ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಇದರ ಪರಿಣಾಮವು ವಿಶ್ವದ ಹಲವಾರು ದೇಶಗಳ ಮೇಲೆ ಬೀರಿದೆ. ಭಾರತದ ಮೇಲೆಯೂ ಈ ಯುದ್ಧದ ಪರಿಣಾಮ ಬೀರಲಿದೆ. ಯುದ್ಧ ಆರಂಭವಾದ ದಿನವೇ ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಏರಿಕೆ ಕಂಡಿದೆ. ಫೆಬ್ರವರಿ 24ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 850 ರೂಪಾಯಿ ಏರಿಕೆ ಆಗಿ, 46,850 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 930 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 51,110 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಕೂಡಾ ಏರಿದೆ. ಬೆಳ್ಳಿ ಬೆಲೆಯು ಕೆಜಿಗೆ 1,800 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 66,100 ರೂಪಾಯಿ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಷ್ಯಾ- ಉಕ್ರೇನ್ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಫೆಬ್ರವರಿ 24ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 52470.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 2.83ರಷ್ಟು ಏರಿಕೆಯಾಗಿ 1,962.98 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.13ರಷ್ಟು ಏರಿಕೆಯಾಗಿ 25.27 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,110 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,110 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,110 ರೂ. ಇದೆ. ಚೆನ್ನೈನಲ್ಲಿ 48,270 ರೂ. ಹಾಗೂ ಅಪರಂಜಿ 52,660 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,110 ರು ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,850 ರೂ (+850 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 67,400 ರೂಪಾಯಿ (-----)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,850 ರೂ (+850 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 67,400 ರೂಪಾಯಿ (----)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,850 ರೂ (+850 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 67,400 ರೂಪಾಯಿ (-----)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,850 ರೂ (+590 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 63,000 ರೂಪಾಯಿ (-4400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,850 ರೂ (+850 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 63000 ರೂಪಾಯಿ (-----)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,850 ರೂ (+850 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 63,000 ರೂಪಾಯಿ (----)
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,900 (+950 ರೂ)
24 ಕ್ಯಾರೆಟ್ ಚಿನ್ನ ರೂ. 51,200 (+1070 ರೂ)
ಬೆಳ್ಳಿ ದರ: 63,000 ರೂಪಾಯಿ (----)
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,900 (+740 ರೂ)
24 ಕ್ಯಾರೆಟ್ ಚಿನ್ನ ರೂ. 51,200 (+860 ರೂ)
ಬೆಳ್ಳಿ ದರ: 63,000 ರೂಪಾಯಿ (----)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,270 ರೂ (+920 ರೂ)
24 ಕ್ಯಾರೆಟ್ ಚಿನ್ನ 52,660 ರೂ (+1000 ರೂ)
ಬೆಳ್ಳಿ ದರ: 67,400 ರೂಪಾಯಿ (----)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,270 ರೂ (+920 ರೂ)
24 ಕ್ಯಾರೆಟ್ ಚಿನ್ನ 52,660 ರೂ (+1000 ರೂ)
ಬೆಳ್ಳಿ ದರ: 67,400 ರೂಪಾಯಿ (----)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,850 ರೂ (+850 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 67,400 ರೂಪಾಯಿ (----)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,850 ರೂ (+850 ರೂ)
24 ಕ್ಯಾರೆಟ್ ಚಿನ್ನ 51,110 ರೂ (+930 ರೂ)
ಬೆಳ್ಳಿ ದರ: 67,400 ರೂಪಾಯಿ (----)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,800 (+810 ರೂ)
24 ಕ್ಯಾರೆಟ್ ಚಿನ್ನ: ರೂ. 51,000 (+850 ರೂ)
ಬೆಳ್ಳಿ ದರ: 63,000 ರೂಪಾಯಿ (----)
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,800 (+810 ರೂ)
24 ಕ್ಯಾರೆಟ್ ಚಿನ್ನ: ರೂ. 51,000 (+850 ರೂ)
ಬೆಳ್ಳಿ ದರ: 63,000 ರೂಪಾಯಿ (----)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,830 ರೂ (+830 ರೂ)
24 ಕ್ಯಾರೆಟ್ ಚಿನ್ನ 51,070 ರೂ (+890 ರೂ)
ಬೆಳ್ಳಿ ದರ: 63,000 ರೂಪಾಯಿ (----)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,900 (+750 ರೂ)
24 ಕ್ಯಾರೆಟ್ ಚಿನ್ನ ರೂ. 51,250 (+920 ರೂ)
ಬೆಳ್ಳಿ ದರ: 63,000 ರೂಪಾಯಿ (----)
More From GoodReturns

Bengaluru Gold Rate: ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ದಿಢೀರ್ 10,900 ರೂ. ಕುಸಿತ

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ಚಿನ್ನ ಪ್ರಿಯರಿಗೆ ಇಂದು 'ಗುರು ದೆಸೆ'; ಭರ್ಜರಿ ಕುಸಿತ ಕಂಡ ಬಂಗಾರ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Silver Price Today: ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ವಿವರ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!



Click it and Unblock the Notifications