ಭಾರತದ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 600 ರೂಪಾಯಿ ಏರಿಕೆ ಕಂಡಿದೆ. ಶನಿವಾರ ಒಂದೇ ದಿನ 350 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂಪಾಯಿ ಏರಿಕೆಯಾಗಿದ್ದು, 48,600 ರೂಪಾಯಿ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 390 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 53,020 ರೂಪಾಯಿ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 9ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52099 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.74ರಷ್ಟು ಏರಿಕೆಯಾಗಿ 1,947.57 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57ರಷ್ಟು ಏರಿಕೆಯಾಗಿದ್ದು, 24.78 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಚೆನ್ನೈನಲ್ಲಿ 49,190 ರೂ. ಹಾಗೂ ಅಪರಂಜಿ 53,660 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರೂ ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 71,500 ರೂಪಾಯಿ
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 71,500 ರೂಪಾಯಿ
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 71,500 ರೂಪಾಯಿ
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 67,100 ರೂಪಾಯಿ
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 67,100 ರೂಪಾಯಿ
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 67,100 ರೂಪಾಯಿ
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,700 ರೂ
24 ಕ್ಯಾರೆಟ್ ಚಿನ್ನ 53,120 ರೂ
ಬೆಳ್ಳಿ ದರ: 67,100 ರೂಪಾಯಿ
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,750 ರೂ
24 ಕ್ಯಾರೆಟ್ ಚಿನ್ನ 53,170 ರೂ
ಬೆಳ್ಳಿ ದರ: 67,100 ರೂಪಾಯಿ
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,190 ರೂ
24 ಕ್ಯಾರೆಟ್ ಚಿನ್ನ 53,660 ರೂ
ಬೆಳ್ಳಿ ದರ: 71,500 ರೂಪಾಯಿ
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,190 ರೂ
24 ಕ್ಯಾರೆಟ್ ಚಿನ್ನ 53,660 ರೂ
ಬೆಳ್ಳಿ ದರ: 71,500 ರೂಪಾಯಿ
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 71,500 ರೂಪಾಯಿ
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 71,500 ರೂಪಾಯಿ
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,650 ರೂ
24 ಕ್ಯಾರೆಟ್ ಚಿನ್ನ 53,070 ರೂ
ಬೆಳ್ಳಿ ದರ: 67,100 ರೂಪಾಯಿ
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,650 ರೂ
24 ಕ್ಯಾರೆಟ್ ಚಿನ್ನ 53,070 ರೂ
ಬೆಳ್ಳಿ ದರ: 67,100 ರೂಪಾಯಿ
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,600 ರೂ
24 ಕ್ಯಾರೆಟ್ ಚಿನ್ನ 53,020 ರೂ
ಬೆಳ್ಳಿ ದರ: 67,100 ರೂಪಾಯಿ
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,750 ರೂ
24 ಕ್ಯಾರೆಟ್ ಚಿನ್ನ 53,170 ರೂ
ಬೆಳ್ಳಿ ದರ: 67,100 ರೂಪಾಯಿ


Click it and Unblock the Notifications