ಬಹಳ ಹಿಂದಿನಿಂದಲೂ ಚಿನ್ನಕ್ಕೆ ಹೂಡಿಕೆದಾರರ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಇದು ಮೋಸ್ಟ್ ಲಿಕ್ವಿಡ್ ಅಸೆಟ್‌ಗಳಲ್ಲಿ ಒಂದು ಎನ್ನುವುದು. ಜೊತೆಗೆ ಸಂಕಷ್ಟ ಸಮಯದಲ್ಲಿ ಕೂಡ ಕುಸಿಯದ ಬದಲಿಗೆ ಏರಿಕೆ ಕಾಣುವ ಇನ್ಸ್ಟ್ರುಮೆಂಟ್ ಎನ್ನುವುದು ಇನ್ನೊಂದು ಕಾರಣ.
ಚಿನ್ನದ ಮೇಲಿನ ಹೂಡಿಕೆಯನ್ನು 15 ರಿಂದ 20 ಪ್ರತಿಶತ ಪೋರ್ಟ್‌ಫೋಲಿಯೋದಲ್ಲಿ ಹೆಚ್ಚಿಸಿಕೊಂಡವರ ಸಂಖ್ಯೆ ಕೂಡ ಬಹಳವಿತ್ತು. ಇದಕ್ಕೆ ಕಾರಣ ಚಿನ್ನದ ಬೆಲೆ ಹತ್ತು ಗ್ರಾಮಿಗೆ 60ಸಾವಿರ ರೂಪಾಯಿ ದಾಟುತ್ತದೆ ಎನ್ನುವ ಊಹಾಪೋಹ. ನಿಮಗೆಲ್ಲಾ ಒಂದು ವಿಷಯ ತಿಳಿದಿರಲಿ ಚಿನ್ನದ ಬೆಲೆ ಎಷ್ಟೇ ಹೆಚ್ಚಾಗಲಿ ಅಥವಾ ಕಡಿಮೆ ಇದನ್ನ ನಿಮ್ಮ ಹೂಡಿಕೆಯ 10 ಭಾಗಕ್ಕೆ ಮಾತ್ರ ಸೀಮಿತಗೊಳಿಸಿ.
ಅಸ್ಥಿರ ಮಾರುಕಟ್ಟೆಯಲ್ಲಿ ಹೂಡಿಕೆದಾರ ಸ್ಥಿರವಾದ ಹೂಡಿಕೆಯನ್ನು ಹುಡುಕುಕುತ್ತಾನೆ. 2008ರ ಲಿಮನ್ ಬ್ರದರ್ ಕುಸಿತದ ನಂತರ ಇಲ್ಲಿಯವರೆಗೆ 45 ಪ್ರತಿಶತ ಚಿನ್ನದ ಬೆಲೆ ಏರಿಕೆ ಕಂಡಿದೆ. ವಸ್ತುಸ್ಥಿತಿ ಹೀಗಿದ್ದೂ ಬಂಗಾರದ ಮೇಲಿನ ಬೇಡಿಕೆ ಸ್ವಲ್ಪ ಹೊಳಪು ಕಳೆದುಕೊಂಡಿರುವುದು ಕೂಡ ಸತ್ಯ. ನಿಮಗೆಲ್ಲಾ ಗೊತ್ತಿರಲಿ ಚೀನಾ ಮತ್ತು ರಷ್ಯಾ ದೇಶಗಳು ಚಿನ್ನದ ಬೆಲೆ ಏರಿಕೆ ಮಟ್ಟವನ್ನು ಕುಸಿಯಲು ಬಿಡುವುದಿಲ್ಲ.
ಹಣದುಬ್ಬರದ ವಿರುದ್ಧ ಇದು ಅತ್ಯುತ್ತಮ ಹೂಡಿಕೆ
ಚಿನ್ನ ಹಣದುಬ್ಬರದ ವಿರುದ್ಧ ಇದು ಅತ್ಯುತ್ತಮ ಹೂಡಿಕೆಯಾಗಿದೆ. ಮೊದಲೇ ಹೇಳಿದಂತೆ ಇದು ಅತ್ಯಂತ ಲಿಕ್ವಿಡ್ ಇನ್ವೆಸ್ಟ್ಮೆಂಟ್! ನೆಲ, ಕಟ್ಟಡ , ಷೇರು ಇವುಗಳನ್ನ ಮಾರುವುದು ಮತ್ತು ಹಣದ ರೂಪಕ್ಕೆ ಕನ್ವರ್ಟ್ ಮಾಡುವುದು ಸ್ವಲ್ಪ ನಿಧಾನವಾಗುತ್ತದೆ. ಬೇಕೆಂದಾಗ ಮಾರಾಟ ಮಾಡಲು ಅಂದಿನ ಬೆಲೆ ಅಡ್ಡಿ ಬರುತ್ತದೆ.
ಹೂಡಿಕೆದಾರನಿಗೆ ಕೈ ಸುಡಿಸಿದ ಉದಾಹರಣೆ ಇಲ್ಲ
ಐತಿಹಾಸಿಕವಾಗಿ ನೋಡುತ್ತಾ ಬಂದರೂ ಕೂಡ ಚಿನ್ನ ತನ್ನ ಹೂಡಿಕೆದಾರನಿಗೆ ಕೈ ಸುಡಿಸಿದ ಉದಾಹರಣೆ ಇಲ್ಲ. ಇನ್ನೊಂದು ತಿಳಿದುಕೊಂಡಿರಬೇಕಾದ ಅಂಶವೆಂದರೆ ಭಾರತದಲ್ಲಿ ಬಳಕೆಯಾಗುವ ಅಥವಾ ಖರೀದಿಯಾಗುವ ಚಿನ್ನದ ಸಂಗ್ರಹ ನಮ್ಮ ಬಳಿ ಇಲ್ಲ. ಹೀಗಾಗಿ ಚಿನ್ನವನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತೇವೆ ಈ ಕಾರಣದಿಂದ ಇದರ ಮೌಲ್ಯವನ್ನು ಡಾಲರ್‌ನಲ್ಲಿ ನಿಗದಿ ಪಡಿಸಲಾಗುತ್ತದೆ. ಡಾಲರ್ ಮೌಲ್ಯ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಏರಿಳಿತ ಕಂಡರೆ ಅದು ಬಂಗಾರಕ್ಕೂ ತಟ್ಟುತ್ತದೆ.
ಬ್ಯಾಂಕ್‌ಗಳಲ್ಲಿ ಇರುವ ಚಿನ್ನ 560ಟನ್
ಇದೆ ಕಾರಣದಿಂದ ನಾವು ಚಿನ್ನದ ಮೇಲಿನ ಮೋಹ ಬಿಡದೆ ಕೊಂಡಷ್ಟೂ ಅಮೇರಿಕಾ ಇನ್ನಷ್ಟು ಬಲಿಷ್ಠವಾಗುತ್ತದೆ. ಗಮನಿಸಿ ಗೋಲ್ಡ್ ಡೆಪಾಸಿಟ್ ಬ್ಯಾಂಕಿನಲಿದ್ದರೆ ಆಗ ನಾವು ಅಮೆರಿಕಾಗಿಂತ ಬಲಿಷ್ಠರಾಗಲು ಸಾಧ್ಯ. ಆದರೆ ನಮ್ಮ ದೇಶದಲ್ಲಿ ಆಗಿರುವುದೇನು ಗೊತ್ತೇ? ನಮ್ಮ ಬ್ಯಾಂಕ್‌ಗಳಲ್ಲಿ ಇರುವ ಚಿನ್ನ 560ಟನ್. ಆದರೆ ಬಿಡಿಯಾಗಿ ದೇಶದ ಜನರ ಬಳಿ ಇರುವ ಚಿನ್ನ 24 ಸಾವಿರ ಟನ್. ಆಕಸ್ಮಾತ್ ಇದು ಉಲ್ಟಾ ಆಗಿದ್ದರೆ! ಅಂದರೆ ಬ್ಯಾಂಕ್‌ಗಳ ಬಳಿ 24 ಸಾವಿರ ಟನ್ ಚಿನ್ನದ ಡೆಪಾಸಿಟ್ ಇದಿದ್ದರೆ ನಮ್ಮ ಆರ್ಥಿಕ ಚಿತ್ರಣವೇ ಬೇರೆಯಾಗಿರುತ್ತಿತ್ತು.
ಭಾರತೀಯ ನಾಗರಿಕನಿಗೆ ತಿಳಿಯುವುದೆಂದು
ಕೇವಲ ನಮ್ಮ ಮಾನಸಿಕ ಧೈರ್ಯಕ್ಕೆ ಚಿನ್ನ ಕೊಳ್ಳುವುದು ಬಿಡಬೇಕು. ಹೆಚ್ಚೆಚ್ಚು ಗೋಲ್ಡ್ ಬಾಂಡ್ ಖರೀದಿ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಇದು ಮದುವೆಗೂ, ಶುಭ ಸಮಾರಂಭಕ್ಕೂ ಚಿನ್ನ ಖರೀದಿಸುವ ಭಾರತೀಯ ನಾಗರಿಕನಿಗೆ ತಿಳಿಯುವುದೆಂದು? ಚಿನ್ನವನ್ನು ಕೊಳ್ಳುವುದು ತಪ್ಪೇನಲ್ಲ ಆದರೆ ಚಿನ್ನದ ಬದಲು ಚಿನ್ನದ ಬಾಂಡ್ ಕೊಳ್ಳುವುದು ಉತ್ತಮ. ಕೇಂದ್ರ ಸರಕಾರ ಇಂತಹ ಗೋಲ್ಡ್ ಬಾಂಡ್‌ಗಳನ್ನು ವಿತರಣೆ ಮಾಡುತ್ತದೆ ಇಂತಹ ಗೋಲ್ಡ್ ಬಾಂಡ್ ಖರೀದಿಯಿಂದ ಗ್ರಾಹಕನಿಗೆ/ ಹೂಡಿಕೆದಾರನಿಗೆ ಹೆಚ್ಚು ಲಾಭದಾಯಕ.
ಇದೆಲ್ಲಾ ಒಂದು ಕಡೆಯಿರಲಿ ಸದ್ಯಕ್ಕೆ ಮಂಕಾಗಿರುವ ಚಿನ್ನ ಮತ್ತೆ ಹೊಳಪು ಕಾಣುತ್ತದೆ ಸಂಶಯ ಬೇಡ.


Click it and Unblock the Notifications