ಕಳೆದ ಹಲವಾರು ದಿನಗಳಿಂದ ಬಂಗಾರ ಹಾಗೂ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಬಂಗಾರ ದರವು ಒಂದು ದಿನ ಏರಿಕೆಯಾದರೆ, ಮತ್ತೊಂದು ದಿನ ಇಳಿಕೆಯಾಗುತ್ತಿದೆ. ಮತ್ತೆ ಸ್ಥಿರತೆ ಕಾಯ್ದುಕೊಳ್ಳುತ್ತಿದೆ. ಕಳೆದ ಮೂರು ವಾರಗಳ ಬೆಳವಣಿಗೆಯನ್ನು ನಾವು ನೋಡಿದಾಗ ಭಾನುವಾರ, ಸೋಮವಾರ ದರವು ಸ್ಥಿರವಾಗಿತ್ತು. ಎರಡು ಬಾರಿ ಹೀಗೆಯೇ ಬೆಳವಣಿಗೆ ಕಂಡಿದೆ. ಆದರೆ ಈ ವಾರ ಮಾತ್ರ ಸೋಮವಾರ ಬಂಗಾರ ದರವು ಇಳಿಕೆ ಕಂಡಿದೆ.
ಬೆಳ್ಳಿ ದರವು ಕೂಡಾ ಇದೇ ರೀತಿಯಾಗಿ ಸಾಗುತ್ತಿದೆ. ಜೂನ್ 11ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 55,500 ರೂಪಾಯಿಯಿಂದ 55,400 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,550 ರೂಪಾಯಿಯಿಂದ 60,450 ರೂಪಾಯಿಗೆ ಇಳಿಕೆ ಕಂಡಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಸ್ಥಿರವಾಗಿದ್ದ ಚಿನ್ನದ ದರವು ಇಂದು ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ 3 ಬಾರಿ ಗೋಲ್ಡ್ ರೇಟ್ ಕುಸಿದಿದ್ದು, 1 ಬಾರಿ ಏರಿಕೆಯಾಗಿದೆ. 1 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 4 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 5 ಬಾರಿ ಸ್ಥಿರವಾಗಿದೆ.
ಜೂನ್ 12ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 55,400 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 100 ರೂಪಾಯಿ ಕುಸಿತ ಕಂಡಿದ್ದು ಪ್ರಸ್ತುತ 60,450 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 200 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 74,300 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜೂನ್ 12ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59868.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 73585.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.25ರಷ್ಟು ಏರಿಕೆಯಾಗಿದ್ದು 1,964.98 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.08ರಷ್ಟು ಕುಗ್ಗಿದ್ದು 24.23 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,450 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,500 ರೂಪಾಯಿ (-100 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60450 ರೂಪಾಯಿ (-100 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,550 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,600 ರೂಪಾಯಿ (-100 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,450 ರೂಪಾಯಿ (-100 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,450 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,500 ರೂಪಾಯಿ (-100 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,450 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,500 ರೂಪಾಯಿ (-100 ರೂಪಾಯಿ)


Click it and Unblock the Notifications