ಬಂಗಾರ ಹಾಗೂ ಬೆಳ್ಳಿ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಇಂದು ಏರಿಕೆಯಾಗಿದೆ. ಇನ್ನು ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಜಿಗಿತ ಕಂಡಿದೆ. ಒಟ್ಟಾರೆಯಾಗಿ ಕಳೆದ ಹಲವಾರು ದಿನಗಳಿಂದ ದರದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಇಳಿಕೆಯನ್ನು ನಾವು ಕಾಣಬಹುದಾಗಿದೆ. ಇನ್ನು ಈಗಾಗಲೇ ಚಿನ್ನವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಬೇಡಿಕೆ ಕುಸಿದಿದೆ ಎಂದು ವರದಿಗಳು ಹೇಳಿದೆ.
ಆಗಸ್ಟ್ 1ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 55,250 ರೂಪಾಯಿಯಿಂದ 55,400 ರೂಪಾಯಿಗೆ ಏರಿಕೆ ಕಂಡಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,280 ರೂಪಾಯಿಯಿಂದ 60,440 ರೂಪಾಯಿಗೆ ಜಿಗಿತವಾಗಿದೆ. ಇನ್ನು ಬೆಳ್ಳಿ ದರವನ್ನು ನೋಡಿದಾಗ ನಿರಂತರವಾಗಿ ಏರಿಳಿತ ಕಂಡಿದೆ. ಸತತವಾಗಿ ಎರಡು ದಿನಗಳ ಕಾಲ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಜಿಗಿತ ಕಂಡಿದೆ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಇಳಿಕೆಯಾಗಿದ್ದ ಬಂಗಾರ ದರವು ಇಂದು ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 2 ಬಾರಿ ಏರಿಕೆಯಾಗಿದೆ. ಒಂದು ಬಾರಿ ಮಾತ್ರ ಬಂಗಾರ ದರವು ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಬೆಳ್ಳಿ ದರ ಇಂದು ಹೆಚ್ಚಳವಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಸ್ಥಿರವಾಗಿದೆ. 3 ಬಾರಿ ಇಳಿಕೆಯಾಗಿದೆ.
ಆಗಸ್ಟ್ 1ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಏರಿಕೆಯಾಗಿದ್ದು 55,400 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 160 ರೂಪಾಯಿ ಜಿಗಿತ ಕಂಡಿದ್ದು, ಪ್ರಸ್ತುತ 60,440 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 1000 ರೂಪಾಯಿ ಜಿಗಿದಿದ್ದು ಪ್ರಸ್ತುತ 78,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 1ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 59259.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 74720.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.41ರಷ್ಟು ಏರಿಕೆ ಕಂಡಿದ್ದು 1,956.05 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.94ರಷ್ಟು ಹೆಚ್ಚಿದ್ದು 0.94 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,440 ರೂಪಾಯಿ (+30 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,440 ರೂಪಾಯಿ (+160 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,550 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,570 ರೂಪಾಯಿ (+140 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,440 ರೂಪಾಯಿ (+160 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,440 ರೂಪಾಯಿ (+30 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 60,440 ರೂಪಾಯಿ (+30 ರೂಪಾಯಿ)


Click it and Unblock the Notifications