ಬಂಗಾರ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಒಂದು ದಿನ ಏರಿಕೆ, ಒಂದು ದಿನ ಇಳಿಕೆ, ಒಂದು ದಿನ ಸ್ಥಿರವಾಗಿದೆ. ಒಟ್ಟಾರೆಯಾಗಿ ನಾವು ಕಳೆದ ಹತ್ತು ದಿನಗಳ ಬೆಳವಣಿಗೆಯನ್ನು ನೋಡಿದಾಗ ಬಂಗಾರ ದರವು 900 ರೂಪಾಯಿ ಹೆಚ್ಚಳವಾಗಿದ್ದರೆ, 900 ರೂಪಾಯಿ ಇಳಿಕೆಯಾಗಿದೆ. ಅಂದರೆ ಗೋಲ್ಡ್ ರೇಟ್ ಏರಿಕೆ, ಇಳಿಕೆ ಸರಿಸಮವಾಗಿದೆ.
ಆಗಸ್ಟ್ 5ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 54,950 ರೂಪಾಯಿಯಿಂದ 55,150 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 59,950 ರೂಪಾಯಿಯಿಂದ 60,160 ರೂಪಾಯಿಗೆ ಜಿಗಿತ ಕಂಡಿದೆ. ಇನ್ನು ಬೆಳ್ಳಿ ದರವು ಸತತವಾಗಿ ಮೂರು ದಿನಗಳಿಂದ ಇಳಿಕೆ ಕಂಡಿತ್ತು. ಆದರೆ ಇಂದು ಏರಿಕೆಯಾಗಿದೆ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಸ್ಥಿರವಾಗಿದ್ದ ಬಂಗಾರ ದರವು ಇಂದು ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 2 ಬಾರಿ ಏರಿಕೆಯಾಗಿದೆ. ಒಂದು ಬಾರಿ ಬಂಗಾರ ದರವು ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 4 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಬೆಳ್ಳಿ ದರ ಸತತವಾಗಿ ಮೂರು ದಿನಗಳಿಂದ ಇಳಿಕೆಯಾಗಿತ್ತು, ಇಂದು ಜಿಗಿತ ಕಂಡಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಸ್ಥಿರವಾಗಿದೆ. 4 ಬಾರಿ ಇಳಿಕೆಯಾಗಿದೆ.
ಆಗಸ್ಟ್ 5ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು 55,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 210 ರೂಪಾಯಿ ಜಿಗಿತ ಕಂಡಿದ್ದು ಪ್ರಸ್ತುತ 60,160 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 75,100 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 4ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59522.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 72488.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.36ರಷ್ಟು ಏರಿಕೆ ಕಂಡಿದ್ದು 1,942.8 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.14ರಷ್ಟು ಹಿಗ್ಗಿದ್ದು 23.63 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (+210 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (+210 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,300 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 60,310 ರೂಪಾಯಿ (+210 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (+210 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (+210 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (+200 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (+210 ರೂಪಾಯಿ)

Click it and Unblock the Notifications