ಕಳೆದ ಐದು ದಿನಗಳಿಂದ ಇಳಿಕೆ ಕಂಡಿದ್ದ ಬಂಗಾರ ದರವು ಜೂನ್ 24ರಂದು ಕೊಂಚ ಏರಿಕೆಯಾಗಿದೆ. ಕಳೆದ ಐದು ದಿನಗಳಿಂದ ಚಿನ್ನದ ದರವು ಅಗ್ಗವಾಗುತ್ತಾ ಸಾಗಿದೆ. ಒಟ್ಟಾಗಿ ಸುಮಾರು 1090 ರೂಪಾಯಿ ಅಗ್ಗವಾಗಿದೆ. ಆದರೆ ಇಂದು ಕೊಂಚ ಏರಿಕೆಯಾಗಿದೆ. ಜೂನ್ 16ರಂದು ಚಿನ್ನದ ದರವು ಏರಿಕೆಯಾಗಿದ್ದು ಅದಾದ ಬಳಿಕ ಇಂದೇ ಹೆಚ್ಚಳವಾಗಿದೆ.
ಜೂನ್ 24ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 54,100 ರೂಪಾಯಿಯಿಂದ 54,250 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 59,020 ರೂಪಾಯಿಯಿಂದ 59,180 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು ಬೆಳ್ಳಿ ದರವು ಇಂದು ಮತ್ತೆ ಇಳಿಕೆಯಾಗಿದೆ. ಕಳೆದ 4 ದಿನಗಳಿಂದ ಬೆಳ್ಳಿ ರೇಟ್ ಕುಸಿತ ಕಾಣುತ್ತಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಕೊಂಚ ಇಳಿಕೆಯಾಗಿದ್ದ ಬಂಗಾರ ದರವು ಇಂದು ಮತ್ತೆ ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ 4 ಬಾರಿ ಗೋಲ್ಡ್ ರೇಟ್ ಕುಸಿದಿದ್ದು ಒಂದು ಬಾರಿ ಮಾತ್ರ ಏರಿಕೆಯಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 6 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.
ಜೂನ್ 24ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಏರಿಕೆಯಾಗಿದ್ದು 54,250 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 160
ರೂಪಾಯಿ ಹೆಚ್ಚಳವನ್ನು ಕಂಡಿದ್ದು, ಪ್ರಸ್ತುತ 59,180 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 400 ರೂಪಾಯಿ ಕುಸಿತವಾಗಿದ್ದು ಪ್ರಸ್ತುತ 71,100 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜೂನ್ 23ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58300.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 68085.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.34ರಷ್ಟು ಏರಿಕೆಯಾಗಿದ್ದು 1,921.11 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಹಿಗ್ಗಿದ್ದು 22.42 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (+160 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (+160 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 54,400 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,330 ರೂಪಾಯಿ (+160 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (+160 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (+160 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 54,250 ರೂಪಾಯಿ (+150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (+160 ರೂಪಾಯಿ)

Click it and Unblock the Notifications