ಚಿನ್ನದ ದರ ಗರಿಷ್ಠ ಮಟ್ಟದಿಂದ ರು. 9000 ಕಡಿಮೆಗೆ ವಹಿವಾಟು

ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತಗೊಂಡ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರವು ಭಾರತದ ಮಾರುಕಟ್ಟೆಯಲ್ಲಿ ಗುರುವಾರ (ಫೆಬ್ರವರಿ 4, 2021) ಬೆಲೆ ಇಳಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 0.56% ಇಳಿದು, ಪ್ರತಿ 10 ಗ್ರಾಮ್ ಗೆ ರು. 47,549 ಮುಟ್ಟಿದೆ. ಈ ಮೂಲಕ ಸತತ ನಾಲ್ಕನೇ ದಿನ ನಷ್ಟ ಮುಂದುವರಿದಿದೆ.

ಕಳೆದ ನಾಲ್ಕು ದಿನದಲ್ಲಿ 10 ಗ್ರಾಮ್ ಚಿನ್ನಕ್ಕೆ 2,000 ರುಪಾಯಿ ಬೆಲೆ ಕುಸಿತ ಆಗಿದೆ. ಜಾಗತಿಕ ದರದಲ್ಲಿ ಇಳಿಕೆ ಹಾಗೂ ಬಜೆಟ್ 2021ರಲ್ಲಿ ಆಮದು ಸುಂಕ ಕಡಿತದ ಪ್ರಸ್ತಾವ ಮಾಡಿದ್ದರಿಂದ ಈ ಬೆಳವಣಿಗೆ ಆಗಿದೆ. ಎಂಸಿಎಕ್ಸ್ ನಲ್ಲಿ ಬೆಳ್ಳಿ ಫ್ಯೂಚರ್ಸ್ 1% ಕುಸಿದು, ಕೇಜಿಗೆ ರು. 67,848 ಮುಟ್ಟಿದೆ.

ವಿಶ್ಲೇಷಕರು ಹೇಳುವ ಪ್ರಕಾರ, ಚಿನ್ನದ ದರದ ಕುಸಿತ ಮತ್ತು ಆರ್ಥಿಕತೆಯಲ್ಲಿ ಚೇತರಿಕೆಯಿಂದ ಭಾರತದಲ್ಲಿ ಫಿಸಿಕಲ್ ಚಿನ್ನದ ಬೇಡಿಕೆಗೆ ಉತ್ತೇಜನ ಸಿಗಬಹುದು. ಅಂದ ಹಾಗೆ ಕಳೆದ ವರ್ಷ ಆಗಸ್ಟ್ ನಲ್ಲಿ ಚಿನ್ನದ ದರವು ದಾಖಲೆಯ ರು. 56,200 ಮುಟ್ಟಿತ್ತು.

ಏರಿಳಿತ ಕಾಣುತ್ತಿರುವ ಚಿನ್ನದ ದರ

ಏರಿಳಿತ ಕಾಣುತ್ತಿರುವ ಚಿನ್ನದ ದರ

ಚಿನ್ನದ ದರವು ಪ್ರತಿ ಔನ್ಸ್ ಗೆ $ 1880- $ 1820ರ ಮಟ್ಟದಲ್ಲಿ ಏರಿಳಿತ ಕಾಣುತ್ತಿದೆ. ಈ ಎರಡು ತುದಿಯ ಪೈಕಿ ಯಾವುದನ್ನೇ ಮೀರಿದರೂ ಭವಿಷ್ಯದಲ್ಲಿ ದಿಕ್ಕು ಗೋಚರ ಆಗುತ್ತದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ತಿಳಿಸಿದೆ. ಎಂಸಿಎಕ್ಸ್ ಚಿನ್ನಕ್ಕೆ ರು. 48,650 ರೆಸಿಸ್ಟೆನ್ಸ್ ಹಾಗೂ ರು. 46,620 ಸಪೋರ್ಟ್ ಕಂಡುಬರಲಿದೆ ಎಂದು ಬ್ರೋಕರೇಜ್ ತಿಳಿಸಿದೆ. ಸ್ಪಾಟ್ ಚಿನ್ನದ ದರವು ಔನ್ಸ್ ಗೆ 0.1% ಕಡಿಮೆಯಾಗಿ, ಔನ್ಸ್ ಗೆ $ 1832.84 ತಲುಪಿದೆ. ಡಾಲರ್ ಸೂಚ್ಯಂಕವು 91.198ರಲ್ಲಿದ್ದು, ಇತರ ಕರೆನ್ಸಿಗಳು ಇರುವವರ ಪಾಲಿಗೆ ಚಿನ್ನ ದುಬಾರಿ ಆಗಲಿದೆ. ಯು.ಎಸ್. ಬೆಂಚ್ ಮಾರ್ಕ್ ಹತ್ತು ವರ್ಷದ ಟ್ರೆಷರಿ ಯೀಲ್ಡ್ ಮೂರು ವಾರದಲ್ಲೇ ಗರಿಷ್ಠ ಮಟ್ಟ ಮುಟ್ಟಿದೆ. ಇದರಿಂದ ಚಿನ್ನದಂಥ ಆಸ್ತಿಗಳನ್ನು ಇರಿಸಿಕೊಳ್ಳುವ ವೆಚ್ಚ ಹೆಚ್ಚಾಗುತ್ತದೆ.

ಎಂಟು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದ ಬೆಳ್ಳಿ

ಎಂಟು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದ ಬೆಳ್ಳಿ

ಸ್ಪಾಟ್ ಬೆಳ್ಳಿಯು 0.5% ಇಳಿಕೆ ಕಂಡು, $ 26.72ರಲ್ಲಿದೆ. ಸೋಮವಾರದಂದು ಎಂಟು ವರ್ಷಗಳ ಗರಿಷ್ಠ ಮಟ್ಟವಾದ $ 30.3 ತಲುಪಿದ ನಂತರ ಇಳಿಕೆ ಹಾದಿಯಲ್ಲಿ ಸಾಗಿಬಂದಿದೆ. ಇತರ ಬೆಲೆ ಬಾಳುವ ಲೋಹಗಳ ಪೈಕಿ ಪ್ಲಾಟಿನಂ 0.4% ಇಳಿಕೆ ಕಂಡು $ 1096.08ರಲ್ಲಿ ಇದ್ದರೆ, ಪಲ್ಲಾಡಿಯಂ ಔನ್ಸ್ ಗೆ 0.2% ಕುಸಿದು, $ 2,270.06ರಲ್ಲಿ ಇದೆ. ಯು.ಎಸ್. ಕೊರೊನಾ ಉತ್ತೇಜನ ಪ್ಯಾಕೇಜ್ ಭರವಸೆ ಬೆಂಬಲ ಸಿಕ್ಕಿದ್ದರಿಂದ ಈಕ್ವಿಟಿ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳ ಏರಿಕೆ ಕಂಡ ನಂತರ ಬ್ರೇಕ್ ಬಿದ್ದಿತ್ತು. ಸದ್ಯಕ್ಕೆ ಚಿನ್ನದ ವರ್ತಕರು ಯು.ಎಸ್. ಉತ್ತೇಜನ ಪ್ಯಾಕೇಜ್ ಬೆಳವಣಿಗೆಯನ್ನು ಎದುರು ನೋಡುತ್ತಿದ್ದಾರೆ.

ಯು.ಎಸ್. ಉತ್ತೇಜನಾ ಪ್ಯಾಕೇಜ್

ಯು.ಎಸ್. ಉತ್ತೇಜನಾ ಪ್ಯಾಕೇಜ್

ಯು.ಎಸ್. ಅಧ್ಯಕ್ಷ ಜೋ ಬೈಡನ್ ಬುಧವಾರ ಮಾತನಾಡಿ, $ 1.9 ಟ್ರಿಲಿಯನ್ ಉತ್ತೇಜನದಲ್ಲಿ ಒಳಗೊಂಡ ನಗದು ಹಸ್ತಾಂತರ ಮೊತ್ತವನ್ನು ಕಡಿಮೆ ಮಾಡುವುದಿಲ್ಲ ಎಂದಿಲ್ಲ. ಆದರೆ ಇದನ್ನು ಪಡೆಯುವುದಕ್ಕೆ ಇರುವ ಅರ್ಹ ಮಾನದಂಡಗಳಲ್ಲಿ ಬದಲಾವಣೆಗಳು ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಯು.ಎಸ್. ಖಾಸಗಿ ವೇತನ ಪ್ರಮಾಣವು ಜನವರಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಪಸಾಗಿದೆ. ಡಿಸೆಂಬರ್ ನಲ್ಲಿ ಆರ್ಥಿಕ ಸ್ಥಿತಿಯ ಕಾರಣಕ್ಕೆ ಉದ್ಯೋಗ ಪ್ರಮಾಣ ಕಡಿಮೆ ಆಗಿತ್ತು. ಆದರೆ ಜನವರಿಯಲ್ಲಿ ಮತ್ತೆ ಕಾರ್ಮಿಕ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+