ಎರಡು ದಿನಗಳಿಂದ ಸ್ಥಿರವಾಗಿದ್ದ ಬಂಗಾರ ದರವು ಮಂಗಳವಾರ (ಆಗಸ್ಟ್ 8) ಮತ್ತೆ ಇಳಿಕೆ ಕಂಡಿದೆ. ಈ ಹಿಂದೆ ಆಗಸ್ಟ್ 2, 3 ರಂದು ಚಿನ್ನದ ದರವು ಇಳಿಕೆಯಾಗಿದೆ. ಅದಾದ ಬಳಿಕ ಒಂದು ಬಾರಿ ಬೆಲೆ ಹೆಚ್ಚಳ ಮತ್ತು ಮೂರು ಬಾರಿ ಸ್ಥಿರತೆ ಕಾಯ್ದುಕೊಂಡಿದೆ. ಅದಾದ ಬಳಿಕ ಈಗ ಮತ್ತೆ ದರ ಇಳಿಕೆಯನ್ನು ಕಂಡಿದೆ. ಇನ್ನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಂಗಾರ ಬೆಲೆಯು ಏರಿಕೆಗಿಂತ ಅಧಿಕ ಇಳಿಕೆಯಾಗಿದೆ.
ಬೆಳ್ಳಿ ದರವು ಸತತವಾಗಿ ಎರಡು ದಿನಗಳಿಂದ ಇಳಿಕೆ ಕಾಣುತ್ತಿದೆ. ಆಗಸ್ಟ್ 5ರಂದು ಬೆಳ್ಳಿ ರೇಟ್ ಹೆಚ್ಚಳವಾಗಿದ್ದು, ಅದಾದ ಬಳಿಕ ಮತ್ತೆ ಏರಿಕೆಯಾಗಿಲ್ಲ. ಬಂಗಾರದ ದರದಂತೆ ನಾವು ಹತ್ತು ದಿನಗಳ ಬೆಳ್ಳಿ ದರವನ್ನು ನೋಡಿದಾಗ ಏರಿಕೆಗಿಂತ ಅಧಿಕ ದರ ಕುಸಿತ ಕಂಡಿದೆ. 1300 ರೂಪಾಯಿ ಬೆಲೆ ಹೆಚ್ಚಾಗಿದ್ದು, 4000 ರೂಪಾಯಿಗೂ ಅಧಿಕ ಇಳಿಕೆಯಾಗಿದೆ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಸ್ಥಿರವಾಗಿದ್ದ ಬಂಗಾರ ದರವು ಇಂದು ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 1 ಬಾರಿ ಏರಿಕೆಯಾಗಿದೆ. ಆದರೆ ಮೂರು ಬಾರಿ ಬಂಗಾರ ದರವು ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 4 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಕುಸಿತ ಕಂಡಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಸ್ಥಿರವಾಗಿದೆ. 5 ಬಾರಿ ಇಳಿಕೆಯಾಗಿದೆ.
ಆಗಸ್ಟ್ 8ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಕುಗ್ಗಿದ್ದು 55,050 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 100 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 60,060 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1000 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 74,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 8ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 59406.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 71024.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.23ರಷ್ಟು ಇಳಿಕೆ ಕಂಡಿದ್ದು 1,932.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.28ರಷ್ಟು ಕುಗ್ಗಿದ್ದು 23.06 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,050 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,060 ರೂಪಾಯಿ (-100 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,050 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,060 ರೂಪಾಯಿ (-100 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,200 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,210 ರೂಪಾಯಿ (-100 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,050 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,060 ರೂಪಾಯಿ (-100 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,050 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,060 ರೂಪಾಯಿ (-100 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,050 ರೂಪಾಯಿ (-100 ರೂಪಾಯಿ)
24 ಕ್ಯಾರೆಟ್ ಚಿನ್ನ: 60,060 ರೂಪಾಯಿ (-100 ರೂಪಾಯಿ)

Click it and Unblock the Notifications