ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತವಾಗುತ್ತಿದೆ. ನಿರಂತರವಾಗಿ ಮೂರು ದಿನಗಳ ಕಾಲ ಹಳದಿ ಲೋಹವು ಹೆಚ್ಚಳವಾಗಿದೆ. ಆದರೆ ಇಂದು ಮಾತ್ರ ಬಂಗಾರ ದರವು ಸ್ಥಿರವಾಗಿದೆ. ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಎರಡು ದಿನಗಳ ಕಾಲ ಇಳಿಕೆ ಕಂಡಿದ್ದ ಬಂಗಾರ ದರವು ಅದಾದ ಬಳಿಕ ಏರಿಕೆಯಾಗಿದೆ. ಇಂದು ಸ್ಥಿರವಾಗಿದೆ.
ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆಯು 460 ರೂಪಾಯಿ ಏರಿಕೆಯಾಗಿದ್ದು ಮೇ 11ರಂದು ಸ್ಥಿರವಾಗಿದೆ. ಅದಕ್ಕೂ ಎರಡು ದಿನಕ್ಕೂ ಮುನ್ನ ಬಂಗಾರ ದರ 700 ರೂಪಾಯಿ ಇಳಿಕೆಯಾಗಿದೆ. ಮೇ 11ರಂದು ಹತ್ತು ಗ್ರಾಂ ಚಿನ್ನದ ದರವು 56,950 ರೂಪಾಯಿ ಆಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 62,130 ರೂಪಾಯಿ ಆಗಿದೆ. ಬೆಳ್ಳಿ ದರ ಇಂದು ಇಳಿಕೆಯಾಗಿದೆ.

ಕಳೆದ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಪ್ರಮುಖವಾಗಿ ಇದು ಮದುವೆ ಸೀಸನ್ ಆದ ಕಾರಣದಿಂದಾಗಿ ಹಳದಿ ಲೋಹಕ್ಕೆ ಬೇಡಿಕೆ ಅಧಿಕವಾಗಿ ದರವು ಕೂಡಾ ಅಧಿಕವಾಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಏರಿಕೆಯಾಗಿದ್ದ ಚಿನ್ನದ ದರವು ಇಂದು ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ 3 ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 1 ಬಾರಿ ಇಳಿದಿದೆ. 1 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ.
ಮೇ 11ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರತೆ ಕಾಯ್ದಕೊಂಡಿದ್ದು ಪ್ರಸ್ತುತ 56,950 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 62,130 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 77,600 ರೂಪಾಯಿ ಆಗಿದೆ.
Gold Rate Today: ಸತತ 2ನೇ ದಿನ ಚಿನ್ನದ ಬೆಲೆ ಏರಿಕೆ, ನಿಮ್ಮ ನಗರದಲ್ಲೆಷ್ಟಿದೆ?
ಈ ನಡುವೆ ಕೊನೆಯ ಮೇ 11ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 61223.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 75626.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.17ರಷ್ಟು ಕುಗ್ಗಿದ್ದು 2,028.08 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.86ರಷ್ಟು ಇಳಿಕೆಯಾಗಿದ್ದು 24.92 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 57,000 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,180 ರೂಪಾಯಿ (-------)
ಮುಂಬೈ
22 ಕ್ಯಾರೆಟ್ ಚಿನ್ನ: 56,950 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,130 ರೂಪಾಯಿ (-------)
ದೆಹಲಿ
22 ಕ್ಯಾರೆಟ್ ಚಿನ್ನ: 57,100 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,280 ರೂಪಾಯಿ (-------)
ಕೇರಳ
22 ಕ್ಯಾರೆಟ್ ಚಿನ್ನ: 56,950 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,130 ರೂಪಾಯಿ (-------)
ಮಂಗಳೂರು
22 ಕ್ಯಾರೆಟ್ ಚಿನ್ನ: 57,000 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,180 ರೂಪಾಯಿ (-------)
ಮೈಸೂರು
22 ಕ್ಯಾರೆಟ್ ಚಿನ್ನ: 57,000 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,180 ರೂಪಾಯಿ (-------)


Click it and Unblock the Notifications