ಬಂಗಾರ ದರವು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಭಾರೀ ಪ್ರಮಾಣದಲ್ಲಿ ದರ ಬದಲಾವಣೆ ಕಾಣದೆ, ಪ್ರತಿ ಹತ್ತು ಗ್ರಾಂ ಚಿನ್ನದ ದರವು 100, 200 ರೂಪಾಯಿಗಳಷ್ಟು ಏರಿಕೆ, ಇಳಿಕೆಯಾಗುತ್ತಿದೆ. ಆದರೆ ಇಂದು ಮಾತ್ರ ಕೊಂಚ ಅಧಿಕ ಪ್ರಮಾಣದಲ್ಲಿ ಬಂಗಾರ ದರವು ಏರಿಕೆಯಾಗಿದೆ. ನಿನ್ನೆ ನೂರು ರೂಪಾಯಿಯಷ್ಟು ಇಳಿಕೆಯಾಗಿದ್ದ ಚಿನ್ನದ ದರವು ಇಂದು 400 ರೂಪಾಯಿಯಷ್ಟು ಜಿಗಿತ ಕಂಡಿದೆ. ಒಟ್ಟಾರೆಯಾಗಿ ಈ ವಾರದಲ್ಲಿ ಚಿನ್ನದ ದರ ಇಳಿಕೆಗಿಂತ ಅಧಿಕ ಏರಿಕೆಯಾಗಿದೆ.
ಜುಲೈ 8ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 54,150 ರೂಪಾಯಿಯಿಂದ 54,550 ರೂಪಾಯಿಗೆ ಜಿಗಿತ ಕಂಡಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 59,070 ರೂಪಾಯಿಯಿಂದ 59,510 ರೂಪಾಯಿಗೆ ಏರಿಕೆಯಾಗಿದೆ. ಸತತ ಎರಡು ದಿನಗಳಿಂದ ಏರಿಕೆ ಕಂಡಿದ್ದ ಬೆಳ್ಳಿ ರೇಟ್ ನಿನ್ನೆ ಇಳಿಕೆಯಾಗಿದೆ, ಇಂದು ಏರಿಕೆಯಾಗಿದೆ.

ಬಂಗಾರ ದರ ಎಷ್ಟಿದೆ ನೋಡಿ
ನಿನ್ನೆ ಇಳಿಕೆಯಾಗಿದ್ದ ಬಂಗಾರ ದರವು ಇಂದು ಏರಿಕೆ ಕಂಡಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 3 ಬಾರಿ ಮಾತ್ರ ಏರಿಕೆಯಾಗಿದೆ. 1 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 3 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಇಳಿಕೆವಾಗಿದ್ದ ಬೆಳ್ಳಿ ದರವು ಇಂದು ಹೆಚ್ಚಳವಾಗಿದೆ. ಕಳೆದ ಹತ್ತು ದಿನದಲ್ಲಿ 4 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.
ಜುಲೈ 8ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 400 ರೂಪಾಯಿ ಏರಿಕೆಯಾಗಿದ್ದು 54,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 440 ರೂಪಾಯಿ ಹೆಚ್ಚಳ ಕಂಡಿದ್ದು, ಪ್ರಸ್ತುತ 59,510 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿ ದರ 1000 ರೂಪಾಯಿ ಏರಿಕೆ ಕಂಡಿದ್ದು ಪ್ರಸ್ತುತ 73,300 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜುಲೈ 7ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58792.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 71333.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.74ರಷ್ಟು ಏರಿಕೆಯಾಗಿದ್ದು 1,925.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.57ರಷ್ಟು ಹಿಗ್ಗಿದ್ದು 23.09 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (+440 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (+440 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 59,660 ರೂಪಾಯಿ (+440 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (+440 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (+440 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (+440 ರೂಪಾಯಿ)

Click it and Unblock the Notifications