ದೇಶದ ಪ್ರಮುಖ ನಗರಗಳಲ್ಲಿ ಜ.19ರ ದರ ಚಿನ್ನದ ದರ ಇಲ್ಲಿದೆ ಪರಿಶೀಲಿಸಿ

ದೇಶದಲ್ಲಿ ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜನವರಿ 19ರಂದು ದೇಶದಲ್ಲಿ ಚಿನ್ನ ಬೆಲೆಯು ಸ್ಥಿರವಾಗಿದೆ. ಭಾರತದಲ್ಲಿ ಇಂದು ಚಿನ್ನದ ದರ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 47,090 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಪ್ರಸ್ತುತ 49,090 ರೂ ಆಗಿದೆ. ದೆಹಲಿಯಲ್ಲಿ ಚಿನ್ನದ ದರ 47,140 ರೂ, ಮುಂಬೈನಲ್ಲಿ ಚಿನ್ನದ ದರ 47,090 ರೂ ಆಗಿದ್ದರೆ, ಸ್ಪಾಟ್ ಮಾರುಕಟ್ಟೆಯಲ್ಲಿನ ಬೆಲೆಗಳು ಸಹ ಪ್ರತಿ ಔನ್ಸ್‌ಗೆ $1,800ಕ್ಕಿಂತ ಅಧಿಕವಾಗಿದ್ದು, ಬೆಲೆಯಿ ಸ್ಥಿರವಾಗಿದೆ.

ಎಂಸಿಎಕ್ಸ್‌ನಲ್ಲಿ ಜನವರಿ 19ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 47,965.00ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 63,130ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.42ರಷ್ಟು ಇಳಿಕೆಯಾಗಿ 1,811.74 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.76ರಷ್ಟು ಏರಿಕೆಯಾಗಿ 23.40 ಯುಎಸ್ ಡಾಲರ್ ಆಗಿದೆ. ಕಳೆದ 30 ದಿನಗಳಲ್ಲಿ ಸ್ಪಾಟ್ ಗೋಲ್ಡ್ ಗರಿಷ್ಠ 1828.51 ಡಾಲರ್ ಹಾಗೂ ಕನಿಷ್ಠ 1790.14 ಡಾಲರ್ ತಲುಪಿತ್ತು. ಇದೇ ಅವಧಿಯಲ್ಲಿ ಬೆಳ್ಳಿ ದರ ಗರಿಷ್ಠ 23.29 ಡಾಲರ್ ಹಾಗೂ ಕನಿಷ್ಠ 22.20 ಡಾಲರ್ ಮುಟ್ಟಿತ್ತು.

ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಹೊಸ ರೂಪಾಂತರ, ಕೊರೊನಾ ನೈಟ್ ಕರ್ಫ್ಯೂ, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ, ಯುರೋಪಿಯನ್ ಯೂನಿಯನ್ ಕೊರೊನಾ ನಿರ್ಬಂಧ, ಚೀನಾ-ಭಾರತ ಗಡಿ ವಿವಾದ, ಕೊರೊನಾ ಲಸಿಕೆ ಅಭಿಯಾನ ಪ್ರಗತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ದೇಶದ ಪ್ರಮುಖ ನಗರಗಳಲ್ಲಿ ಜ.19ರ ದರ ಚಿನ್ನದ ದರ ಇಲ್ಲಿದೆ

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ದೇಶದ ಹಲವೆಡೆ ವರ್ಷಾಂತ್ಯದಲ್ಲಿ ಕೋವಿಡ್ 19 ನಿರ್ಬಂಧ, ಕರ್ಫ್ಯೂ ಬಗ್ಗೆ ಚರ್ಚೆಯಾಗುತ್ತಿದೆ, ಹಲವೆಡೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಜಾಗತಿಕವಾಗಿ ಇಂಧನ ದರ ಏರಿಳಿತ, ಕೋವಿಡ್ 19 ರೂಪಾಂತರ ಉಲ್ಬಣವಾಗುವ ಭೀತಿ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಏರಿಳಿತ ಕಾಣುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?

ಚೆನ್ನೈನಲ್ಲಿ ಚಿನ್ನದ ದರ: 45,320 ರೂಪಾಯಿ
ಮುಂಬೈನಲ್ಲಿ ಚಿನ್ನದ ದರ: 47,090 ರೂಪಾಯಿ
ದೆಹಲಿಯಲ್ಲಿ ಚಿನ್ನದ ದರ: 47,140 ರೂಪಾಯಿ
ಕೋಲ್ಕತ್ತಾದಲ್ಲಿ ಚಿನ್ನದ ದರ: 47,300 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನದ ದರ: 44,970 ರೂಪಾಯಿ
ಹೈದರಾಬಾದ್‌ನಲ್ಲಿ ಚಿನ್ನದ ದರ: 44,970 ರೂಪಾಯಿ
ಕೇರಳದಲ್ಲಿ ಚಿನ್ನದ ದರ: 46,970 ರೂಪಾಯಿ
ಪುಣೆಯಲ್ಲಿ ಚಿನ್ನದ ದರ: 46,320 ರೂಪಾಯಿ
ವಡೋದರಾದಲ್ಲಿ ಚಿನ್ನದ ದರ: 46,810 ರೂಪಾಯಿ
ಅಹಮದಾಬಾದ್‌ನಲ್ಲಿ ಚಿನ್ನದ ದರ: 46,550 ರೂಪಾಯಿ
ಜೈಪುರದಲ್ಲಿ ಚಿನ್ನದ ದರ: 47,300 ರೂಪಾಯಿ
ಲಕ್ನೋದಲ್ಲಿ ಚಿನ್ನದ ದರ: 45,900 ರೂಪಾಯಿ
ಕೊಯಮತ್ತೂರಿನಲ್ಲಿ ಚಿನ್ನದ ದರ: 45,320 ರೂಪಾಯಿ
ಮಧುರೈನಲ್ಲಿ ಚಿನ್ನದ ದರ: 45,320 ರೂಪಾಯಿ
ವಿಜಯವಾಡದಲ್ಲಿ ಚಿನ್ನದ ದರ: 44,970 ರೂಪಾಯಿ
ಪಾಟ್ನಾದಲ್ಲಿ ಚಿನ್ನದ ದರ: 46,320 ರೂಪಾಯಿ
ನಾಗ್ಪುರದಲ್ಲಿ ಚಿನ್ನದ ದರ: 47,090 ರೂಪಾಯಿ
ಚಂಡೀಗಢದಲ್ಲಿ ಚಿನ್ನದ ದರ: 45,790 ರೂಪಾಯಿ
ಸೂರತ್‌ನಲ್ಲಿ ಚಿನ್ನದ ದರ: 46,550 ರೂಪಾಯಿ
ಭುವನೇಶ್ವರದಲ್ಲಿ ಚಿನ್ನದ ದರ: 45,000 ರೂಪಾಯಿ
ಮಂಗಳೂರಿನಲ್ಲಿ ಚಿನ್ನದ ದರ: 44,970 ರೂಪಾಯಿ
ವಿಶಾಖಪಟ್ಟಣಂನಲ್ಲಿ ಚಿನ್ನದ ದರ: 44,970 ರೂಪಾಯಿ
ನಾಸಿಕ್‌ನಲ್ಲಿ ಚಿನ್ನದ ದರ: 46,320 ರೂಪಾಯಿ
ಮೈಸೂರಿನಲ್ಲಿ ಚಿನ್ನದ ದರ: 44,970 ರೂಪಾಯಿ

ಭಾರತದ ಪ್ರಮುಖ ನಗರಗಳ ಧಾರಣೆ ವಿವರ ಇಲ್ಲಿದೆ (https://kannada.goodreturns.in/gold-rates/)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+