ಬಂಗಾರ ದರವು ಕಳೆದ ಕಲೆವು ದಿನಗಳಿಂದ ಕೊಂಚ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿದೆ. ಈ ಹಿಂದೆ ದಿಡೀರ್ ಆಗಿ ಭಾರೀ ಪ್ರಮಾಣದಲ್ಲಿ ಏರಿಕೆ, ದಿಡೀರ್ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದ ಹಳದಿ ಲೋಹದ ದರವು ಈಗ ಹೆಚ್ಚು ಏರಿಳಿಕೆ ಕಾಣುತ್ತಿಲ್ಲ. ಸತತ ಎರಡು ದಿನಗಳಿಂದ ಸ್ಥಿರವಾಗಿದ ಗೋಲ್ಡ್ ರೇಟ್ ಇಂದು ಕೊಂಚ ಹೆಚ್ಚಳವಾಗಿದೆ.
ಮೇ 13ರಂದು ಕೊಂಚ ಏರಿಕೆ ಕಂಡಿದ್ದ ಬಂಗಾರ ದರವು ಅದಾದ ಬಳಿಕ ಎರಡು ದಿನಗಳ ಕಾಲ ಸ್ಥಿರವಾಗಿತ್ತು. ಈಗ ಮತ್ತೆ ಕೊಂಚ ಏರಿಕೆಯಾಗಿದೆ. ಮೇ 16ರಂದು ಹತ್ತು ಗ್ರಾಂ ಚಿನ್ನದ ದರವು 56,650ರಿಂದ 56,750 ರೂಪಾಯಿಗೆ ತಲುಪಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 61,800 ರೂಪಾಯಿಯಿಂದ 61,910 ರೂಪಾಯಿಗೆ ಜಿಗಿದಿದೆ. ಬೆಳ್ಳಿ ದರ ಇಂದು ಏರಿದೆ.

ಕಳೆದ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಪ್ರಮುಖವಾಗಿ ಇದು ಮದುವೆ ಸೀಸನ್ ಆದ ಕಾರಣದಿಂದಾಗಿ ಹಳದಿ ಲೋಹಕ್ಕೆ ಬೇಡಿಕೆ ಅಧಿಕವಾಗಿ ದರವು ಕೂಡಾ ಅಧಿಕವಾಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಸ್ಥಿರವಾಗಿದ್ದ ಚಿನ್ನದ ದರವು ಇಂದು ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 1 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 2 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ. 4 ಬಾರಿ ಸ್ಥಿರವಾಗಿದೆ.
ಮೇ 16ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಏರಿಕೆಯಾಗಿದ್ದು ಪ್ರಸ್ತುತ 56,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಜಿಗಿತ ಕಂಡಿದ್ದು ಪ್ರಸ್ತುತ 61,910 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಜಿಗಿತ ಕಂಡು ಪ್ರಸ್ತುತ 75,100 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಮೇ 16ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 60765.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 72760.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.31ರಷ್ಟು ಕುಗ್ಗಿದ್ದು 2,008.2 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.00ರಷ್ಟು ಇಳಿಕೆಯಾಗಿದ್ದು 23.84 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 56,800 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,960 ರೂಪಾಯಿ (+110 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 56,750 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,910 ರೂಪಾಯಿ (+110 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 56,900 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 62,060 ರೂಪಾಯಿ (+110 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 56,750 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,910 ರೂಪಾಯಿ (+110 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 56,800 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,960 ರೂಪಾಯಿ (+110 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 56,800 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 61,960 ರೂಪಾಯಿ (+110 ರೂಪಾಯಿ)


Click it and Unblock the Notifications