ಚಿನ್ನದ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಡಿಮ್ಯಾಂಡ್ ಕೂಡ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಚಿನ್ನದಂತಹ ಸುದ್ದಿ ಸಿಕ್ಕಿದ್ದು, ಚಿನ್ನದ ಗಣಿಗಳ ಬಗ್ಗೆ ಹೊಸ ಆಶಾಭಾವನೆಯ ಕಿರಣ ಮೂಡಿದೆ. ಅಂದರೆ ಇಂದು ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವ ಹಟ್ಟಿ ಚಿನ್ನದ ಗಣಿ ರಾಜ್ಯದ ಏಕೈಕ ಸಕ್ರಿಯ ಚಿನ್ನದ ಗಣಿಯಾಗಿ ಮುಂದುವರಿದಿದ್ದರೆ, ಈಗ ಕೋಪ್ಪಳ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿನ ಮೂರು ಹೊಸ ಸ್ಥಳಗಳಲ್ಲಿ ಚಿನ್ನದ ಶೋಧನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದೆ.

ಹೌದು, ಇದೊಂಥರಾ ರಾಯಚೂರು, ಹಾವೇರಿ, ಕೊಪ್ಪಳಕ್ಕೆ ಚಿನ್ನದಂತಹ ಖುಷಿಸುದ್ದಿ ಎನ್ನಬಹುದು. ಏಕೆಂದರೆ ಇದು ಹೊಸ ಆಶಾಭಾವನೆಯ ಕಿರಣ ಮೂಡಿದೆ. ಇಂದು ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವ ಹಟ್ಟಿ ಚಿನ್ನದ ಗಣಿ ರಾಜ್ಯದ ಏಕೈಕ ಸಕ್ರಿಯ ಚಿನ್ನದ ಗಣಿಯಾಗಿ ಮುಂದುವರಿದಿದ್ದರೆ, ಈಗ ಕೋಪ್ಪಳ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿನ ಮೂರು ಹೊಸ ಸ್ಥಳಗಳಲ್ಲಿ ಚಿನ್ನದ ಶೋಧನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದ್ದು, ರಾಜ್ಯದ ಖನಿಜ ಸಂಪತ್ತಿಗೆ ಮತ್ತೊಮ್ಮೆ ಬೆಳಕು ಬೀರುತ್ತಿದೆ. ಈ ಅನ್ವೇಷಣಾ ಯತ್ನಗಳು ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಆರ್ಥಿಕ ಲಾಭ ಮತ್ತು ಉದ್ಯೋಗಾವಕಾಶಗಳ ನವದ್ವಾರ ತೆರೆಯಬಹುದೆಂಬ ನಿರೀಕ್ಷೆಯನ್ನು ಬಿತ್ತಿವೆ.
ಇನ್ನು ಭಾರತದಲ್ಲಿ ಚಿನ್ನದ ಗಣಿಯ ಹಟ್ಟಿಯನ್ನ ಕೋಲಾರ ಎಂದು ಗುರುತಿಸಲಾಗಿದೆ. ಈ ಪರಂಪರೆಯೊಂದಿಗೆ ಇಂದು ಕರ್ನಾಟಕ ಮತ್ತೊಮ್ಮೆ ಚಿನ್ನದ ಅಧ್ಯಾಯವನ್ನು ಪುನರಾರಂಭ ಮಾಡುವ ಹಾದಿಯಲ್ಲಿದೆ. ಇತ್ತೀಚೆಗೆ ಚಿನ್ನದ ಬೆಲೆಗಳು ಇತಿಹಾಸದಲ್ಲೇ ಅತ್ಯಧಿಕ ಮಟ್ಟ ತಲುಪಿರುವ ಕಾರಣದಿಂದಾಗಿ ಚಿನ್ನದ ಗಣಿಗಾರಿಕೆ ಪುನಶ್ಚೇತನಕ್ಕೆ ಒತ್ತಾಸೆಯಾಗುತ್ತಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರವು ರಾಜ್ಯದ ಮೂರು ಜಿಲ್ಲೆಗಳಾದ ಕೋಪ್ಪಳ, ರಾಯಚೂರು ಮತ್ತು ಹಾವೇರಿಯಲ್ಲಿ ಚಿನ್ನ ಸಂಶೋಧನೆ ಮಾಡಲು ಅನುಮತಿ ನೀಡಿದೆ.
ಇನ್ನು ಈ ಯೋಜನೆಗಳು ನೇರವಾಗಿ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ ವತಿಯಿಂದ ನಿಯೋಜಿಸಲಾಗಿದೆ. ಭಾರತದ ಐದು ಪ್ರಮುಖ ಚಿನ್ನ ಅನ್ವೇಷಣಾ ಯೋಜನೆಗಳ ಪೈಕಿ ಎರಡು ಯೋಜನೆಗಳು ಕರ್ನಾಟಕದ ಕಿಲ್ಲರ್ಹಟ್ಟಿ ಮತ್ತು ಚಿನ್ನಿಕಟ್ಟಿ ಪ್ರದೇಶಗಳಲ್ಲಿ ನಡೆಯಲಿವೆ. ಕಿಲ್ಲರ್ಹಟ್ಟಿ ಕೋಪ್ಪಳ ಹಾಗೂ ರಾಯಚೂರಿನ ಗಡಿಭಾಗದಲ್ಲಿದ್ದರೆ, ಚಿನ್ನಿಕಟ್ಟಿ ಹಾವೇರಿ ಜಿಲ್ಲೆಯಲ್ಲಿ ಇದೆ.
ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಕಂಪನಿ:
ಇನ್ನು ಈ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಜವಾಬ್ದಾರಿ, ಮೈನಿಂಗ್ ಟೆಕ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್' ಎಂಬ ಖಾಸಗಿ ಕಂಪನಿಯದ್ದಾಗಿದೆ. ಈ ಸಂಸ್ಥೆ ತನ್ನ ಸ್ವಂತ ವೆಚ್ಚದಲ್ಲಿ 10 ಮತ್ತು 12 ತಿಂಗಳು ಅವಧಿಯಲ್ಲಿ ಕೆಲಸ ಮುಗಿಸಬೇಕಿದೆ. ಸದ್ಯ 'ವಿಚಕ್ಷಣ ಸಮೀಕ್ಷೆ' ನಡೆಯುತ್ತಿದ್ದು, ಚಿನ್ನದ ಅಸ್ತಿತ್ವವಿರುವ ಪ್ರಾಥಮಿಕ ಸೂಚನೆಗಳನ್ನು ಸಂಗ್ರಹಿಸಲಾಗುತ್ತಿದೆ. ಇನ್ನು ಚಿನ್ನಿಕಟ್ಟಿಯಲ್ಲಿ G-3 ಹಂತದ ಪರಿಶೋಧನೆ ಆರಂಭವಾಗಿದ್ದು, ಈ ಹಂತದಲ್ಲಿ ಭೂವೈಜ್ಞಾನಿಕ ನಕ್ಷೆ ತಯಾರಿಕೆ, ಮಣ್ಣಿನ ಮಾದರಿಗಳ ಸಂಗ್ರಹ ಮತ್ತು ಪ್ರಾಥಮಿಕ ಅನಾಲಿಸಿಸ್ ನಡೆಯುತ್ತದೆ.
ಅನುಮತಿ ಸಮಸ್ಯೆ ಮತ್ತು ಅರಣ್ಯ ಇಲಾಖೆ:
ಇನ್ನು ಈ ಯೋಜನೆಯೊಡನೆ ಗಮನ ಸೆಳೆಯುತ್ತಿರುವ ವಿಶೇಷ ಅಂಶವೆಂದರೆ, ರಾಜ್ಯ ಅರಣ್ಯ ಇಲಾಖೆಯಿಂದ ಇನ್ನೂ ಈ ಕಾರ್ಯಗಳಿಗೆ ಅನುಮತಿ ಸಿಗದೆ ಇರುವುದಾಗಿದೆ. ಇವುಗಳು ಯೋಜನೆಗಳ ಪ್ರಗತಿಗೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಇದಕ್ಕೂ ಮೊದಲು ಹಾವೇರಿಯಲ್ಲಿ ಕೆಲ ಪ್ರಯತ್ನಗಳು ವಿಫಲವಾಗಿದ್ದ ಇತಿಹಾಸವಿದೆ.
ರಾಜಕೀಯ ಮುಖಂಡರ ಪ್ರತಿಕ್ರಿಯೆ ಮತ್ತು ಭರವಸೆ:
ಅಂದಹಾಗೆ ರಾಯಚೂರಿನ ಸಂಸದ ಜಿ. ಕುಮಾರ್ ನಾಯಕ್ ಅವರು ಕೂಡ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ರಾಜ್ಯದ ಭೂಗರ್ಭದಲ್ಲಿರುವ ಸಂಪತ್ತುಗಳ ಬಳಸುವ ಹೊಣೆಗಾರಿಕೆಗೆ ಈ ಯೋಜನೆಗಳು ದಾರಿ ನೀಡುತ್ತವೆ ಎಂದು ತಿಳಿಸಿದ್ದಾರೆ. ನವೀನ ಕೈಗಾರಿಕೆಗಳು ಮತ್ತು ಇಂಧನ ಮೂಲಗಳ ನಡುವೆ ಖನಿಜ ಸಂಪತ್ತಿನ ಮಹತ್ವ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಇದು ಸೂಕ್ತ ಕ್ರಮವೆಂದಿದ್ದಾರೆ.
ಹಟ್ಟಿ ಚಿನ್ನದ ಗಣಿ ಸಂಸ್ಥೆ ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದರೂ, ಕೇಂದ್ರವು ಖಾಸಗಿ ಕಂಪನಿಗೆ ಅವಕಾಶ ನೀಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ರಾಜ್ಯದ ಪಾಲಿನ ಹಕ್ಕು, ಪಾಲುದಾರಿಕೆ ಹಾಗೂ ಮುನ್ನಡೆಯ ಹಾದಿಯಲ್ಲಿ ಇದು ಭಿನ್ನಮತ ಮೂಡಿಸಿದೆ. ಚಿನ್ನವಷ್ಟೇ ಅಲ್ಲದೆ, ಬಾಕ್ಸೈಟ್, ಲ್ಯಾಟರೈಟ್, ಸುಣ್ಣದ ಕಲ್ಲು, ಕಬ್ಬಿಣದ ಅದಿರು, ಮ್ಯಾಂಗನೀಸ್ ಇತ್ಯಾದಿ ಖನಿಜಗಳ ಪತ್ತೆ ಹಚ್ಚಲು ಎನ್‌ಎಂಇಟಿ ಇನ್ನೂ ಆರು ಸ್ಥಳಗಳಲ್ಲಿ ಪರಿಶೋಧನಾ ಕಾರ್ಯ ನಡೆಸುತ್ತಿದೆ. ಇವುಗಳಲ್ಲಿ ಹೆಚ್ಚಿನವು ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿವೆ.
ಒಟ್ಟಿನಲ್ಲಿ ಕರ್ನಾಟಕ ಮತ್ತೆ ಚಿನ್ನದ ಕನಸಿಗೆ ಜವಾಬ್ದಾರಿಯುತ ರೀತಿಯಲ್ಲಿ ಹೆಜ್ಜೆ ಇಡುತ್ತಿದೆ. ಬಹುಶಃ ಈ ಅನ್ವೇಷಣಾ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡರೆ, ರಾಜ್ಯದ ಆರ್ಥಿಕತೆಗೆ ಹೊಸ ಶಕ್ತಿ ಸಿಗಬಹುದು. ಆದರೆ ಪರಿಸರ ಅನುಮತಿ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಜ್ಯದ ಪಾಲು ಎಂಬ ಎಲ್ಲ ಅಂಶಗಳು ಸಮತೋಲನದಲ್ಲಿರಬೇಕಾದ ಅಗತ್ಯವಿದೆ.


Click it and Unblock the Notifications