ಕಳೆದ ಕೆಲವು ದಿನಗಳಿಂದ ಬಂಗಾರ ದರವು ಏರಿಳಿತ ಕಾಣುತ್ತಿದೆ. ಒಂದು ದಿನ ಬೆಲೆ ಏರಿಕೆಯಾದರೆ, ಮತ್ತೊಂದು ದಿನ ಇಳಿಕೆ ಕಾಣುತ್ತಿದೆ. ನಿನ್ನೆ ಕುಸಿತ ಕಂಡಿದ್ದ ಬಂಗಾರ ಬೆಲೆಯು ಜುಲೈ 29ರಂದು ಮತ್ತೆ ಜಿಗಿತವಾಗಿದೆ. ಒಟ್ಟಾರೆಯಾಗಿ ನಾವು ನೋಡಿದಾಗ ಚಿನ್ನದ ಬೆಲೆ ಏರಿಕೆಗಿಂತ ಹೆಚ್ಚು ಇಳಿಕೆಯನ್ನು ಕಂಡಿದೆ.
ಜುಲೈ 29ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 55,100 ರೂಪಾಯಿಯಿಂದ 55,250 ರೂಪಾಯಿಗೆ ಏರಿಕೆ ಕಂಡಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 60,110 ರೂಪಾಯಿಯಿಂದ 60,270 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು ಬೆಳ್ಳಿ ದರವನ್ನು ನೋಡಿದಾಗ ನಿರಂತರವಾಗಿ ಏರಿಳಿತ ಕಂಡಿದೆ. ಎರಡು ದಿನಗಳಿಂದ ಇಳಿಕೆಯಾಗಿದ್ದ ಬೆಳ್ಳಿ ದರ ಎರಡು ದಿನ ಜಿಗಿತ ಕಂಡಿದೆ. ಅದಾದ ಬಳಿಕ ನಿನ್ನೆ ಇಳಿಕೆಯಾಗಿದೆ. ಒಂದು ಮತ್ತೆ ಏರಿಕೆಯಾಗಿದೆ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಕೊಂಚ ಇಳಿಕೆಯಾಗಿದ್ದ ಬಂಗಾರ ದರವು ಇಂದು ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 3 ಬಾರಿ ಏರಿಕೆಯಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 4 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಬೆಳ್ಳಿ ದರ ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಸ್ಥಿರವಾಗಿದೆ. 4 ಬಾರಿ ಇಳಿಕೆಯಾಗಿದೆ.
ಜುಲೈ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 250 ರೂಪಾಯಿ ಏರಿಕೆಯಾಗಿದ್ದು 55,350 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 270 ರೂಪಾಯಿ ಹೆಚ್ಚಳ ಕಂಡಿದ್ದು, ಪ್ರಸ್ತುತ 60,380 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 600 ರೂಪಾಯಿಯಿ ಹಿಗ್ಗಿದ್ದು ಪ್ರಸ್ತುತ 77,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜುಲೈ 28ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59390.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 74040.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.61ರಷ್ಟು ಏರಿಕೆ ಕಂಡಿದ್ದು 1,959.24 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.76ರಷ್ಟು ಹೆಚ್ಚಿದ್ದು 24.34 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,350 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,380 ರೂಪಾಯಿ (+270 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,350 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,380 ರೂಪಾಯಿ (+270 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,500 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,530 ರೂಪಾಯಿ (+270 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,350 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,380 ರೂಪಾಯಿ (+270 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,350 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,380 ರೂಪಾಯಿ (+270 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,350 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,380 ರೂಪಾಯಿ (+270 ರೂಪಾಯಿ)

Click it and Unblock the Notifications