Gold Gets Expensive: ಚಿನ್ನ ದುಬಾರಿ, ನಿಮ್ಮ ನಗರದಲ್ಲಿ ಹಳದಿ ಲೋಹದ ದರ ಎಷ್ಟಿದೆ?

ಚಿನ್ನದ ದರವು ಭಾರತದಲ್ಲಿ ಭಾರೀ ಏರಿಕೆಯಾಗುತ್ತಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಹಳೆದಿ ಲೋಹದ ದರವು ಒಂದೆರಡು ದಿನ ಕೊಂಚ ಇಳಿಕೆಯಾಗಿತ್ತು. ಆದರೆ ಮತ್ತ ಏರಿಕೆಯನ್ನು ಕಂಡಿದೆ. ನಿನ್ನೆ 22 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆಯು 55,700 ರೂಪಾಯಿ ಆಗಿತ್ತು. ಆದರೆ ಆ ದರವು ಬುಧವಾರಕ್ಕೆ 56,200 ರೂಪಾಯಿಗೆ ಏರಿಕೆಯಾಗಿದೆ. ಇನ್ನು 24 ಕ್ಯಾರೆಟ್‌ನ ಚಿನ್ನದ ದರವು ಇಂದು 61,310ಕ್ಕೆ ಏರಿಕೆಯಾಗಿದೆ.

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 12ರಂದು ಈ ಸಮಯದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 60680.00 ರೂಪಾಯಿ ಆಗಿದೆ. ಬೆಳ್ಳಿ ಏರಿಕೆಯಾಗ್ಗಿದ್ದು 75269.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.28ರಷ್ಟು ಏರಿದ್ದು 2,010.51 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.22ರಷ್ಟು ಏರಿಕೆ ಕಂಡಿದ್ದು 25.13 ಯುಎಸ್ ಡಾಲರ್ ಆಗಿದೆ.

 ಚಿನ್ನ ದುಬಾರಿ, ನಿಮ್ಮ ನಗರದಲ್ಲಿ ಹಳದಿ ಲೋಹದ ದರ ಎಷ್ಟಿದೆ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಟಕ್ ಸೆಕ್ಯೂರಿಟೀಸ್‌ನ ಅಧಿಕಾರಿ ರವೀಂದ್ರ ವಿ ರಾವ್, "ಕಾಮೆಕ್ಸ್ ಚಿನ್ನದ ದರವು ಶೇಕಡ 1ರಷ್ಟು ಇಳಿಕೆಯಾಗಿದ್ದು 2,000 ಡಾಲರ್ ಆಗಿದೆ. ದರವು ಪ್ರಮುಖವಾಗಿ ಡಾಲರ್ ಮೌಲ್ಯದ ಮೇಲೆ ಆಧಾರಿತವಾಗಿದೆ," ಎಂದು ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿ ಎಫ್‌ಒಎಂಸಿ ಸಭೆಯಲ್ಲಿ ಯುಎಸ್ ಫೆಡರಲ್ ರಿಸರ್ವ್ 25 ಬೇಸಿಸ್ ಪಾಯಿಂಟ್‌ಗಳಿಂದ ದರಗಳನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಇವೆಲ್ಲವೂ ಕೂಡಾ ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ.

ಅಬಕಾರಿ ಸುಂಕ, ಉತ್ಪಾದನಾ ವೆಚ್ಚಗಳು ಮತ್ತು ರಾಜ್ಯ ತೆರಿಗೆಗಳಂತಹ ನಿರ್ದಿಷ್ಟ ಅಂಶಗಳ ಆಧಾರದ ಮೇಲೆ, ರಾಷ್ಟ್ರದ ವಿವಿಧ ಪ್ರದೇಶಗಳಿಗೆ ಚಿನ್ನದ ಬೆಲೆ ಬೇರೆ ಬೇರೆ ರೀತಿಯಾಗಿರುತ್ತದೆ. ಮಂಗಳೂರಿನಲ್ಲಿರುವ ಚಿನ್ನದ ದರಕ್ಕೂ ಚೆನ್ನೈನಲ್ಲಿರುವ ಚಿನ್ನದ ದರಕ್ಕೂ ವ್ಯತ್ಯಾಸ ಇರುತ್ತದೆ. ಬೆಳ್ಳಿ ದರವು ಕೂಡಾ ಈ ರೀತಿಯೇ ಆಗಿದೆ. ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ತೆರಿಗೆಗಳ ಆಧಾರದಲ್ಲಿ ಚಿನ್ನದ ಬೆಲೆಯು ನಿರ್ಧಾರವಾಗುತ್ತದೆ. ಭಾರತದಲ್ಲಿ ಚಿನ್ನದ ದರ ಎಷ್ಟಿದೆ ಎಂಬ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?

10 ದಿನದಲ್ಲಿ 4 ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಏಪ್ರಿಲ್ 12ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 500 ರೂಪಾಯಿ ಏರಿಳಿಕೆಯಾಗಿದ್ದು ಪ್ರಸ್ತುತ 56,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 550 ರೂಪಾಯಿ ಹಿಗ್ಗಿದ್ದು ಪ್ರಸ್ತುತ 61,310 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 7500 ರೂಪಾಯಿ ಏರಿಕೆಯಾಗ್ಗಿದ್ದು ಪ್ರಸ್ತುತ 77,350 ರೂಪಾಯಿ ಆಗಿದೆ.

10 ಗ್ರಾಂ ಲೆಕ್ಕಾಚಾರದಲ್ಲಿ

ಬೆಂಗಳೂರು
22 ಕ್ಯಾರೆಟ್ ಚಿನ್ನ: 56,250 ರೂಪಾಯಿ (+500 ರೂಪಾಯಿ)
24 ಕ್ಯಾರೆಟ್ ಚಿನ್ನ: 61,360 ರೂಪಾಯಿ (+550 ರೂಪಾಯಿ)

ಮುಂಬೈ
22 ಕ್ಯಾರೆಟ್ ಚಿನ್ನ: 56,200 ರೂಪಾಯಿ (+500 ರೂಪಾಯಿ)
24 ಕ್ಯಾರೆಟ್ ಚಿನ್ನ: 61,310 ರೂಪಾಯಿ (+550 ರೂಪಾಯಿ)

ದೆಹಲಿ
22 ಕ್ಯಾರೆಟ್ ಚಿನ್ನ: 56,350 ರೂಪಾಯಿ (+500 ರೂಪಾಯಿ)
24 ಕ್ಯಾರೆಟ್ ಚಿನ್ನ: 61,460 ರೂಪಾಯಿ (+550 ರೂಪಾಯಿ)

ಕೇರಳ
22 ಕ್ಯಾರೆಟ್ ಚಿನ್ನ: 56,200 ರೂಪಾಯಿ (+500 ರೂಪಾಯಿ)
24 ಕ್ಯಾರೆಟ್ ಚಿನ್ನ: 61,310 ರೂಪಾಯಿ (+550 ರೂಪಾಯಿ)

ಮಂಗಳೂರು
22 ಕ್ಯಾರೆಟ್ ಚಿನ್ನ: 56,250 ರೂಪಾಯಿ (+500 ರೂಪಾಯಿ)
24 ಕ್ಯಾರೆಟ್ ಚಿನ್ನ: 61,360 ರೂಪಾಯಿ (+550 ರೂಪಾಯಿ)

ಮೈಸೂರು
22 ಕ್ಯಾರೆಟ್ ಚಿನ್ನ: 56,250 ರೂಪಾಯಿ (+500 ರೂಪಾಯಿ)
24 ಕ್ಯಾರೆಟ್ ಚಿನ್ನ: 61,360 ರೂಪಾಯಿ (+550 ರೂಪಾಯಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+