ಹಬ್ಬ ಎಂದಾಕ್ಷಣ ಚಿನ್ನದ ಮೇಲಿನ ಹೂಡಿಕೆ ಅಥವಾ ಚಿನ್ನದ ಖರೀದಿ ಸಹಜವಾಗಿಯೇ ನಡೆಯುತ್ತದೆ. ಯಾವುದೇ ಹಬ್ಬ ಬಂದಾಗ ಚಿನ್ನವನ್ನು ಖರೀದಿ ಮಾಡುವುದು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇಂದು (ಆಗಸ್ಟ್ 25) ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಅಕ್ಷಯ ತೃತೀಯ ಮೊದಲಾದ ದಿನಗಳಂದು ನಾವು ಚಿನ್ನದ ಮೇಲೆ ಹೂಡಿಕೆ ಮಾಡುವಂತೆ ಇಂದು ಕೂಡಾ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಲಕ್ಷ್ಮೀ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯಿದೆ. ಇಂದು ನೀವು ಕೂಡಾ ಚಿನ್ನವನ್ನು ಖರೀದಿ ಮಾಡಲು ಮುಂದಾಗಿದ್ದೀರಾ? ಹಾಗಾದರೆ ಇಲ್ಲಿದೆ ಇಂದಿನ ಚಿನ್ನದ ದರದ ವಿವರ ಮುಂದೆ ಓದಿ....

ಇಂದಿನ ಚಿನ್ನದ ದರ ಎಷ್ಟಿದೆ?
ಸತತವಾಗಿ ನಾಲ್ಕು ದಿನಗಳ ಏರಿಕೆಯಾಗಿದ್ದ ಬಂಗಾರ ದರವು ಆಗಸ್ಟ್ 25 ರಂದು ಸ್ಥಿರವಾಗಿದೆ. ಇಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು 54,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 59,450 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ ಇಳಿಕೆಯಾಗಿದ್ದು ಪ್ರಸ್ತುತ 76,400 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 25ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58818.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 73665.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.08ರಷ್ಟು ಏರಿಕೆ ಕಂಡಿದ್ದು 1,917.41 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.20ರಷ್ಟು ಹಿಗ್ಗಿದ್ದು 24.18 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,500 ರೂಪಾಯಿ (----------)
24 ಕ್ಯಾರೆಟ್ ಚಿನ್ನ: 59,450 ರೂಪಾಯಿ (----------)
ಮುಂಬೈ
22 ಕ್ಯಾರೆಟ್ ಚಿನ್ನ: 54,500 ರೂಪಾಯಿ (----------)
24 ಕ್ಯಾರೆಟ್ ಚಿನ್ನ: 59,450 ರೂಪಾಯಿ (----------)
ದೆಹಲಿ
22 ಕ್ಯಾರೆಟ್ ಚಿನ್ನ: 54,650 ರೂಪಾಯಿ (----------)
24 ಕ್ಯಾರೆಟ್ ಚಿನ್ನ: 59,600 ರೂಪಾಯಿ (----------)
ಕೇರಳ
22 ಕ್ಯಾರೆಟ್ ಚಿನ್ನ: 54,500 ರೂಪಾಯಿ (----------)
24 ಕ್ಯಾರೆಟ್ ಚಿನ್ನ: 59,450 ರೂಪಾಯಿ (----------)
ಮಂಗಳೂರು
22 ಕ್ಯಾರೆಟ್ ಚಿನ್ನ: 54,500 ರೂಪಾಯಿ (----------)
24 ಕ್ಯಾರೆಟ್ ಚಿನ್ನ: 59,450 ರೂಪಾಯಿ (----------)
ಮೈಸೂರು
22 ಕ್ಯಾರೆಟ್ ಚಿನ್ನ: 54,500 ರೂಪಾಯಿ (----------)
24 ಕ್ಯಾರೆಟ್ ಚಿನ್ನ: 59,450 ರೂಪಾಯಿ (----------)

Click it and Unblock the Notifications