For Quick Alerts
ALLOW NOTIFICATIONS  
For Daily Alerts

ಚಿನ್ನದ ದರ 7 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ; 22 ಕ್ಯಾರಟ್ ಗೆ 40,350

|

ಚಿನ್ನದ ಬೆಲೆಯು ಏಳು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೊರೊನಾ ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆತಂಕದ ಕಾರಣಕ್ಕೆ ಚಿನ್ನದ ಬೆಲೆ ಏರಿದೆ. ಕೊರೊನಾ ವೈರಾಣುವಿನಿಂದ ಆಗುವ ಆರ್ಥಿಕ ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಚೀನಾ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ ಮೆಚ್ಚಿನ ಹೂಡಿಕೆಯಾದ ಚಿನ್ನದ ಮೇಲೇ ಹೂಡಿಕೆದಾರರು ಹಣ ತೊಡಗಿಸುತ್ತಿದ್ದಾರೆ.

 

ಯು.ಎಸ್. ಗೋಲ್ಡ್ ಫ್ಯೂಚರ್ಸ್ ಶುಕ್ರವಾರ- ಭಾರತೀಯ ಕಾಲಮಾನ ಬೆಳಗ್ಗೆ 10.30ಕ್ಕೆ ಔನ್ಸ್ ಗೆ $ 1629ರಂತೆ ವಹಿವಾಟು ನಡೆಸಿತು. ಭಾರತದಲ್ಲಿ ಸ್ಥಳೀಯ ಜ್ಯುವೆಲ್ಲರ್ ಗಳಲ್ಲಿ ಸ್ಪಾಟ್ ಗೋಲ್ಡ್ 40 ಸಾವಿರದ ಗಡಿ ದಾಟಿ, 22 ಕ್ಯಾರಟ್ ಚಿನ್ನ ಪ್ರತಿ 10 ಗ್ರಾಮ್ ಗೆ 40,350ಕ್ಕೆ ವಹಿವಾಟು ನಡೆಸಿತು. ಇನ್ನು 24 ಕ್ಯಾರಟ್ ಚಿನ್ನ 10 ಗ್ರಾಮ್ ಗೆ 41,450 ರುಪಾಯಿ ಇತ್ತು.

 

ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ? ಏನಂತಾರೆ ಆಭರಣ ವ್ಯಾಪಾರಿಗಳು?ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ? ಏನಂತಾರೆ ಆಭರಣ ವ್ಯಾಪಾರಿಗಳು?

ಭಾರತದ ಲೋಹದ ಭವಿಷ್ಯದ ದಿಕ್ಕನ್ನು ನಿರ್ಧಾರ ಮಾಡುವಲ್ಲಿ ಯು.ಎಸ್. ಫೆಡ್ ಬಡ್ಡಿ ದರದ ತೀರ್ಮಾನ ಬಹಳ ಮುಖ್ಯವಾದದ್ದು. ಯು.ಎಸ್. ಫೆಡ್ ಬಡ್ಡಿದರವನ್ನು ಸ್ಥಿರವಾಗಿ ಮುಂದುವರಿಸಬೇಕಿದೆ. ಹಾಗಾದಲ್ಲಿ ಚಿನ್ನದ ದರದಲ್ಲಿ ಇನ್ನಷ್ಟು ಚಲನೆ ಕಾಣಬಹುದು. ಒಟ್ಟಾರೆಯಾಗಿ ಚಿನ್ನದ ದರದಲ್ಲಿ ಏರಿಕೆ ಮುಂದುವರಿಯುವ ಎಲ್ಲ ಸಾಧ್ಯತೆ ಇದೆ.

ಚಿನ್ನದ ದರ 7 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ; 22 ಕ್ಯಾರಟ್ 40,350

ದೀರ್ಘಾವಧಿ ಹೂಡಿಕೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡವರು ಫ್ಯೂಚರ್ ಮಾರ್ಕೆಟ್ ನಲ್ಲಿ ಹೂಡಿಕೆ ಮುಂದುವರಿಸಬಹುದು. ತಜ್ಞರು ಅಭಿಪ್ರಾಯ ಪಡುವ ಪ್ರಕಾರ, ಒಂದು ವೇಳೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದರೂ ಅದು ತಾತ್ಕಾಲಿಕ ಮಾತ್ರ.

English summary

Gold Price 7 Year High; 22 Ct Gold Crossed 40 Thousand

Gold price at 7 year high. 22 ct 10 gm crossed 40,000 rupees. Here is the complete details.
Story first published: Friday, February 21, 2020, 15:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X