ಕೊರೊನಾವೈರಸ್ ಸಾಂಕ್ರಾಮಿಕ ಹೊರತಾಗಿಯು ಭಾರತದಲ್ಲಿ ಚಿನ್ನದ ಮೇಲಿನ ಆಕರ್ಷಣೆ ಕಡಿಮೆಯಾಗಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಚಿನ್ನದ ಇಟಿಎಫ್‌ಗಳ ಮೇಲಿನ ಹೂಡಿಕೆ.
2020-21ರಲ್ಲಿ ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಹೂಡಿಕೆದಾರರು 6,900 ಕೋಟಿ ರೂಪಾಯಿ ಮಾಡಿದ್ದಾರೆ. ಇದು ಹಿಂದಿನ ಹಣಕಾಸು ವರ್ಷದ ಮೊತ್ತಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 2019-20ರಲ್ಲಿ 1,614 ಕೋಟಿ ರೂಪಾಯಿ ಹೂಡಿಕೆ ಆಗಿತ್ತು, ಈ ಮೂಲಕ ಸತತ ಎರಡನೇ ವರ್ಷದ ಒಳಹರಿವನ್ನು ಸಹ ಸೂಚಿಸುತ್ತದೆ.

ಇದಕ್ಕೂ ಮುನ್ನ, ಚಿನ್ನದ ಇಟಿಎಫ್‌ಗಳು 2018-19ರಲ್ಲಿ 412 ಕೋಟಿ ರೂ., 2017-18ರಲ್ಲಿ 835 ಕೋಟಿ ರೂ., 2016-17ರಲ್ಲಿ 775 ಕೋಟಿ ರೂ., 2015-16ರಲ್ಲಿ 903 ಕೋಟಿ ರೂ., 2014-15ರಲ್ಲಿ 1,475 ಕೋಟಿ ರೂ. 2013-14ರಲ್ಲಿ 2,293 ಕೋಟಿ ರೂ., 2012-13ರಲ್ಲಿ 1,414 ಕೋಟಿ ರೂಪಾಯಿ ಹೂಡಿಕೆ ಆಗಿತ್ತು.
ಚಿನ್ನದ ಇಟಿಎಫ್ ನಿರ್ವಹಣಾ ಸಂಪತ್ತು ಮೌಲ್ಯವು ಈ ವರ್ಷದ ಮಾರ್ಚ್ ಕೊನೆಗೆ ಶೇ. 78ರಷ್ಟು ಹೆಚ್ಚಾಗಿದ್ದು, 14,123 ಕೋಟಿ ರೂಪಾಯಿಗೆ ತಲುಪಿದೆ. 2020ರ ಮಾರ್ಚ್ ಅಂತ್ಯದ ವೇಳೆಗೆ ಇದು 7,949 ಕೋಟಿ ರೂಪಾಯಿ ಆಗಿತ್ತು.


Click it and Unblock the Notifications