ಎರಡು ದಿನಗಳಿಂದ ಏರಿಕೆಯನ್ನು ಕಂಡಿದ್ದ ಚಿನ್ನದ ದರವು ಗುರುವಾರ ಸ್ಥಿರವಾಗಿದೆ. ಅಕ್ಷಯ ತೃತೀಯ ದಿನದಿಂದ ಆರಂಭವಾಗಿ ಮೂರು ದಿನಗಳ ಕಾಲ ಇಳಿಕೆಯಾಗಿದ್ದ ದರವು ಮಂಗಳವಾರ ಹಾಗೂ ಬುಧವಾರ ಕೊಂಚ ಇಳಿಕೆ ಕಂಡಿದೆ. ಆದರೆ ಬುಧವಾರ ಸ್ಥಿರತೆ ಕಾಯ್ದುಕೊಂಡಿದೆ. ಏಪ್ರಿಲ್ 27ರಂದು ಹತ್ತು ಗ್ರಾಂ ಚಿನ್ನದ ದರವು 55,950 ರೂಪಾಯಿಯಷ್ಟೆ ಇದೆ.
ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 61,040ರಷ್ಟಿದೆ. ಬೆಳ್ಳಿ ದರವು ಇಂದು ಸ್ಥಿರವಾಗಿದೆ. ಕಳೆದ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಅಕ್ಷಯ ತೃತೀಯಕ್ಕೂ ಮುನ್ನ ಹೆಚ್ಚಳವಾಗಿದ್ದ ದರವು ಅಕ್ಷಯ ತೃತೀಯ ದಿನದಿಂದ ಕೊಂಚ ಕುಗ್ಗಿದೆ. ಆದರೆ ಚಿನ್ನ ಈಗಲೂ ದುಬಾರಿಯಾಗಿದೆ. ಕೆಲವೊಂದು ನಗರದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕವಾಗಿ ಏರಿಕೆಯಾಗಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?
2 ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ದರವು ಇಂದು ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 2 ಬಾರಿ ಇಳಿದಿದೆ. 1 ಬಾರಿ ಸ್ಥಿರತೆ ಕಾಯ್ದುಕೊಂಡಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 5 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 1 ಬಾರಿ ಮಾತ್ರ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ.
ಏಪ್ರಿಲ್ 27ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 55,950 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಹಿಗ್ಗಿದ್ದು ಪ್ರಸ್ತುತ 61,040 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಕುಗ್ಗಿದ್ದು ಪ್ರಸ್ತುತ 76,500 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜನವರಿ 27ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 60115.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 74255.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.37ರಷ್ಟು ಹಿಗ್ಗಿದ್ದು 1,999.11 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42ರಷ್ಟು ಏರಿಕೆಯಾಗಿದ್ದು 25.03 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 56,000 ರೂಪಾಯಿ (----)
24 ಕ್ಯಾರೆಟ್ ಚಿನ್ನ: 61,100 ರೂಪಾಯಿ (----)
ಮುಂಬೈ
22 ಕ್ಯಾರೆಟ್ ಚಿನ್ನ: 55,950 ರೂಪಾಯಿ (----)
24 ಕ್ಯಾರೆಟ್ ಚಿನ್ನ: 61,040 ರೂಪಾಯಿ (----)
ದೆಹಲಿ
22 ಕ್ಯಾರೆಟ್ ಚಿನ್ನ: 56,100 ರೂಪಾಯಿ (----)
24 ಕ್ಯಾರೆಟ್ ಚಿನ್ನ: 61,190 ರೂಪಾಯಿ (----)
ಕೇರಳ
22 ಕ್ಯಾರೆಟ್ ಚಿನ್ನ: 55,950 ರೂಪಾಯಿ (----)
24 ಕ್ಯಾರೆಟ್ ಚಿನ್ನ: 61,040 ರೂಪಾಯಿ (----)
ಮಂಗಳೂರು
22 ಕ್ಯಾರೆಟ್ ಚಿನ್ನ: 56,000 ರೂಪಾಯಿ (----)
24 ಕ್ಯಾರೆಟ್ ಚಿನ್ನ: 61,100 ರೂಪಾಯಿ (----)
ಮೈಸೂರು
22 ಕ್ಯಾರೆಟ್ ಚಿನ್ನ: 56,000 ರೂಪಾಯಿ (----)
24 ಕ್ಯಾರೆಟ್ ಚಿನ್ನ: 61,100 ರೂಪಾಯಿ (----)


Click it and Unblock the Notifications