ಸತತವಾಗಿ ಮೂರು ದಿನಗಳಿಂದ ಬಂಗಾರ ದರವು ಇಳಿಕೆಯನ್ನು ಕಂಡಿದೆ. ಈ ಹಿಂದೆ ಆಗಸ್ಟ್ 5ರಂದು ಚಿನ್ನದ ಬೆಲೆಯು ಏರಿಕೆಯನ್ನು ಕಂಡಿದ್ದು, ಅದಾದ ಬಳಿಕ ಹೆಚ್ಚಳವಾಗಿಲ್ಲ. ಎರಡು ದಿನಗಳ ಕಾಲ ಸ್ಥಿರವಾಗಿದ್ದು, ಬಳಿಕ ನಿರಂತರವಾಗಿ ಇಳಿಕೆಯಾಗಿದೆ. ಮೂರು ದಿನದಲ್ಲಿ ಕೊಂಚ ಕೊಂಚ ಪ್ರಮಾಣದಲ್ಲೇ ಗೋಲ್ಡ್ ರೇಟ್ ಕುಸಿತ ಕಂಡಿದ್ದರೂ ಕೂಡಾ ಒಟ್ಟಾಗಿ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂಪಾಯಿ ಕಡಿತ ಉಂಟಾಗಿದೆ.
ಇನ್ನು ಬೆಳ್ಳಿ ದರವು ಕೂಡಾ ಬಂಗಾರದಂತೆ ನಿರಂತರವಾಗಿ ಇಳಿಕೆ ಕಾಣುತ್ತಾ ಬರುತ್ತಿದೆ. ಸತತವಾಗಿ ನಾಲ್ಕು ದಿನಗಳಿಂದ ಸಿಲ್ವರ್ ರೇಟ್ ಕುಸಿತ ಕಾಣುತ್ತಿದೆ. ಒಟ್ಟಾಗಿ 4 ದಿನದಲ್ಲಿ 2100 ರೂಪಾಯಿ ಕುಗ್ಗಿದೆ. ಆಗಸ್ಟ್ 5ರಂದು ಬೆಳ್ಳಿ ಬೆಲೆ ಏರಿಕೆಯಾಗಿದ್ದು ಅದಾದ ಬಳಿಕ ಹೆಚ್ಚಳವಾಗಿಲ್ಲ. ಏರಿಕೆಗಿಂತ ಅಧಿಕ ದರ ಇಳಿಕೆ ಕಂಡು ಬಂದಿದೆ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಇಳಿಕೆಯಾಗಿದ್ದ ಬಂಗಾರ ದರವು ಇಂದು ಮತ್ತೆ ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ 3 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 2 ಬಾರಿ ಬಂಗಾರ ದರವು ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 5 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಮತ್ತೆ ಕುಸಿತ ಕಂಡಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಸ್ಥಿರವಾಗಿದೆ. 7 ಬಾರಿ ಇಳಿಕೆಯಾಗಿದೆ.
ಆಗಸ್ಟ್ 10ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 250 ರೂಪಾಯಿ ಕುಗ್ಗಿದ್ದು 54,700 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 280 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 59,670 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 73,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 10ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59026.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 70195.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.10ರಷ್ಟು ಏರಿಕೆ ಕಂಡಿದ್ದು 1,918.86 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.47ರಷ್ಟು ಕುಗ್ಗಿದ್ದು 22.8 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 59,670 ರೂಪಾಯಿ (-280 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 59,670 ರೂಪಾಯಿ (-280 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,850 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 59,820 ರೂಪಾಯಿ (-290 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 59,670 ರೂಪಾಯಿ (-280 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 59,670 ರೂಪಾಯಿ (-280 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 59,670 ರೂಪಾಯಿ (-280 ರೂಪಾಯಿ)

Click it and Unblock the Notifications