Gold Rate Today: ಚಿನ್ನ- ಬೆಳ್ಳಿ ದರ ಏರಿಕೆ, ಜುಲೈ 6ರಂದು ಬೆಲೆ ಹೀಗಿದೆ

ಬಂಗಾರ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಬೆಳವಣಿಗೆಯನ್ನು ನಾವು ನೋಡಿದಾಗ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಕಂಡುಬಂದಿಲ್ಲ. ಹೆಚ್ಚಾಗಿ 100, 200 ರೂಪಾಯಿ ಏರಿಕೆ, ಇಳಿಕೆಯಾಗಿದೆ. ಸೋಮವಾರ ಇಳಿಕೆಯಾಗಿದ್ದ ಗೋಲ್ಡ್ ರೇಟ್, ಮಂಗಳವಾರ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದಾದ ಬಳಿಕ ಬುಧವಾರ ಸ್ಥಿರವಾಗಿದ್ದು, ಗುರುವಾರ ಹೆಚ್ಚಾಗಿದೆ.

ಜುಲೈ 6ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 54,250 ರೂಪಾಯಿಯಿಂದ 54,150 ರೂಪಾಯಿಗೆ ಹೆಚ್ಚಳ ಕಂಡಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 59,060 ರೂಪಾಯಿಯಿಂದ 59,160 ರೂಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ದರವಂತು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಬೆಳ್ಳಿ ರೇಟ್ ಏರಿಕೆಯಾಗಿದೆ.

Gold Rate: ಚಿನ್ನ- ಬೆಳ್ಳಿ ದರ ಏರಿಕೆ, ಜುಲೈ 6ರಂದು ಬೆಲೆ ಹೀಗಿದೆ

ಭಾರತದಲ್ಲಿ ಗೋಲ್ಡ್‌ ರೇಟ್ ಎಷ್ಟಿದೆ?

ನಿನ್ನೆ ಸ್ಥಿರವಾಗಿದ್ದ ಬಂಗಾರ ದರವು ಇಂದು ಏರಿಕೆ ಕಂಡಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 2 ಬಾರಿ ಮಾತ್ರ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ನಿನ್ನೆ ಹೆಚ್ಚಳವಾಗಿದ್ದ ಬೆಳ್ಳಿ ದರವು ಇಂದು ಮತ್ತೆ ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.

ಜುಲೈ 6ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಏರಿಕೆಯಾಗಿದ್ದು 54,250 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 100 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 59,160 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಮತ್ತೆ ಹೆಚ್ಚಳವಾಗಿದೆ. ಇಂದು ಒಂದು ಕೆಜಿ ಬೆಳ್ಳಿ ದರ 800 ರೂಪಾಯಿ ಜಿಗಿತ ಕಂಡಿದ್ದು ಪ್ರಸ್ತುತ 73,000 ರೂಪಾಯಿ ಆಗಿದೆ.

ಈ ನಡುವೆ ಕೊನೆಯ ಜುಲೈ 6ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58514.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 71450.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ.0.10ರಷ್ಟು ಏರಿಕೆಯಾಗಿದ್ದು 1,918.76 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.20ರಷ್ಟು ಹಿಗ್ಗಿದ್ದು 23.18 ಯುಎಸ್ ಡಾಲರ್ ಆಗಿದೆ.

10 ಗ್ರಾಂ ಲೆಕ್ಕಾಚಾರದಲ್ಲಿ

ಬೆಂಗಳೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,160 ರೂಪಾಯಿ (+100 ರೂಪಾಯಿ)

ಮುಂಬೈ
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,160 ರೂಪಾಯಿ (+100 ರೂಪಾಯಿ)

ದೆಹಲಿ
22 ಕ್ಯಾರೆಟ್ ಚಿನ್ನ: 54,400 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,320 ರೂಪಾಯಿ (+100 ರೂಪಾಯಿ)

ಕೇರಳ
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,160 ರೂಪಾಯಿ (+100 ರೂಪಾಯಿ)

ಮಂಗಳೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,160 ರೂಪಾಯಿ (+100 ರೂಪಾಯಿ)

ಮೈಸೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+100 ರೂಪಾಯಿ)
24 ಕ್ಯಾರೆಟ್ ಚಿನ್ನ: 59,160 ರೂಪಾಯಿ (+100 ರೂಪಾಯಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+