ಚಿನ್ನದ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಸ್ಥಿರವಾಗಿರುತ್ತಿದೆ. ಸತತವಾಗಿ ಎರಡು ಬಾರಿ ಚಿನ್ನದ ದರವು ಒಂದು ಬಾರಿ ಏರಿಕೆ, ಅದರ ಮರುದಿನವೇ ಸ್ಥಿರ ಅದಾದ ಬಳಿಕ ಇಳಿಕೆ ಕಂಡಿದೆ. ಅಂದರೆ ಇಂತಹ ಬೆಳವಣಿಗೆ ಎರಡು ಬಾರಿ ಕಂಡು ಬಂದಿದೆ. ಮೇ 1ರಂದು ಹತ್ತು ಗ್ರಾಂ ಚಿನ್ನದ ದರವು 55,850 ರೂಪಾಯಿಯಿಂದ 55,700 ರೂಪಾಯಿಗೆ ಇಳಿಕೆಯಾಗಿದೆ.
ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,930 ರೂಪಾಯಿಯಿಂದ 60,760 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಕಳೆದ ಮೂರು ದಿನಗಳಲ್ಲಿ ಏರಿಕೆ ಇಳಿಕೆ ನಿರಂತರವಾಗಿದೆ. ಆದರೆ ಚಿನ್ನ ಈಗಲೂ ದುಬಾರಿಯಾಗಿದೆ. ಕೆಲವೊಂದು ನಗರದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕವಾಗಿ ಹೆಚ್ಚಳವಾಗಿದೆ. ಅದು ಕೂಡಾ ಈಗ ಮದುವೆ ಸೀಸನ್ ಆದ ಕಾರಣ ಹಳದಿ ಲೋಹ ದುಬಾರಿಯಾಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?
ನಿನ್ನೆ ಸ್ಥಿರವಾಗಿದ್ದ ಚಿನ್ನದ ದರವು ಇಂದು ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 2 ಬಾರಿ ಇಳಿದಿದೆ. 2 ಬಾರಿ ಸ್ಥಿರತೆ ಕಾಯ್ದುಕೊಂಡಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಇಳಿಕೆಯಾಗಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 1 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 4 ಬಾರಿ ಸ್ಥಿರವಾಗಿದೆ.

ಮೇ 1ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 55,700 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 170 ರೂಪಾಯಿ ಕುಗ್ಗಿದ್ದು ಪ್ರಸ್ತುತ 60,760 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 76,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜನವರಿ 28ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59945.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 74155.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.13ರಷ್ಟು ಹಿಗ್ಗಿದ್ದು 1,989.78 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.56ರಷ್ಟು ಏರಿಕೆಯಾಗಿದ್ದು 25.05 ಯುಎಸ್ ಡಾಲರ್ ಆಗಿದೆ. ಮೇ 1ರಂದು ಯಾವುದೇ ವಹಿವಾಟು ಇಲ್ಲ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,750 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,810 ರೂಪಾಯಿ (-170 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,700 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,760 ರೂಪಾಯಿ (-170 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,850 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,910 ರೂಪಾಯಿ (-170 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,700 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,760 ರೂಪಾಯಿ (-170 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,750 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,810 ರೂಪಾಯಿ (-170 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,750 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,810 ರೂಪಾಯಿ (-170 ರೂಪಾಯಿ)


Click it and Unblock the Notifications