ಜಾಗತಿಕ ಮಾರುಕಟ್ಟೆಗಳಲ್ಲಿ ಹಳದಿ ಲೋಹವು ಶುಕ್ರವಾರ ದುರ್ಬಲಗೊಂಡಿದ್ದು, ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿದಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.1ರಷ್ಟು ಇಳಿಕೆಯಾಗಿ 44,904 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಶೇಕಡಾ 1ರಷ್ಟು ಕುಸಿದು ಕೆಜಿಗೆ 67,100 ರೂಪಾಯಿಗೆ ತಲುಪಿದೆ. ಆದರೆ ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.3ರಷ್ಟು ಹೆಚ್ಚಾಗಿತ್ತು ಮತ್ತು ಬೆಳ್ಳಿ ಶೇಕಡಾ 0.7ರಷ್ಟು ಏರಿಕೆಯಾಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 45200/45600 ಸ್ಥಿರವಾಗಿರಲಿದ್ದು , 10 ಗ್ರಾಂಗೆ 44,100 ರೂ. ಬೆಂಬಲ ಪಡೆಯಲಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.
ಹಿಂದಿನ ವಹಿವಾಟಿನಲ್ಲಿ ಶೇಕಡಾ 0.5ರಷ್ಟು ಕುಸಿದ ನಂತರ ಸ್ಪಾಟ್ ಚಿನ್ನವು ಇಂದು ಔನ್ಸ್‌ಗೆ ಶೇಕಡಾ 0.4ರಷ್ಟು ಕುಸಿದು 1,730.06 ಡಾಲರ್‌ಗೆ ತಲುಪಿದೆ.
ಇನ್ನು ಬೆಳ್ಳಿ ಮತ್ತು ಪ್ಲಾಟಿನಂ ಎರಡೂ ಜಾಗತಿಕ ಮಾರುಕಟ್ಟೆಗಳಲ್ಲಿ ಇಳಿಕೆಯತ್ತ ಮುಖಮಾಡಿದೆ. ಬೆಳ್ಳಿ ಶೇಕಡಾ 0.6ರಷ್ಟು ಕುಸಿದು 25.89 ಡಾಲರ್‌ಗೆ ತಲುಪಿದರೆ, ಪ್ಲಾಟಿನಂ ಶೇಕಡಾ 0.7ರಷ್ಟು ಇಳಿಕೆಯಾಗಿ 1,198.19 ಡಾಲರ್‌ಗೆ ತಲುಪಿದೆ.


Click it and Unblock the Notifications