ಯುಗಾದಿ ಹಬ್ಬದ ದಿನವೇ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಶನಿವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆಯಾದರೆ, 1 ಕೆಜಿ ಬೆಳ್ಳಿ ದರದಲ್ಲಿ 800 ರೂಪಾಯಿ ಇಳಿಕೆಯಾಗಿದೆ.
ದೇಶದಲ್ಲಿ ಏಪ್ರಿಲ್ 2ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆಯಾಗಿದ್ದು, 47,950 ರೂಪಾಯಿ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 52,480 ರೂಪಾಯಿ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ 800 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 66,800 ರೂಪಾಯಿ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 1ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51275 ರೂ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.63ರಷ್ಟು ಇಳಿಕೆಯಾಗಿ 1,924.80 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.77ರಷ್ಟು ಇಳಿಕೆಯಾಗಿದ್ದು, 24.62 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,480 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,480 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,480 ರೂ. ಇದೆ. ಚೆನ್ನೈನಲ್ಲಿ 48,200 ರೂ. ಹಾಗೂ ಅಪರಂಜಿ 52,580 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 71,300 ರೂಪಾಯಿ
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 71,300 ರೂಪಾಯಿ
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 71,300 ರೂಪಾಯಿ
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 66,800 ರೂಪಾಯಿ
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 66,800 ರೂಪಾಯಿ
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 66,800 ರೂಪಾಯಿ
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,300 ರೂ
24 ಕ್ಯಾರೆಟ್ ಚಿನ್ನ 52,690 ರೂ
ಬೆಳ್ಳಿ ದರ: 66,800 ರೂಪಾಯಿ
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,100 ರೂ (-150 ರೂ)
24 ಕ್ಯಾರೆಟ್ ಚಿನ್ನ 52,450 ರೂ (+10 ರೂ)
ಬೆಳ್ಳಿ ದರ: 66,800 ರೂಪಾಯಿ
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,200 ರೂ
24 ಕ್ಯಾರೆಟ್ ಚಿನ್ನ 52,580 ರೂ
ಬೆಳ್ಳಿ ದರ: 71,300 ರೂಪಾಯಿ
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,200 ರೂ
24 ಕ್ಯಾರೆಟ್ ಚಿನ್ನ 52,580 ರೂ
ಬೆಳ್ಳಿ ದರ: 71,300 ರೂಪಾಯಿ
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 71,300 ರೂಪಾಯಿ
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 71,300 ರೂಪಾಯಿ
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,030 ರೂ
24 ಕ್ಯಾರೆಟ್ ಚಿನ್ನ 52,350 ರೂ
ಬೆಳ್ಳಿ ದರ: 66,800 ರೂಪಾಯಿ
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,030 ರೂ
24 ಕ್ಯಾರೆಟ್ ಚಿನ್ನ 52,350 ರೂ
ಬೆಳ್ಳಿ ದರ: 66,800 ರೂಪಾಯಿ
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,950 ರೂ (-150 ರೂ)
24 ಕ್ಯಾರೆಟ್ ಚಿನ್ನ 52,310 ರೂ (+10 ರೂ)
ಬೆಳ್ಳಿ ದರ: 66,800 ರೂಪಾಯಿ
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,100 ರೂ
24 ಕ್ಯಾರೆಟ್ ಚಿನ್ನ 52,450 ರೂ
ಬೆಳ್ಳಿ ದರ: 66,800 ರೂಪಾಯಿ


Click it and Unblock the Notifications