Gold rate india: ಭಾರತದಲ್ಲಿ ಚಿನ್ನದ ಬೆಲೆ ಕುಸಿತ, ಆಗಸ್ಟ್ 3ರಂದು 18, 22k, 24k ಚಿನ್ನದ ದರ ತಿಳಿಯಿರಿ

ನವದೆಹಲಿ, ಆಗಸ್ಟ್‌ 3: ದರ ಕಡಿತ ಮತ್ತು ನಿರೀಕ್ಷೆಗಿಂತ ದುರ್ಬಲವಾದ ಯುಎಸ್‌ ಉದ್ಯೋಗಗಳ ದತ್ತಾಂಶಗಳ ನಡುವೆ ಸತತ 3 ದಿನಗಳ ಕಾಲ ಏರಿಕೆಯಾದ ನಂತರ ಭಾರತದಲ್ಲಿ ಚಿನ್ನದ ಬೆಲೆಗಳು ಶನಿವಾರ ಇಳಿಮುಖವಾಗಿವೆ.

ಭಾರತದಲ್ಲಿ ಆಗಸ್ಟ್‌ 3 ರಂದು 22ಕೆ ಚಿನ್ನದ ಬೆಲೆ 100 ರೂ.ನಷ್ಟು ಇಳಿಕೆಯಾಗಿ 10 ಗ್ರಾಂ ಚಿನ್ನದ ಬೆಲೆ 64,700 ರೂ.ಆಗಿದ್ದರೆ, 100 ಗ್ರಾಂನ 22 ಕ್ಯಾರೆಟ್ ಬೆಲೆಬಾಳುವ ಲೋಹದ ಬೆಲೆ 6,47,000 ರೂ. ಆಗಿದೆ. ದೇಶದಲ್ಲಿ ಇಂದು 24 ಕೆ ಚಿನ್ನದ ಬೆಲೆ 110 ರೂ.ನಷ್ಟು ಇಳಿಕೆಯಾಗಿ 10 ಗ್ರಾಂ ಗೆ 70,580 ರೂ. ಮತ್ತು 100 ಗ್ರಾಂ 24 ಕ್ಯಾರೆಟ್ ಹಳದಿ ಲೋಹದ ಬೆಲೆಗಳು 7,05,800 ರೂ. ಆಗಿದೆ. ಆಗಸ್ಟ್ 3 ರಂದು 10 ಗ್ರಾಂ 18 ಕ್ಯಾರೆಟ್ ಹಳದಿ ಲೋಹ 52,940 ರೂ.ಮತ್ತು 100 ಗ್ರಾಂ ಗೆ 800 ರೂ.ನಷ್ಟು ಕುಸಿದು 5,29,400 ರೂ.ಗೆ ತಲುಪಿದೆ.

ಭಾರತದಲ್ಲಿ ಚಿನ್ನದ ಬೆಲೆ ಕುಸಿತ, ಇಂದಿನ ದರ ತಿಳಿಯಿರಿ

ಇರಾನ್ ಮತ್ತು ಲೆಬನಾನ್‌ನಲ್ಲಿ ನಡೆದ ವಾಯು ದಾಳಿಯ ನಂತರ ಉನ್ನತ ಹಮಾಸ್ ಮತ್ತು ಹೆಜ್ಬೊಲ್ಲಾ ಅಧಿಕಾರಿಗಳನ್ನು ಹತ್ಯೆಗೈದ ನಂತರ ಹೆಚ್ಚುತ್ತಿರುವ ಮಧ್ಯಪ್ರಾಚ್ಯ ಉದ್ವಿಗ್ನತೆಯ ಪರಿಣಾಮವಾಗಿ ಹಳದಿ ಲೋಹದ ಬೆಲೆಗಳು ಸತತ 3 ದಿನಗಳ ಕಾಲ ಬೇಡಿಕೆಯ ನಡುವೆ ಹೆಚ್ಚಳವಾಗಿತ್ತು.

ಇಂದು ಸ್ಪಾಟ್ ಗೋಲ್ಡ್, ಸ್ಪಾಟ್ ಸಿಲ್ವರ್ ಬೆಲೆಗಳು:

1708 ಜಿಎಂಟಿನಂತೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 2,428.36 ಡಾಲರ್‌ಗೆ 0.7% ಇಳಿಕೆಯಾಗಿದೆ. ಯುಎಸ್‌ ಚಿನ್ನದ ಭವಿಷ್ಯವು 0.4% ಕುಸಿದು 2,471.50 ಡಾಲರ್‌ಗೆ ತಲುಪಿದೆ. ಏತನ್ಮಧ್ಯೆ, ಸ್ಪಾಟ್ ಸಿಲ್ವರ್ ಪ್ರತಿ ಔನ್ಸ್‌ಗೆ 0.7% ರಷ್ಟು ಕುಸಿದು 28.34 ರಾಲರ್‌, ಪ್ಲಾಟಿನಂ 0.2% ಜಿಗಿದು 960.60 ಡಾಲರ್‌ ಮತ್ತು ಪಲ್ಲಾಡಿಯಮ್ 2.02% ಕುಸಿದು 886.84 ಡಾಲರ್‌ಗೆ ತಲುಪಿದೆ.

ಭಾರತದಲ್ಲಿ ಇಂದು ಬೆಳ್ಳಿ ಬೆಲೆ:

ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಭಾರತದಲ್ಲಿ ಇಂದು 1 ಕೆಜಿ ಬೆಳ್ಳಿ ಬೆಲೆ 1,700 ರೂಪಾಯಿ ಇಳಿಕೆಯಾಗಿ 85,500 ರೂಪಾಯಿಗಳಿಗೆ ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ ಇಂದು 170 ರೂಪಾಯಿ ಇಳಿಕೆಯಾದ ನಂತರ 8,550 ರೂಪಾಯಿಗಳಿಗೆ ತಲುಪಿದೆ.

ಭಾರತದಲ್ಲಿ ಕಳೆದ 10 ದಿನಗಳಲ್ಲಿ 22 ಕೆ 10 ಗ್ರಾಂ ಚಿನ್ನದ ಧಾರಣೆ:

ಭಾರತದಲ್ಲಿ ಇಂದು ಚಿನ್ನದ ಬೆಲೆ 100 ರೂ.ನಷ್ಟು ಕುಸಿದಿದೆ. ಆಗಸ್ಟ್ 2 ರಂದು 300 ರೂ.ನಷ್ಟು ಏರಿಕೆಯಾಗಿದೆ. ಆಗಸ್ಟ್ 1 ರಂದು 500 ರೂ.ನಷ್ಟು ಹೆಚ್ಚಾಗಿದೆ. ಜುಲೈ 31 ರಂದು 800 ರೂ.ನಷ್ಟು ಏರಿಕೆಯಾಗಿದೆ. ಜುಲೈ 30 ರಂದು 200 ರೂ.ನಷ್ಟು ಕಡಿಮೆಯಾಗಿದೆ. ಜುಲೈ 29 ರಂದು 150 ರೂ.ನಷ್ಟು ಏರಿಕೆಯಾಗಿದೆ. ಜುಲೈ 28 ರಂದು ಸ್ಥಿರವಾಗಿತ್ತು. ಜುಲೈ 27 ರಂದು 250 ರೂ.ನಷ್ಟು ಏರಿಕೆಯಾಯಿತು. ಜುಲೈ 26 ರಂದು 1000 ರೂ.ನಷ್ಟು ಕುಸಿಯಿತು. ಜುಲೈ 25 ರಂದು 950 ರೂ.ನಷ್ಟು ತೀವ್ರವಾಗಿ ಕುಸಿಯಿತು ಮತ್ತು ಜುಲೈ 24 ರಂದು ಸ್ಥಿರವಾಗಿತ್ತು.

ಕಳೆದ 10-ದಿನಗಳಲ್ಲಿ 1 ಕೆಜಿ ಬೆಳ್ಳಿ ಬೆಲೆ:

ಭಾರತದಲ್ಲಿ ಬೆಳ್ಳಿ ಬೆಲೆ ಇಂದು 1700 ರೂ.ಗಳಷ್ಟು ತೀವ್ರವಾಗಿ ಕುಸಿದಿದೆ. ಆಗಸ್ಟ್ 2 ರಂದು 100 ರೂ.ಗಳಷ್ಟು ಏರಿಕೆಯಾಗಿದೆ, ಆಗಸ್ಟ್ 1 ರಂದು 600 ರೂ.ಗಳಷ್ಟು ಏರಿಕೆಯಾಗಿದೆ. ಜುಲೈ 31 ರಂದು 2000 ರೂ.ಗಳಷ್ಟು ಏರಿಕೆಯಾಗಿದೆ. ಜುಲೈ 30 ರಂದು ರೂ., ಜುಲೈ 29, ಜುಲೈ 27, ಮತ್ತು ಜುಲೈ 26 ರಂದು ಸ್ಥಿರವಾಗಿತ್ತು. ಜುಲೈ 25 ರಂದು 3000 ರೂ.ಗಳಷ್ಟು ತೀವ್ರ ಕುಸಿತವನ್ನು ಕಂಡಿತು ಮತ್ತು ಜುಲೈ 24 ರಂದು 500 ರೂ.ಗಳಷ್ಟು ಕುಸಿಯಿತು.

ರಾಯಿಟರ್ಸ್ ಗೆ ತಿಳಿಸಿರುವ ಹೇಳಿಕೆಯಲ್ಲಿ, "ಸೆಪ್ಟೆಂಬರ್ ಎಫ್‌ಒಎಂಸಿ ಸಭೆಯಲ್ಲಿ ಫೆಡ್‌ನಿಂದ 50-ಬೇಸಿಸ್-ಪಾಯಿಂಟ್ ಕಡಿತವಾಗಿ ಮಾರುಕಟ್ಟೆಯು ಇದೀಗ 70% ಕ್ಕಿಂತ ಉತ್ತಮವಾದ ಅವಕಾಶವನ್ನು ಹೊಂದಿದೆ" ಎಂದು ಕಿಟ್ಕೊ ಮೆಟಲ್ಸ್‌ನ ಹಿರಿಯ ಮಾರುಕಟ್ಟೆ ವಿಶ್ಲೇಷಕ ಜಿಮ್ ವೈಕಾಫ್ ಹೇಳಿದರು.

ಆಗಸ್ಟ್ 3 ರಂದು ಭಾರತದ 5 ಪ್ರಮುಖ ನಗರಗಳಲ್ಲಿ 1 ಗ್ರಾಂ 22ಕೆ ಚಿನ್ನದ ದರ:

  • ಚೆನ್ನೈನಲ್ಲಿ ಚಿನ್ನದ ಬೆಲೆ: 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ಚೆನ್ನೈನಲ್ಲಿ 6,450 ರೂ. ಆಗಿದೆ.
  • ಮುಂಬೈನಲ್ಲಿ ಚಿನ್ನದ ಬೆಲೆ: ಆಗಸ್ಟ್ 1 ರಂದು ಮುಂಬೈನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,470 ರೂ.
  • ದೆಹಲಿಯಲ್ಲಿ ಚಿನ್ನದ ಬೆಲೆ: ಆಗಸ್ಟ್ 31 ರಂದು ದೆಹಲಿಯಲ್ಲಿ 1 ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆ 6,485 ರೂ.
  • ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ: ಆಗಸ್ಟ್ 31, 2024 ರಂದು ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಹಳದಿ ಲೋಹದ 1 ಗ್ರಾಂ ಬೆಲೆ 6,470 ರೂ. ಆಗಿದೆ.
  • ಕೇರಳದಲ್ಲಿ ಚಿನ್ನದ ಬೆಲೆ: ಆಗಸ್ಟ್ 31 ರಂದು ಕೇರಳದಲ್ಲಿ 1 ಗ್ರಾಂ 22K ಚಿನ್ನದ ಬೆಲೆ 6,470 ರೂ. ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+