದ ಚಿನ್ನದ ದರವು ಈಗ ಸತತ ಎರಡು ದಿನಗಳಿಂದ ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 3 ಬಾರಿ ಇಳಿದಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 5 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 1 ಬಾರಿ ಮಾತ್ರ ಸ್ಥಿರವಾಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.
ಏಪ್ರಿಲ್ 26ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 55,950 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಹಿಗ್ಗಿದ್ದು ಪ್ರಸ್ತುತ 61,040 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಕುಗ್ಗಿದ್ದು ಪ್ರಸ್ತುತ 76,500 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜನವರಿ 26ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 60243.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 74577.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.11ರಷ್ಟು ಕುಗ್ಗಿದ್ದು 1,998.08 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.14ರಷ್ಟು ಇಳಿಕೆಯಾಗಿದ್ದು 25.05 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 56,000 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,100 ರೂಪಾಯಿ (+120 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,950 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,040 ರೂಪಾಯಿ (+110 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 56,100 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,190 ರೂಪಾಯಿ (+110 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,950 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,040 ರೂಪಾಯಿ (+110 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 56,000 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,100 ರೂಪಾಯಿ (+120 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 56,000 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,100 ರೂಪಾಯಿ (+120 ರೂಪಾಯಿ)


Click it and Unblock the Notifications