ಬಂಗಾರ ದರವು ಇಂದು ಕೊಂಚ ಏರಿಕೆಯಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ಸಾರ್ವಕಾಲಿಕವಾಗಿ ಏರಿಕೆಯನ್ನು ಕಂಡಿದೆ. ಈ ಹಿಂದೆ ಹಲವಾರು ಬಾರಿ ಹಳದಿ ಲೋಹವು ಹೆಚ್ಚಳ ಕಂಡಿದೆ. ನಾವು ಕಳೆದ ಹತ್ತು ದಿನಗಳ ಬೆಳವಣಿಗೆಯನ್ನು ನೋಡಿದಾಗ ಬಂಗಾರವು ದುಬಾರಿಯಾಗುತ್ತಾ ಸಾಗಿರುವುದು ಕಂಡು ಬಂದಿದೆ. ಇನ್ನು ಇಂದು ಬೆಳ್ಳಿ ದರವು ಕೂಡಾ ಕೊಂಚ ಏರಿದೆ.
ಈ ಹಿಂದೆ ಮೂರು ದಿನಗಳಲ್ಲಿ ಚಿನ್ನದ ಬೆಲೆಯು 460 ರೂಪಾಯಿ ಏರಿಕೆಯಾಗಿದ್ದು ಮೇ 11ರಂದು ಸ್ಥಿರವಾಗಿದೆ. ಅದಾದ ಮರುದಿನವೇ ಇಳಿಕೆ ಕಂಡಿದ್ದು, ಇಂದು ಮತ್ತೆ ಹೆಚ್ಚಳವಾಗಿದೆ. ಮೇ 13ರಂದು ಹತ್ತು ಗ್ರಾಂ ಚಿನ್ನದ ದರವು 56,550 ರೂಪಾಯಿಯಿಂದ 56,650 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 61,690 ರೂಪಾಯಿಯಿಂದ 61,800 ರೂಪಾಯಿಗೆ ಹಿಗ್ಗಿದೆ. ಬೆಳ್ಳಿ ದರ ಇಂದು ಇಳಿಕೆಯಾಗಿದೆ.

ಕಳೆದ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಪ್ರಮುಖವಾಗಿ ಇದು ಮದುವೆ ಸೀಸನ್ ಆದ ಕಾರಣದಿಂದಾಗಿ ಹಳದಿ ಲೋಹಕ್ಕೆ ಬೇಡಿಕೆ ಅಧಿಕವಾಗಿ ದರವು ಕೂಡಾ ಅಧಿಕವಾಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರವು ಇಂದು ಕೊಂಚ ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 3 ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 1 ಬಾರಿ ಇಳಿದಿದೆ. 1 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ. 1 ಬಾರಿ ಮಾತ್ರ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ.
ಮೇ 13ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಏರಿಕೆ ಕಂಡಿದ್ದು ಪ್ರಸ್ತುತ 56,650 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಹಿಗ್ಗಿದ್ದು ಪ್ರಸ್ತುತ 61,800 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 74,800 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಮೇ 12ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 60635.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 73100.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.26ರಷ್ಟು ಕುಗ್ಗಿದ್ದು 2,011.05 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.77ರಷ್ಟು ಇಳಿಕೆಯಾಗಿದ್ದು 23.98 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 56,700 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,850 ರೂಪಾಯಿ (+110 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 56,650 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,800 ರೂಪಾಯಿ (+110 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 56,800 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 61,950 ರೂಪಾಯಿ (+110 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 56,650 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,800 ರೂಪಾಯಿ (+110 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 56,700 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,850 ರೂಪಾಯಿ (+110 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 56,700 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,850 ರೂಪಾಯಿ (+110 ರೂಪಾಯಿ)


Click it and Unblock the Notifications