ಬಂಗಾರ ಹಾಗೂ ಬೆಳ್ಳಿ ದರವು ಇಂದು ಏರಿಕೆಯಾಗಿದೆ. ಸತತವಾಗಿ ಎರಡು ದಿನಗಳ ಕಾಲ ಸ್ಥಿರವಾಗಿದ್ದ ಬಂಗಾರ ದರವು ಇಂದು ಜಿಗಿತ ಕಂಡಿದೆ. ಅದಕ್ಕೂ ಮುನ್ನ ಗೋಲ್ಡ್ ರೇಟ್ ಹಾಗೂ ಬೆಳ್ಳಿ ರೇಟ್ ನಿರಂತರವಾಗಿ ಏರಿಳಿತ ಕಂಡಿದೆ. ಒಂದು ದಿನ ಏರಿಕೆ ಮತ್ತೊಂದು ದಿನ ಇಳಿಕೆಯನ್ನು ಕಂಡಿದೆ.
ಜೂನ್ 2ರಂದು ಚಿನ್ನದ ದರ ಹೆಚ್ಚಾಗಿದ್ದು ಅದರ ಬಳಿಕ ಇಂದು (ಜೂನ್ 6) ಮತ್ತೆ ಏರಿಕೆ ಕಂಡಿದೆ. ಬೆಳ್ಳಿ ದರವು ಕೂಡ ಜೂನ್ 2ರ ಬಳಿಕ ಇಂದೇ ಅಧಿಕವಾಗಿದೆ. ಜೂನ್ 6ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 55,300 ರೂಪಾಯಿಯಿಂದ 55,600 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,330 ರೂಪಾಯಿಯಿಂದ 60,650 ರೂಪಾಯಿಗೆ ಜಿಗಿದಿದೆ. ಬೆಳ್ಳಿ ದರ ಇಂದು ಹೆಚ್ಚಳವಾಗಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಸ್ಥಿರವಾಗಿದ್ದ ಚಿನ್ನದ ದರವು ಇಂದು ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು, 2 ಬಾರಿ ಏರಿಕೆಯಾಗಿದೆ. ಎರಡು ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಹೆಚ್ಚಳವಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 4 ಬಾರಿ ಸ್ಥಿರವಾಗಿದೆ.
ಜೂನ್ 6ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 55,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 320 ರೂಪಾಯಿ ಜಿಗಿದಿದ್ದು ಪ್ರಸ್ತುತ 60,650 ರೂಪಾಯಿ ಆಗಿದೆ. ಇಂದು ಬೆಳ್ಳಿ ದರವೂ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಜಿಗಿದು ಪ್ರಸ್ತುತ 73,500 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜೂನ್ 6ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59914.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 71860.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.09ರಷ್ಟು ಇಳಿಕೆಯಾಗಿದ್ದು 1,959.97 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.18ರಷ್ಟು ಕುಗ್ಗಿದ್ದು 23.53 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,650 ರೂಪಾಯಿ (+ 300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,700 ರೂಪಾಯಿ (+ 320 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,600 ರೂಪಾಯಿ (+ 300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,650 ರೂಪಾಯಿ (+ 320 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,750 ರೂಪಾಯಿ (+ 300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,800 ರೂಪಾಯಿ (+ 320 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,600 ರೂಪಾಯಿ (+ 300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,650 ರೂಪಾಯಿ (+ 320 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,650 ರೂಪಾಯಿ (+ 300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,700 ರೂಪಾಯಿ (+ 320 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,650 ರೂಪಾಯಿ (+ 300 ರೂಪಾಯಿ)
24 ಕ್ಯಾರೆಟ್ ಚಿನ್ನ: 60,700 ರೂಪಾಯಿ (+ 320 ರೂಪಾಯಿ)


Click it and Unblock the Notifications