Gold Price Today: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ಸ್ವಲ್ಪ ಮಟ್ಟಕ್ಕೆ ಇಳಿಕೆಯಾಗಿದೆ. ಹೌದು,ನಿನ್ನೆ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಇಂದು ಅಲ್ಪ ಮಟ್ಟದಲ್ಲಿ ಇಳಿಕೆಯಾಗಿದ್ದು,ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡಬೇಕೆಂದುಕೊಂಡವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಾಗಿದ್ರೆ ಮಂಗಳವಾರ (ಡಿ.24 ) ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಬೆಳ್ಳಿ ಬೆಲೆ ಕೆಜಿಗೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಂಗಳವಾರ, ಡಿಸೆಂಬರ್ 24 ರಂದು, ಯುಎಸ್ ಅಂಕಿಅಂಶಗಳು ನಿರೀಕ್ಷೆಗಿಂತ ಕಡಿಮೆಯಾದ ನಂತರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಕುಸಿತ ಕಂಡಿವೆ.ಚಿನ್ನ ಬೆಲೆಯಲ್ಲಿ ಮಾತ್ರ ಕೊಂಚ ಏರಿಕೆ ಕಂಡಿದ್ದು, ಬೆಳ್ಳಿ ಬೆಲೆಯಲ್ಲಿ ಯಾವ ಬದಲಾವಣೆಯಾಗಿಲ್ಲ.

ಭಾರತದಲ್ಲಿ ಹೇಗಿದೆ ಚಿನ್ನದ ಬೆಲೆ?
ಭಾರತದಲ್ಲಿ ಪ್ರಸ್ತುತ ಒಂದು ಗ್ರಾಮ್ 24 ಕ್ಯಾರೆಟ್ ಚಿನ್ನಕ್ಕೆ 7,735 ರೂ.ಹಾಗೂ 22 ಕ್ಯಾರೆಟ್ ಚಿನ್ನಕ್ಕೆ 7,090 ರೂಪಾಯಿ ಇದೆ. 10 ಗ್ರಾಂ 22 ಕೆ ಚಿನ್ನದ ಬೆಲೆ ಸದ್ಯ 70,900 ರುಪಾಯಿ ಇದೆ. ಇದೇ ಚಿನ್ನ ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ 100 ರೂಪಾಯಿ ತಗ್ಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,350 ರುಪಾಯಿ ಆಗಿದೆ. 100 ಗ್ರಾಂ 22ಕೆ ಚಿನ್ನದ ಬೆಲೆ ನಿನ್ನೆ ರೂ.7,10,000 ಇದ್ದದ್ದು ಇಂದು ರೂ.1,000 ಇಳಿಕೆಯಾಗಿ 7,09,000 ರೂಗೆ ತಲುಪಿದೆ. ಇದೇ 100 ಗ್ರಾಂ 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 7,73,500 ರೂಪಾಯಿ ಇದೆ ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದಾರೆ ಸಾವಿರ ರೂಪಾಯಿಗಳು ಕಡಿಮೆಯಾಗಿವೆ. 18 ಕ್ಯಾರಟ್ನ 10 ಗ್ರಾಂ ಚಿನ್ನ 58,010 ರೂಪಾಯಿ ಇದೆ.
ಯುಎಸ್ ಮಟ್ಟದಲ್ಲಿ ಚಿನ್ನದ ಬೆಲೆಗಳು ಮಂಗಳವಾರ (ಡಿ.24) $2,629.80 ನಲ್ಲಿ ಸ್ಥಿರವಾಗಿದೆ, ಆದರೆ ಸ್ಪಾಟ್ ಚಿನ್ನವು 0307 GMT ನಂತೆ ಔನ್ಸ್‌ಗೆ $2,616.13 ಕ್ಕೆ 0.1% ಏರಿತು. ಪಲ್ಲಾಡಿಯಮ್ ಪ್ರತಿ ಔನ್ಸ್‌ಗೆ ಶೇ.0.5 ಏರಿಕೆಯಾಗಿ $934.51ಕ್ಕೆ ತಲುಪಿದೆ.ಆದರೆ ಸ್ಪಾಟ್ ಬೆಳ್ಳಿಯು ಶೇ.0.1 ಗಳಿಸಿ $29.68 ಕ್ಕೆ ತಲುಪಿದೆ. ಪ್ಲಾಟಿನಂ $938.00ಕ್ಕೆ ಇಳಿಕೆ ಕಂಡಿತು.
ಭಾರತದಲ್ಲಿ ಇಂದಿನ ಬೆಳ್ಳಿ ದರಗಳು
ಸದ್ಯ ಒಂದು ಗ್ರಾಮ್ ಬೆಳ್ಳಿಗೆ 91.40 ರೂಪಾಯಿ ಇದೆ.10 ಗ್ರಾಂ ಬೆಳ್ಳಿಯ ಬೆಲೆ 914 ರೂಪಾಯಿ 100 ಗ್ರಾಂ ಬೆಳ್ಳಿಯ ಬೆಲೆ 9,140 ರೂ, 1 ಕೆಜಿ ಬೆಳ್ಳಿಯ ಬೆಲೆ ಇಂದು 91,400 ರೂಗಳಿದ್ದು, ಜಾಗತಿಕ ಮಟ್ಟದಲ್ಲಿ ಬೆಳ್ಳಿಯ ಬೆಲೆ ಸ್ಥಿರವಾಗಿದರಿಂದ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯಲ್ಲಿ ಇದೆ.
MCX ನಲ್ಲಿ ಗೋಲ್ಡ್ ರೇಟ್ ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ 76,430 ರ ಆಸುಪಾಸಿನಲ್ಲಿ ಸ್ಥಿರವಾಗಿದೆ. ರಜಾ ಋತುವಿನ ಆರಂಭದೊಂದಿಗೆ, ಜಾಗತಿಕ ಮಾರುಕಟ್ಟೆಯ ಭಾಗವಹಿಸುವಿಕೆ ಕಡಿಮೆಯಾಗುವ ನಿರೀಕ್ಷೆಯಿದೆ. ಚಿನ್ನವು MCX ನಲ್ಲಿ 75,800 ರಿಂದ 76,900 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದು ವಿಪಿ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ಷೇರುಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಸ್ವಲ್ಪ ಹೆಚ್ಚಿಗೆ ವಹಿವಾಟು ನಡೆಸುತ್ತಿವೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಿನಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನಿರ್ಮಲ್ ಬ್ಯಾಂಗ್ ಸೆಕ್ಯುರಿಟೀಸ್ ಪ್ರೈವೇಟ್‌ನ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಗೋಲ್ಡ್ ರೇಟ್ ಹೇಗಿದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಬಹುತೇಕ ಸ್ಥಿರವಾಗಿವೆ. ಭಾನುವಾರ ಒಂದು ಔನ್ಸ್ ಚಿನ್ನದ ಬೆಲೆ 2,623 ಡಾಲರ್ ಇತ್ತು, ಆದರೆ ಸೋಮವಾರದ ವೇಳೆಗೆ 2 ಡಾಲರ್ ಏರಿಕೆಯಾಗಿ 2,625 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 29.70 ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರಗಳು
| ನಗರ | ಇಂದಿನ ಚಿನ್ನದ ಬೆಲೆ | ||
| ಚೆನ್ನೈ | 7,090 ರೂ | ||
| ಮುಂಬೈ | 7,090 ರೂ | ||
| ದೆಹಲಿ | 7,105 ರೂ | ||
| ಕೋಲ್ಕತ್ತಾ | 7,090 ರೂ | ||
| ಬೆಂಗಳೂರು | 7,090 ರೂ | ||
| ಹೈದರಾಬಾದ್ | 7,090 ರೂ | ||
ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಆಭರಣ ಪ್ರಿಯರಿಗೆ ಈ ದಿನ ಚಿನ್ನ ಖರೀದಿಗೆ ಉತ್ತಮ ಅವಕಾಶ ಎಂದೇ ಹೇಳಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications