ಸತತವಾಗಿ ಎರಡನೇ ದಿನವೂ ಬಂಗಾರ ದರ ಸ್ಥಿರವಾಗಿದೆ. ಸಾಮಾನ್ಯವಾಗಿ ಪ್ರಸ್ತುತ ಯಾವುದೇ ಶುಭಕಾರ್ಯಗಳನ್ನು ನಡೆಸಲಾಗುವುದಿಲ್ಲ. ಈ ಸಂದರ್ಭದಲ್ಲಿ ಪ್ರತಿ ವರ್ಷವು ಕೂಡಾ ಬಂಗಾರ ದರವು ಇಳಿಕೆಯಾಗುತ್ತದೆ. ಆದರ ಈ ವರ್ಷ ಮಾತ್ರ ಹೆಚ್ಚು ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ. ಗೋಲ್ಡ್ ರೇಟ್ ಎಷ್ಟು ಇಳಿಕೆಯಾಗಿಯೋ ಅಷ್ಟೇ ಪ್ರಮಾಣದಲ್ಲಿ ದರ ಏರಿಕೆಯೂ ಆಗಿದೆ. ಒಟ್ಟಿನಲ್ಲಿ ನಾವು ನೋಡಿದಾಗ ಬಂಗಾರ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ.
ಬೆಳ್ಳಿ ದರವು ಕೂಡಾ ಏರಿಳಿತ ಕಾಣುತ್ತಿದೆ. ಸತತವಾಗಿ ಮೂರು ದಿನಗಳ ಕಾಲ ಕುಸಿತ ಕಂಡಿದ್ದ ಬೆಳ್ಳಿ ದರವು ಅದಾದ ಬಳಿಕ ಒಂದು ದಿನ ಏರಿಕೆಯಾಗಿದೆ, ಅದರ ಮರುದಿನ ಸಿಲ್ವರ್ ರೇಟ್ ಸ್ಥಿರವಾಗಿದೆ. ಬಳಿಕ ಇಂದು ಮತ್ತೆ ಇಳಿಕೆಯಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಸ್ಥಿರವಾಗಿದ್ದ ಬಂಗಾರ ದರವು ಇಂದು ಮತ್ತೆ ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 1 ಬಾರಿ ಏರಿಕೆಯಾಗಿದೆ. ಆದರೆ ಮೂರು ಬಾರಿ ಬಂಗಾರ ದರವು ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಇಳಿಕೆ ಕಂಡಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಸ್ಥಿರವಾಗಿದೆ. 4 ಬಾರಿ ಇಳಿಕೆಯಾಗಿದೆ.
ಆಗಸ್ಟ್ 7ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು 55,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 60,160 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 100 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 75,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 7ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 59426.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 71971.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.45ರಷ್ಟು ಇಳಿಕೆ ಕಂಡಿದ್ದು 1,935.1 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.88ರಷ್ಟು ಹಿಗ್ಗಿದ್ದು 23.42 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------- )
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------- )
ಮುಂಬೈ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------- )
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------- )
ದೆಹಲಿ
22 ಕ್ಯಾರೆಟ್ ಚಿನ್ನ: 55,300 ರೂಪಾಯಿ (--------- )
24 ಕ್ಯಾರೆಟ್ ಚಿನ್ನ: 60,310 ರೂಪಾಯಿ (--------- )
ಕೇರಳ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------- )
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------- )
ಮಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------- )
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------- )
ಮೈಸೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (--------- )
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (--------- )

Click it and Unblock the Notifications