Gold rate in India Today: ಚಿನ್ನದ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳಿಂದ ಏರಿಕೆ ಕಾಣುತ್ತಲೇ ಇದೆ. ಅಷ್ಟೇ ಅಲ್ಲದೇ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಏರಿಕೆಯನ್ನು ಕಂಡಿದೆ. ಈ ಬೆಲೆ ಏರಿಕೆಯಿಂದ ಆಭರಣ ಪ್ರಿಯರಿಗೆ ಶಾಕ್ ಎದುರಾಗಿದ್ದು,ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ..
ಹೌದು,ಚಿನ್ನದ ಬೆಲೆ ಏರಿಕೆಯಾಗುತ್ತಿರುವುದರಿಂದ ಚಿನ್ನ ಖರೀದಿ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಭಾರತದಲ್ಲಿಇಂದು ಶುಕ್ರವಾರ ( ಡಿ.27) 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 250 ರೂಪಾಯಿ ಏರಿಕೆಯಾಗಿದೆ.ಬೆಳ್ಳಿಯ ದರ ಕೂಡ ಹೆಚ್ಚಳವಾಗಿದೆ.

ಭಾರತದಲ್ಲಿ ಇಂದಿನ ಚಿನ್ನದ ದರಗಳು
ಭಾರತದಲ್ಲಿ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,150 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,800 ರೂಪಯಿಗಳ ಮಾರಾಟ ನಡೆಯುತ್ತಿದೆ. ಇನ್ನೂ ಪ್ರತಿ 22 ಕ್ಯಾರೆಟ್‌ನ 10 ಗ್ರಾಂಗೆ 250 ರೂಪಾಯಿ ಏರಿಕೆಯಾಗಿದ್ದು ಇಂದು 71500 ರೂಪಾಯಿ ಇದೆ. ನಿನ್ನೆ ಗುರುವಾರ ಕೂಡ 250 ರೂಪಾಯಿ ಏರಿಕೆಯಾಗಿತ್ತು. ಕಳೆದ 3 ದಿನಗಳಲ್ಲಿ ಒಟ್ಟು 600 ರೂಪಾಯಿ ಏರಿಕೆಯಾಗಿದೆ.
24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯಲ್ಲೂ ಸತತವಾಗಿ ಏರಿಕೆ ಕಂಡಿದೆ. ಇಂದು ಶುಕ್ರವಾರ ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲ 270 ರೂಪಾಯಿ ಏರಿಕೆಯಾಗಿದ್ದು 78000 ರೂ ವಹಿವಾಟು ನಡೆಸುತ್ತಿದೆ. ನಿನ್ನೆ ಗುರುವಾರ ಕೂಡ ಚಿನ್ನದ ಬೆಲೆಯಲ್ಲಿ 280 ರೂಪಾಯಿ ಏರಿಕೆಯಾಗಿತ್ತು.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ ನಿನ್ನೆ 7,12,500 ರೂಪಾಯಿ ಇತ್ತು. ಅದೇ ಚಿನ್ನ ಇಂದು 7,15,000 ಆಗಿದೆ. 2,500ರೂಗಳಷ್ಟು ಬೆಲೆ ಏರಿಕೆಯನ್ನು ಕಂಡಿದೆ. 100 ಗ್ರಾಂ ಚಿನ್ನದ 24 ಕೆ ಬೆಲೆ ಗುರುವಾರ 7,77,300 ಇತ್ತು. ಇಂದು ಶುಕ್ರವಾರ 7,80,000 ರೂ.ಗಳ ವಹಿವಾಟು ನಡೆಸುತ್ತಿದೆ ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನ 2,700 ರೂಗಳಷ್ಟು ಏರಿಕೆ ಕಂಡಿದೆ.
ಇಂದು ಭಾರತದಲ್ಲಿ ಬೆಳ್ಳಿ ದರಗಳು
ಭಾರತದಲ್ಲಿ, ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 92,500 ರೂ ಮತ್ತು ಪ್ರತಿ ಗ್ರಾಂಗೆ ರೂ 92.50 ಆಗಿದೆ. ನಿನ್ನೆ 10 ಗ್ರಾಂ ಬೆಳ್ಳಿ 916 ರೂಗಳ ವ್ಯಾಪಾರವಿತ್ತು ಆದರೆ ಇದು ಅದೇ ಬೆಳ್ಳಿ 925 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,250 ರುಪಾಯಿ ಇದೆ. ಒಂದು ಕಿಲೋಗ್ರಾಂ ಬೆಳ್ಳಿಯಲ್ಲೂ ಸಹ ಏರಿಕೆ ಕಂಡಿದು ಪ್ರಸ್ತುತ 92,500ರೂಗಳ ವಹಿವಾಟುವಿದೆ.ಡಿಸೆಂಬರ್ ಆರಂಭದಿಂದಲೂ ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ. ಆದರೆ, ನಿನ್ನೆ ಬೆಳ್ಳಿ ಬೆಲೆ ಏರಿಕೆಯಾಗಿತ್ತು.ಇಂದು ಸಹ ಅದೇ ಬೆಲೆ ಏರಿಕೆಯ ಬೆಳವಣಿಗೆ ಮುಂದುವರಿದಿದೆ.
ರಾಯಿಟರ್ಸ್ ಪ್ರಕಾರ, 0221 GMT ನಂತೆ ಸ್ಪಾಟ್ ಚಿನ್ನವು ಶೇ. 0.2 ರಷ್ಟು ಕುಸಿದು $ 2,630.28 ಕ್ಕೆ ತಲುಪಿದೆ. $2,649.10 ನಲ್ಲಿ, U.S. ಚಿನ್ನದ ಭವಿಷ್ಯವು ಶೇ.0.2 ಕುಸಿಯಿತು. ಪಲ್ಲಾಡಿಯಮ್ ಶೇ.0.3 ಕುಸಿದು $922.58, ಸ್ಪಾಟ್ ಬೆಳ್ಳಿ ಶೇ.0.2ಇಳಿದು $29.75 ಔನ್ಸ್ ಇದೆ.ಆದರೆ ಪ್ಲಾಟಿನಂ ಶೇ.0.1 ಏರಿಕೆಯಾಗಿ $936.85 ಇದೆ.
MCX ಗೋಲ್ಡ್ ರೇಟ್ ಹೇಗಿದೆ?
ದೇಶೀಯ ಮಟ್ಟದಲ್ಲಿ ಚಿನ್ನ ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ರಚನೆಯೊಂದಿಗೆ MCX ಗೋಲ್ಡ್ ಪ್ರಮುಖ ಮಟ್ಟವಾದ 76800 ಕ್ಕಿಂತ ಮುಚ್ಚಲ್ಪಟ್ಟಿದೆ. ಸರಕು 50-ದಿನಗಳ EMA ಯ ಧನಾತ್ಮಕ ಬ್ರೇಕ್‌ಔಟ್ ಅನ್ನು ಅನುಭವಿಸಿತು.
ಚಿನ್ನ ಬೆಂಬಲ ಮತ್ತು ಪ್ರತಿರೋಧದ ವಿಷಯದಲ್ಲಿ, MCX ಗೋಲ್ಡ್ 77000/77420 ಮಟ್ಟಗಳಲ್ಲಿ ಪ್ರತಿರೋಧವನ್ನು ಎದುರಿಸಬಹುದು. 77420 ಕ್ಕಿಂತ ಹೆಚ್ಚಿನ ವಿರಾಮದೊಂದಿಗೆ ಸಂಭಾವ್ಯವಾಗಿ 77850/78200 ಮಟ್ಟಗಳ ಕಡೆಗೆ ಬೆಲೆಗಳನ್ನು ತಳ್ಳುಬಹುದು. 76580/76350 ಮಟ್ಟಗಳಲ್ಲಿ ಬೆಂಬಲವನ್ನು ಗಮನಿಸಲಾಗಿದೆ. 76350 ಕ್ಕಿಂತ ಕಡಿಮೆಯಿರುವಾಗ ಸರಕುಗಳನ್ನು 76000/75650 ಮಟ್ಟಗಳಿಗೆ ಎಳೆಯಬಹುದು ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹೆಚ್ಚು ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈವೇಟ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಇಂದು ಸ್ಪಾಟ್ ಗೋಲ್ಡ್ ರೇಟ್ ಹೇಗಿದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆ ಕಾಣುತ್ತಲೇ ಇದೆ. ಮತ್ತೆ ಚಿನ್ನ ಏರಿಕೆಯ ದಾಖಲೆಯ ಎತ್ತರದತ್ತ ಸಾಗುತ್ತಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ, ಪ್ರತಿ ಔನ್ಸ್ ಚಿನ್ನದ ಬೆಲೆಯಲ್ಲಿ 15 ಡಾಲರ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಇಂದು ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್ ಗೆ 2632 ಡಾಲರ್ ಗೆ ಏರಿಕೆಯಾಗಿದೆ. ಸ್ಪಾಟ್ ಬೆಳ್ಳಿ ದರ ಪ್ರತಿ ಔನ್ಸ್ ಗೆ 29.82 ಡಾಲರ್ ತಲುಪಿದೆ. ಮತ್ತೊಂದೆಡೆ. ಭಾರತೀಯ ರೂಪಾಯಿ ಮೌಲ್ಯ ಕೊಂಚ ಚೇತರಿಸಿಕೊಂಡಿದೆ. ಪ್ರಸ್ತುತ ರೂ.85,320ರಲ್ಲಿ ವಹಿವಾಟು ನಡೆಸುತ್ತಿದೆ.
ಇಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು
| ನಗರ | ಇಂದಿನ ಚಿನ್ನದ ಬೆಲೆ 22K | ||
| ಚೆನ್ನೈ | 7,150 ರೂ | ||
| ಮುಂಬೈ | 7,150 ರೂ | ||
| ದೆಹಲಿ | 7,165 ರೂ | ||
| ಕೋಲ್ಕತ್ತಾ | 7,150 ರೂ | ||
| ಬೆಂಗಳೂರು | 7,150 ರೂ | ||
| ಹೈದರಾಬಾದ್ | 7,150 ರೂ | ||


Click it and Unblock the Notifications