ಸತತವಾಗಿ ಮೂರು ದಿನಗಳ ಕಾಲ ಏರಿಕೆಯನ್ನು ಕಂಡಿದ್ದ ಬಂಗಾರ ದರವು ಈಗ ಕಳೆದ ಎರಡು ದಿನಗಳಿಂದ ಕುಸಿತ ಕಾಣುತ್ತಿದೆ. ಜುಲೈ 17ರಂದು ಚಿನ್ನದ ಬೆಲೆ ಹತ್ತು ಗ್ರಾಂಗೆ ಬರೀ 20 ರೂಪಾಯಿ ಕುಗ್ಗಿದೆ. ಅದಾದ ಬಳಿಕ ಮೂರು ದಿನದಲ್ಲೇ 770 ರೂಪಾಯಿ ಏರಿಕೆಯಾಗಿದೆ. ಆದರೆ ಈಗ ಎರಡು ದಿನದಲ್ಲಿ 550 ರೂಪಾಯಿ ಕುಗ್ಗಿದೆ.
ಜುಲೈ 22ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 55,400 ರೂಪಾಯಿಯಿಂದ 55,150 ರೂಪಾಯಿಗೆ ಇಳಿಕೆ ಕಂಡಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,440 ರೂಪಾಯಿಯಿಂದ 60,160 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಬೆಳ್ಳಿ ದರವನ್ನು ನೋಡಿದಾಗ ನಿರಂತರವಾಗಿ ಏರಿಕೆಯನ್ನು ಕಂಡಿದೆ. ಆದರೆ ಇಂದು ಮಾತ್ರ ಬೆಳ್ಳಿ ರೇಟ್ ಇಳಿಕೆ ಕಂಡಿದೆ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಕೊಂಚ ಇಳಿಕೆಯಾಗಿದ್ದ ಬಂಗಾರ ದರವು ಇಂದು ಮತ್ತೆ ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 3 ಬಾರಿ ಏರಿಕೆಯಾಗಿದೆ.ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ನಿರಂತರವಾಗಿ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 7 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಸ್ಥಿರವಾಗಿದೆ. ಒಂದು ಬಾರಿ ಮಾತ್ರ ಇಳಿಕೆಯಾಗಿದೆ.
ಜುಲೈ 22ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 250 ರೂಪಾಯಿ ಇಳಿಕೆಯಾಗಿದ್ದು 55,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 280 ರೂಪಾಯಿ ಕುಸಿತ ಕಂಡಿದ್ದು, ಪ್ರಸ್ತುತ 60,160 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 1000 ರೂಪಾಯಿ ಕುಗ್ಗಿದ್ದು ಪ್ರಸ್ತುತ 78,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜುಲೈ 21ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 59298.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 74966.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.53ರಷ್ಟು ಕುಸಿತ ಕಂಡಿದ್ದು 1,961.85 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.75ರಷ್ಟು ಇಳಿದಿದ್ದು 24.61 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (-280 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (-280 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,300 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,320 ರೂಪಾಯಿ (-270 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (-280 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (-280 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (-250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,160 ರೂಪಾಯಿ (-280 ರೂಪಾಯಿ)

Click it and Unblock the Notifications