ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಬಂಗಾರದ ಬೆಲೆ ಇಂದು ಇಳಿಕೆ; ಬೆಳ್ಳಿಯ ದರ ಏರಿಕೆ ಎಷ್ಟು?

Gold Price: ಮಹಿಳೆಯರಿಗೆ ಸಿಹಿ ಸುದ್ದಿ.. ಹೌದು, ಸತತವಾಗಿ ಏರಿಕೆ ಕಂಡಿದ ಚಿನ್ನದ ಬೆಲೆ ಇಂದು ಕಡಿಮೆಯಾಗಿದೆ.ಬಂಗಾರದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಸತತವಾಗಿ ಕಳೆದ ವಾರದಿಂದ ಏರಿಕೆ ಕಾಣುತ್ತಲೇ ಇತ್ತು. ಇಂದು ಚಿನ್ನದ ಬೆಲೆ ಇಳಿಕೆ ಕಂಡಿರುವುದರಿಂದ ಚಿನ್ನ ಖರೀದಿದಾರು ಖುಷಿಯಲ್ಲಿ ಇದ್ದಾರೆ. ಚಿನ್ನದ ಬೆಲೆ ಕಡಿಮೆಯಾದರೆ ಬೆಳ್ಳಿಯ ಬೆಲೆ ಇಂದು ಏರಿಕೆ ಕಂಡಿದೆ.ಹಾಗಿದ್ರೆ ಭಾರತದಲ್ಲಿ ಶನಿವಾರದಂದು( ಜ.18) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

ಹೌದು,ಇಂದು ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ಇಳಿಕೆಯಾಗಿದೆ ಆದರೆ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ ಕ್ಕೆ74,350 ರೂಪಾಯಿ ಇದೆ. ಅಪರಂಜಿ 24 ಕ್ಯಾರಟ್​ನ ಚಿನ್ನದ ಬೆಲೆ 81,110 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಚಿನ್ನದಲ್ಲಿ ಇಳಿಕೆ ಕಂಡಿದೆ.

ಬಂಗಾರದ ಬೆಲೆ ಇಂದು ಇಳಿಕೆ; ಬೆಳ್ಳಿಯ ದರ ಏರಿಕೆ ಎಷ್ಟು?

ಭಾರತದಲ್ಲಿ ಬಂಗಾರದ ಬೆಲೆ ಎಷ್ಟಿದೆ?

ಭಾರತದಲ್ಲಿ ಚಿನ್ನದ ದರ ಇಂದು ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,435 ರೂಪಯಿ ಆಗಿದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,111 ರೂಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ74,350 ರೂಗಳ ವಾಹಿವಾಟುವಿದೆ. 10 ಗ್ರಾಂ ನ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 81,110ರೂ ಇದೆ.

ಇನ್ನೂ 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,43,500 ರೂ ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,11,100ರೂ.ಗಳ ವಹಿವಾಟುವಿದೆ.ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ರೆ ಅಪರಂಜಿ ಚಿನ್ನದಲ್ಲಿ1,600 ಇಳಿಕೆ ಕಂಡಿದೆ. 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 60,830 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡಿದೆ.

ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?

ಬೆಳ್ಳಿಯ ಬೆಲೆಯಲ್ಲಿ ಇಂದು ಭಾರತದಲ್ಲಿ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 96,600 ರೂಪಾಯಿಗಳು ವಾಗಿವಾಟುವಿದ್ದು,ಇದ್ದು 100 ರೂಗಳಷ್ಟು ಏರಿಕೆ ಕಂಡಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 96.60 ರೂಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 966 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,660ರೂ ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ.

MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX)ಚಿನ್ನದ ಭವಿಷ್ಯ ನೋಡೋದಾದ್ರೆ ಫೆಬ್ರವರಿ 5, 2025 ರಂದು ಸ್ಥಿರವಾಗಿರುವ ಗೋಲ್ಡ್ ಫ್ಯೂಚರ್‌ಗಳು ಶೇ.0.27 ಅಥವಾ 216 ಪಾಯಿಂಟ್‌ಗಳಿಂದ ತಮ್ಮ ಪ್ರಸ್ತುತ ವ್ಯಾಪಾರ ಮೌಲ್ಯವನ್ನು ತಲುಪಲು ರೂ. 79,010. ಮಾರ್ಚ್ 5, 2025 ರಂದು ಮುಕ್ತಾಯಗೊಳ್ಳಲಿರುವ ಸಿಲ್ವರ್ ಫ್ಯೂಚರ್‌ಗಳು ಇದೇ ಮಾದರಿಯಲ್ಲಿ ಅಧಿವೇಶನದಲ್ಲಿ ಹೆಚ್ಚಳವನ್ನು ಕಂಡವು. ಲೋಹವು 393 ಅಂಕಗಳನ್ನು ಅಥವಾ ಶೇ.0.42 ನಷ್ಟು ಕಳೆದುಕೊಂಡಿತು.

ಸ್ಪಾಟ್ ಚಿನ್ನದ ಬೆಲೆ ಹೇಗಿದೆ?

ರಾಯಿಟರ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಚಿನ್ನವು ಶುಕ್ರವಾರ ಐದು ವಾರಗಳ ಗರಿಷ್ಠ ಮಟ್ಟದಲ್ಲಿ ಸ್ಥಿರವಾಗಿದೆ, ಇದು ಸತತ ಮೂರನೇ ವಾರದ ಲಾಭವನ್ನು ಸಾಧಿಸಲು ಸಿದ್ಧವಾಗಿದೆ. ಈ ವಾರದ ಆರಂಭದಲ್ಲಿ ಯುಎಸ್ ಹಣದುಬ್ಬರದ ಮಾಹಿತಿಯು ಈ ವರ್ಷದ ನಂತರ ಫೆಡರಲ್ ರಿಸರ್ವ್ ಸಂಭಾವ್ಯ ದರ ಕಡಿತದ ಬಗ್ಗೆ ಊಹಾಪೋಹವನ್ನು ಹೆಚ್ಚಿಸಿದ ನಂತರ ಇದು ಬರುತ್ತದೆ. ಸ್ಪಾಟ್ ಚಿನ್ನವು 03:32 GMT ನಂತೆ ಪ್ರತಿ ಔನ್ಸ್‌ಗೆ $2,715.09 ನಲ್ಲಿ ಬದಲಾಗದೆ ಉಳಿದಿದೆ. ಇದು ಸುಮಾರು ಶೇ.1ರಷ್ಟು ಸಾಪ್ತಾಹಿಕ ಏರಿಕೆಯನ್ನು ಪ್ರತಿಬಿಂಬಿಸುತ್ತದೆ. ಏತನ್ಮಧ್ಯೆ, ಯುಎಸ್ ಚಿನ್ನದ ಭವಿಷ್ಯವು $2,746.90 ಕ್ಕೆ ಶೇ.0.1ರಷ್ಟು ಸ್ವಲ್ಪ ಕುಸಿತವನ್ನು ಕಂಡಿತು. ಸ್ಪಾಟ್ ಸಿಲ್ವರ್ ಪ್ರತಿ ಔನ್ಸ್‌ಗೆ ಶೇ.0.1ರಷ್ಟು $30.82 ಕ್ಕೆ ಏರಿತು, ಈ ವಾರ ಶೇ.1 ಕ್ಕಿಂತ ಹೆಚ್ಚಿನ ಲಾಭವನ್ನು ಗುರುತಿಸುತ್ತದೆ.

ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ

ನಗರ22 ಕ್ಯಾರೆಟ್24k ಕ್ಯಾರೆಟ್
ಬೆಂಗಳೂರು7,4358,111
​ಚೆನ್ನೈ7,4358,111
ಮುಂಬೈ7,4358,111
ದೆಹಲಿ7,4508,126
ಕೋಲ್ಕತಾ7,4358,111
ಹೈದರಾಬಾದ್7,4358,111
ಪುಣೆ7,4358,111

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 9,660ರೂ

ಚೆನ್ನೈ: 10,410 ರೂ

ಮುಂಬೈ: 9,660ರೂ

ದೆಹಲಿ: 9,660ರೂ

ಕೋಲ್ಕತಾ: 9,660ರೂ

ಹೈದರಾಬಾದ್:10,410 ರೂ

ಪುಣೆ : 9,660 ರೂ

ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಕಡಿಮೆಯಾಗಿರುವುದರಿಂದ ಚಿನ್ನ ಖರೀದಿ ಮಾಡಲು ಒಳ್ಳೆಯ ಕಾಲವೆಂದೇ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+