ಬಂಗಾರ ಹಾಗೂ ಬೆಳ್ಳಿ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಒಂದು ದಿನ ಹೆಚ್ಚಳವಾದರೆ ಒಂದು ದಿನ ಇಳಿಕೆಯಾಗುತ್ತಿದೆ. ಹಾಗೆಯೇ ನಡುವಲ್ಲಿ ಸ್ಥಿರತೆಯನ್ನು ಕೂಡಾ ಕಾಯ್ದುಕೊಳ್ಳುತ್ತಿದೆ. ಇಂದು ಕೂಡಾ ಬೆಳ್ಳಿ ಹಾಗೂ ಬಂಗಾರ ದರವು ಸ್ಥಿರವಾಗಿದೆ. ಕಳೆದ ಹತ್ತು ದಿನಗಳ ಬೆಳವಣಿಗೆ ನೋಡಿದಾಗ ಬಹುತೇಕ ಬಾರಿ ಬಂಗಾರ ದರ ಸ್ಥಿರವಾಗಿರುವುದು ಕಾಣಬಹುದಾಗಿದೆ.
ಜೂನ್ 2ರಂದು ಚಿನ್ನದ ದರ ಹೆಚ್ಚಾಗಿದ್ದು ಅದರ ಬಳಿಕ ನಿನ್ನೆ ಮತ್ತೆ ಏರಿಕೆ ಕಂಡಿದೆ. ಬೆಳ್ಳಿ ದರವು ಕೂಡ ಜೂನ್ 2ರ ಬಳಿಕ ನಿನ್ನೆ ಅಧಿಕವಾಗಿದೆ. ಜೂನ್ 7ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 55,600 ರೂಪಾಯಿ ಆಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,650 ರೂಪಾಯಿ ಆಗಿದೆ. ಬೆಳ್ಳಿ ದರ ಇಂದು ಸ್ಥಿರವಾಗಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಏರಿಕೆಯಾಗಿದ್ದ ಚಿನ್ನದ ದರವು ಇಂದು ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು, 1 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರವು ಇಂದು ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 4 ಬಾರಿ ಸ್ಥಿರವಾಗಿದೆ.
ಜೂನ್ 7ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 55,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 60,650 ರೂಪಾಯಿ ಆಗಿದೆ. ಇಂದು ಬೆಳ್ಳಿ ದರವೂ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 73,500 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜೂನ್ 7ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 59832.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 71674.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.22ರಷ್ಟು ಇಳಿಕೆಯಾಗಿದ್ದು 1,959.08 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.61ರಷ್ಟು ಕುಗ್ಗಿದ್ದು 23.46 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,650 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,700 ರೂಪಾಯಿ (--------)
ಮುಂಬೈ
22 ಕ್ಯಾರೆಟ್ ಚಿನ್ನ: 55,600 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,650 ರೂಪಾಯಿ (--------)
ದೆಹಲಿ
22 ಕ್ಯಾರೆಟ್ ಚಿನ್ನ: 55,750 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,800 ರೂಪಾಯಿ (--------)
ಕೇರಳ
22 ಕ್ಯಾರೆಟ್ ಚಿನ್ನ: 55,600 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,650 ರೂಪಾಯಿ (--------)
ಮಂಗಳೂರು
22 ಕ್ಯಾರೆಟ್ ಚಿನ್ನ: 55,650 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,700 ರೂಪಾಯಿ (--------)
ಮೈಸೂರು
22 ಕ್ಯಾರೆಟ್ ಚಿನ್ನ: 55,650 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 60,700 ರೂಪಾಯಿ (--------)


Click it and Unblock the Notifications